ಜಿಲ್ಲಾ ಸುದ್ದಿಗಳು
ಮಸ್ಕಿ
ಅಭಿನಂದನ್ ಸಂಸ್ಥೆಯು ಆರಂಭಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ 26 ನೇ ವಾರದ ಸೇವಾ ಕಾರ್ಯವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದನಗರವಾಡಿ ಮಸ್ಕಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಶಾಲೆಯ ಧ್ವಜಸ್ಥಂಭ, ಮೆಟ್ಟಿಲು ಹಾಗೂ ಗೇಟ್ ಗಳಿಗೆ ಬಣ್ಣವನ್ನು ಹಚ್ಚಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಬಾಲಸ್ವಾಮಿ ಹಂಪನಾಳ ರವರು ಅಭಿನಂದನ್ ಸಂಸ್ಥೆಯ ಈ ಸಂಡೇ ಫಾರ್ ಸೋಶಿಯಲ್ ವರ್ಕ್ ಸ್ವಚ್ಛ ಭಾರತದ ಕನಸಿಗೆ ಪೂರಕವಾಗಿ ನಡೆಯುತ್ತಿರುವುದು ಬಹಳ ಶ್ಲಾಘನೀಯ. ಹಾಗೂ ಈ ಅಭಿಯಾನವನ್ನು ಆರಂಭಿಸಿದ ಕೀರ್ತಿ ನಮ್ಮ ಮಸ್ಕಿಯ ಸಂಸ್ಥೆ ಎಂಬುದು ಇನ್ನೂ ವಿಶೇಷ ಹಾಗೂ ಮಸ್ಕಿಯನ್ನು ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿರುವ ಈ ಅಭಿನಂದನ್ ಒಳ್ಳೆಯದಾಗಲಿ, ಸದಾ ಯಶಸ್ಸು ಕೀರ್ತಿಗಳು ಲಭಿಸಲಿ ಎಂದು ಹಾಗೂ ನಮ್ಮ ಶಾಲೆಯಲ್ಲಿ ಈ ವಾರದ ಸೇವಾ ಕಾರ್ಯವನ್ನು ಕೈಗೊಂಡ ಎಲ್ಲಾ ಸ್ವಯಂ ಸೇವಕರಿಗೆ ಶಾಲೆಯ ಪರವಾಗಿ ಧನ್ಯವಾದಗಳು ತಿಳಿಸಿದರು.
ಈ ಸೇವಾ ಕಾರ್ಯದಲ್ಲಿ ಪುರಸಭಾ ಸದಸ್ಯರಾದ ಗೀತಾ ಶಿವರಾಜ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಬಸವರಾಜ ಬನ್ನಿಗಿಡ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ಕಿಶೋರ್, ಈರೇಶ್ ದೇವರಮನಿ ಸಿಂಧನೂರು, ಶ್ರೀಶೈಲ ಮತ್ತಿರರು ಭಾಗಿಯಾಗಿದ್ದರು.
Be the first to comment