“ಟಿಪ್ಪು ಜಯಂತಿ” ಆಚರಣೆ ಪೂರ್ವಭಾವಿ ಸಭೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳು ಮತ್ತು ತಾಲೂಕಿನ ಮುಸ್ಲಿಂ ಮುಖಂಡರಿಂದ ಹಮ್ಮಿಕೊಂಡಿದ್ದ ಟಿಪ್ಪುಜಯಂತಿ ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕ ಜನ ಸಂಪರ್ಕ ಕೇಂದ್ರದ ವ್ಯವಸ್ಥಾಪಕ ಸಹದೇಶ್ ಮಾತನಾಡಿದರು.ದೇವನಹಳ್ಳಿಯಲ್ಲಿ ಜನಿಸಿದ ಟಿಪ್ಪುಸುಲ್ತಾನ್ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಒಬ್ಬ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿ ಕನ್ನಡ ಭಾಷೆಗೆ ತನ್ನದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ. ರೇಷ್ಮೆಯನ್ನು ಪರಿಚಯಿಸಿದ ಮೊದಲ ಕನ್ನಡಿಗ, ಸಮಾಜದಲ್ಲಿ ದಲಿತ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯವನ್ನು ಸಹಿಸದೆ ಅವರಿಗೆ ಬೆನ್ನೆಲುಬಾಗಿ ನಿಂತು ರಕ್ಷಣೆ ಮಾಡಿದ ಹೋರಾಟಗಾರ ಇವರಿಗೆ ಗೌರವ ಸಲ್ಲಿಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ ಎಂದರು. 

CHETAN KENDULI

ವಕೀಲ ಸಿದ್ಧಾರ್ಥ ಮಾತನಾಡಿ, ಟಿಪ್ಪು ಸುಲ್ತಾನ್ ಜನಿಸಿದ ಪುಣ್ಯ ಭೂಮಿ ಇದಾಗಿದೆ. ಈಗಲೂ ಸಹ ಇವರ ಜನ್ಮಸ್ಥಳ ನೋಡಬಹುದು. ಟಿಪ್ಪುಸುಲ್ತಾನ ಮಾನ್ಯ ಜಾಗವನ್ನು ದೇವನಹಳ್ಳಿ ನಗರವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು. ಅವರ ಜಮೀನನ್ನು ರಕ್ಷಣೆ ಮಾಡಿ, ಟಿಪ್ಪುನಗರವೆಂದೇ ಅದನ್ನು ಹೆಸರು ಗುರ್ತಿಸಿ ರಕ್ಷಿಸಬೇಕು. ಟಿಪ್ಪು ಯಾವ ಒಂದು ಸಮುದಾಯಕ್ಕೆ ಸೇರಿಲ್ಲ. ಎಲ್ಲಾ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಇಂತಹ ಮಹಾನ್ ಹೋರಾಟಗಾರ ನಮ್ಮ ದೇವನಹಳ್ಳಿಯಲ್ಲಿ ಜನಿಸಿ, ಮೈಸೂರು ಪಾರಂಪರ್‍ಯವನ್ನು ಉಳಿಸಿದ ಸಲುವಾಗಿ ಮೈಸೂರು ಹುಲಿಯೆಂದೆ ವಿರೋಧಿಸುತ್ತಿದ್ದ ಬ್ರಿಟೀಷರಿಂದಲೇ ಬಿರುದು ಪಡೆದಂತಹ ಕನ್ನಡದ ಹೆಮ್ಮೆಯ ಪುತ್ರ. ಕರ್ನಾಟಕದ ಮಹಾನೀಯರ ಹಾದಿಯಾಗಿ ಇವರು ಸಹ ಇದ್ದಾರೆ. ಸರಕಾರ ಕೇವಲ ಜಾತಿ-ಧರ್ಮ ಆಡಳಿತ ನೀಡುತ್ತಿದೆ. ದೇಶದ ವಿರೋಧಿಯಾಗಿದ್ದ ಬ್ರಿಟೀಷರನ್ನು ಸದೆಬಡೆದ ಮಹಾನ್ ತ್ಯಾಗಿ ಮತ್ತು ದೇಶ ಪ್ರೇಮಿ ಟಿಪ್ಪುಸುಲ್ತಾನ್ ಅವರ ಜನ್ಮದಿನವನ್ನು ಮಾಡುವುದು ಈ ಮಣ್ಣಿನ ನಾಗರೀಕರ ಹೊಣೆಯಾಗಿದೆ. ಕೆಲವರು ಟಿಪ್ಪುಸುಲ್ತಾನ ಹಾಗೇ ಹೀಗೆ ಎಂದು ಬಿಂಬಿಸುತ್ತಾರೆ. ವಾಸ್ತವದಲ್ಲಿ ಅವೆಲ್ಲವೂ ಸುಳ್ಳಿನ ಕಂತೆಯಾಗಿದೆ. ಇದನ್ನು ವಿದ್ಯಾವಂತರಾದ ನಾವುಗಳು ಖಂಡಿಸಬೇಕು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಟಿಪ್ಪುಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಇದೇ ನ.೮ರಂದು ಮತ್ತೇ ಮತ್ತೊಂದು ಸಭೆಯನ್ನು ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವ ಬಗ್ಗೆ ತೀರ್ಮಾನಿಸಿದರು. ಈ ವೇಳೆಯಲ್ಲಿ ಶಿಡ್ಲಘಟ್ಟದ ಯಾಕೂಬ್, ಭುವನಹಳ್ಳಿ ಆನಂದ್, ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*