ರಾಜ್ಯ ಸುದ್ದಿಗಳು
ಭಟ್ಕಳ
ಸಮಾಜವನ್ನು ಸಂಘಟಿಸುವ ಉದ್ದೇಶ ಹಾಗೂ ಲೋಕ ಕಲ್ಯಾಣಾರ್ಥ ವಾಗಿ ರಾಜ್ಯಮಟ್ಟದ ನಾರಾಯಣಗುರು ಸಮಾವೇಶ ಹಾಗೂ ವಿಶ್ವಶಾಂತಿ ಯಾ ಗ ವನ್ನು ಜನವರಿ .9 ರಂದು ಸಾಗರದ ಈಡಿಗರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ್ ಹೇಳಿದರು.ಅವರು ಶಿರಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನಾಮಧಾರಿ, 26 ಬಿಲ್ಲವ ಸೇರಿದಂತೆ ಒಳಪಂಗಡಗಳ ಜನರನ್ನು ಸೇರಿಸಿ ಅವರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು, ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಧ್ವನಿಯಾಗುವ ಸಮಾವೇಶ ಇದಾಗಲಿದೆ. ಹಿಂದುಳಿದ ವರ್ಗಕ್ಕೆ ಸೇರಿದ 501 ಅರ್ಚಕರಿಂದ (ಶಾಂತಿಗಳು) ವಿಶ್ವಶಾಂತಿ ಯಾಗ ನಡೆ ಯಲಿದೆ’ ಎಂದರು‘ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ರಾಜಕೀಯ ನಾಯಕರು, ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಸಾಮಾಜಿಕ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದರು.
Be the first to comment