ಭಟ್ಕಳ ತಾಲೂಕ ಪತ್ರಕರ್ತರ ಸಂಘದ ಸಹಬಾಗಿತ್ವದಲ್ಲಿ ವನ ಮಹೊತ್ಸವ ಕಾರ್ಯಕ್ರಮ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ

CHETAN KENDULI

ಭಟ್ಕಳ- ಭಟ್ಕಳ ತಾಲೂಕ ಪತ್ರಕರ್ತರ ಸಂಘ ಹಾಗು ಸಿದ್ದಾರ್ಥ ಏಜ್ಯುಕೇಷನ್ ಟ್ರಸ್ಟ ಅವರ ಸಹಬಾಗಿತ್ವದಲ್ಲಿ ಪತ್ರಿಕಾ ದಿನಾಚರಣೆಯ ಹಿನ್ನೆಲೆಯಲ್ಲಿ ರವಿವಾರ ಭಟ್ಕಳ ಸಿದ್ದಾರ್ಥ ಕಾಲೇಜು ಮೈದಾನದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಭಟ್ಕಳ ಹಿರಿಯ ಪತ್ರಕರ್ತರು ಹಾಗು ಭಟ್ಕಳ ಪತ್ರಕರ್ತ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ‌ ದಾಸನ ಕುಡಿಕೆ ಅವರು ಮಾತನಾಡಿ ನಾವು ಪ್ರತಿ ವರ್ಷ ಪತ್ರಿಕಾ ದಿನಾಚರಣೆಯ ಕಾರಣ ವನ ಮಹೊತ್ಸವದಂತ ಸಮಾಜ ಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೆ ಬಂದಿದ್ದೆವೆ ಇತ್ತಿಚೆಗೆ ನಾವು ಪ್ರಕ್ರತಿಯ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯ ಹಿಂದೆಲ್ಲಾ ಬುದ್ದಿ ಜೀವಿಗಳು ಪರಿಸರ ಕಾಳಜಿ ವಹಿಸುವಂತೆ ಹೆಳುತ್ತಲೆ ಬರುತ್ತಿದ್ದರು ಮುಂದೆ ನೀರನ್ನು ಹಣ ಕೊಟ್ಡು ಪಡೆದುಕೊಳ್ಳುವಂತ ಪ್ರಸಂಗ ಬರುತ್ತದೆ ನಾವುಗಳ ಎಚ್ಚರಗೊಳ್ಳೊಣ ಎಂಬ ಕರೆಯನ್ನು ನೀಡಿದ್ದರು ಆದರೆ ನಾವು ನಿರ್ಲಕ್ಷ ಮಾಡಿದ ಹಿನ್ನೆಲೆಯಲ್ಲಿ ನಾವು ಅದೆ ಪ್ರಸಂಗವನ್ನು ಎದುರಿಸುತ್ತಿದ್ದೆವೆ ಹಾಗೆ ಈಗಲೂ ಕೂಡ ಪರಿಸರ ರಕ್ಷಿಸಿ ಇಲ್ಲವಾದಲ್ಲಿ ಮುಂದೆ ನಾವು ಉಸಿರಾಡಲು ಬೇಕಾದ ಪ್ರಾಣ ವಾಯು ಆಮ್ಲಜನಕವನ್ನು ಹಣ ಕೊಟ್ಟು ಕರಿದಿಸುವ ಪ್ರಸಂಗ ಎದುರಾದರು ಆಶ್ಚರ್ಯಪಡಬೇಕಾದ ಅಗತ್ಯ ಇಲ್ಲ ಈಗಲೆ ನಾವು ಪರಿಸರದ ರಕ್ಷಣೆಯತ್ತ ಮುಖ ಮಾಡೋಣ ಎಂದು ಕರೆ ಕೊಟ್ಟರು.


ಈ ಸಂದರ್ಬದಲ್ಲಿ ಸಿದ್ದಾರ್ಥ ಕಾಲೇಜಿನ ಪ್ರಿನ್ಸಿಪಾಲರಾದ ಅರ್ಚನಾ ನಾಯ್ಕ ಮಾತನಾಡಿ ಇಂದು ಪತ್ರಕರ್ತರೊಂದಿಗೆ ನಾವು ವನ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ನಮ್ಮ ಸುಯೋಗವೇ ಸರಿ ಆದ್ದರಿಂದ ಹಿರಿಯರು ಹೇಳಿದಂತೆ ನಾವು ಪರಿಸರ ರಕ್ಷಣೆಯತ್ತ ಮುಖ ಮಾಡುವುದು ಅನಿವಾರ್ಯವಾಗಿರುತ್ತದೆ ನಾವೆಲ್ಲರು ಸೇರಿ ಪರಿಸರ ರಕ್ಷಣೆಗೆ ಪಣತೊಡೊಣ ಎಂದು ಹೇಳಿದರು.

ಈ ಸಂದರ್ಬದಲ್ಲಿ ಸಿದ್ದಾರ್ಥ ಕಾಲೇಜು ಲೆಕ್ಚರರ್ ಶ್ರೀನಿವಾಸ , ಆಶಿಯಾ ಆಸ್ಪತ್ರೆಯ ಮೆನೇಜಿಂಗ್ ಡೈರೆಕ್ಟರ್ ಜಿಯಾ ,ಎಮ್ ಕೆ ನಾಯ್ಕ , ಕರ್ನಾಟಕ ಜರ್ನಲಿಷ್ಟ ಅಸೊಶಿಯೇಷನ್ , ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ, ಸಂಘದ ಕಾರ್ಯದರ್ಶಿ ಉಲ್ಲಾಸ್ ಶಾನಬಾಗ್, ಸದಸ್ಯರಾದ ಶಂಕರ್ ನಾಯ್ಕ ವಸಂತ ದೇವಾಡಿಗ, ವಿಷ್ಣು ದೇವಾಡಿಗ, ರಾಮಚಂದ್ರ ಕಿಣಿ, ನಸಿಮುಲ್ಲಾ ಗಣಿ, ಜಾವೆದ್ , ಹಾಗು ಅರ್ಜುನ್ ಮಲ್ಯ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*