ದೇವನಹಳ್ಳಿ ಪುರಸಭೆಗೆ 5 ಸದಸ್ಯರನ್ನೊಳಗೊಂಡ ನೂತನ ನಾಮನಿರ್ದೇಶಕ ನೇಮಕ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ನಗರದ ಪುರಸಭೆಗೆ 5 ಜನ ಸದಸ್ಯರನ್ನು ನಾಮ ನಿರ್ದೇಶಿತ ಸದಸ್ಯರನಾಗಿ ಸರಕಾರದ ಅಧಿಕಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಆದೇಶ ಹೊರಡಿಸಿದೆ.ಪುರಸಭಾ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ವಿ.ಗೋಪಾಲಕೃಷ್ಣ, ಮುಖಂಡ ಕೋಡಿಮಂಚೇನಹಳ್ಳಿ ಕೆ.ಎ.ನಾಗೇಶ್, ಶಿಲ್ಪಕಲಾ ಶಾಲೆಯ ಹೆಚ್.ಮಧುಸೂದನ್, ಬಿಜೆಪಿ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಆರ್.ಪುನೀತ, ಮಂಜುಳ ಗುರುಸ್ವಾಮಿ ಪುರಸಭೆಗೆ ನೂತನ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕಗೊಂಡಿರುತ್ತಾರೆ. 

CHETAN KENDULI

ದೇವನಹಳ್ಳಿ ಪಟ್ಟಣದ ಪುರಸಭಾ ಕಚೇರಿಯಲ್ಲಿ ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ನೂತನ ನಾಮನಿರ್ದೇಶಿತರಿಗೆ ಅಧಿಕೃತ ಸೂಚನಾ ಪತ್ರವನ್ನು ನೀಡುವುದರ ಮೂಲಕ ಮಾತನಾಡಿದರು. ನಗರದ ಅಭಿವೃದ್ಧಿಗೆ ಪುರಸಭಾ ಸದಸ್ಯರನ್ನು ಒಳಗೊಂಡಂತೆ ಎಲ್ಲರೂ ಒಮ್ಮತದಿಂದ ಸಾಗಬೇಕು. ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ನಮ್ಮೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಿ, ಸದಾ ನಮ್ಮ ಸಹಕಾರ ಇರುತ್ತದೆ. ಪುರಸಭಾ ವ್ಯಾಪ್ತಿಯ ೨೩ ವಾರ್ಡುಗಳಲ್ಲಿ ಸಕ್ರಿಯವಾಗಿ ಜನರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಉತ್ತಮವಾಗಿ ಸೇವೆ ಸಲ್ಲಿಸಿಕೊಂಡು ಹೋಗುವಂತಾಗಲೀ ಎಂದು ಶುಭಕೋರಿದರು.ಪುರಸಭೆಗೆ ನೂತನವಾಗಿ ನಾಮನಿರ್ದೇಶಕರಾಗಿ ಆಯ್ಕೆಯಾದ ಸದಸ್ಯರುಗಳಿಗೆ ಮುಖಂಡರು ಅಭಿನಂದಿಸಿದರು. ಈ ವೇಳೆ ಬಿಜೆಪಿ ಶಾಸಕ ಆಕಾಂಕ್ಷಿ ಓಬದೇನಹಳ್ಳಿ ಮುನಿಯಪ್ಪ, ಮುಖಂಡರಾದ ಗಣೇಶ್‌ಬಾಬು, ವೆಂಕಟೇಶ್, ಗುರುಸ್ವಾಮಿ, ಪುನೀತ್ ರಾಮಕೃಷ್ಣ ಮತ್ತಿತರರು ಇದ್ದರು.

 

Be the first to comment

Leave a Reply

Your email address will not be published.


*