ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಟಾಫ್ ನರ್ಸ್ ಹುದ್ದೆ ಖಾಲಿ ಇದ್ದು, ನರ್ಸ್ ಹುದ್ದೆಯನ್ನು ತುಂಬಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕಾರಹಳ್ಳಿ ಪಿಎಚ್‌ಸಿಯಲ್ಲಿ ಪ್ರಸ್ತುತ ಇಬ್ಬರೂ ಮಾತ್ರ ಸಿಬ್ಬಂದಿಗಳಿದ್ದು, ಒಬ್ಬರು ವೈದ್ಯರು ಮತ್ತೊಬ್ಬರು ಲ್ಯಾಬ್‌ಟೆಕ್ನಿಷಿಯನ್ ಇದ್ದಾರೆ. ಕಾರಹಳ್ಳಿ ಪಿಎಚ್‌ಸಿ ವ್ಯಾಪ್ತಿಯಲ್ಲಿ ೨೦ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುತ್ತದೆ. ಹೀಗಿರುವಾಗ ಪಿಎಚ್‌ಸಿಯಲ್ಲಿ ಇರುವ ಲ್ಯಾಬ್‌ಟೆಕ್ನಿಷಿಯನ್ ಮತ್ತು ವೈದ್ಯರ ಮೇಲೆ ಹೆಚ್ಚಿನ ಕೆಲಸದ ಒತ್ತಡವಿದ್ದು, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಹೊರ ರೋಗಿಗಳು ಕಾಯುವ ಪರಿಸ್ಥಿತಿ ಇದೆ.
ಗ್ರಾಮಕ್ಕೆ ಹೋಗುವ ಸ್ಟಾಫ್ ೪ ಜನರು ಇದ್ದು, ಇವರು ಹೊರಗಡೆ ಗ್ರಾಮಗಳ ಮೇಲೆ ಹೋಗುತ್ತಾರೆ. ಸದ್ಯಕ್ಕೆ ಕಾರಹಳ್ಳಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೋವಿಡ್ ಆರ್‌ಟಿಪಿಸಿಆರ್ ಟೆಸ್ಟ್, ಕಚೇರಿ ಕೆಲಸ, ಇತರೆ ಕೆಲಸಗಳನ್ನು ಸಕಾಲದಲ್ಲಿ ಮಾಡಲು ಒಬ್ಬ ಸ್ಟಾಫ್ ನರ್ಸ್ ಹುದ್ದೆ ತುಂಬಿಸಿದರೆ ಹೆಚ್ಚು ಸಹಕಾರಿಯಾಗುತ್ತದೆ. ತಾಲೂಕಿನ ಬೂದಿಗೆರೆ, ವಿಶ್ವನಾಥಪುರ ಪಿಎಚ್‌ಸಿಗಳಲ್ಲಿ ಸ್ಟಾಫ್‌ನರ್ಸ್‌ಗಳು ಇದ್ದಾರೆ. ಆದರೆ ಕಾರಹಳ್ಳಿ ಪಿಎಚ್‌ಸಿಯಲ್ಲಿ ಮಾತ್ರ ಸ್ಟಾಫ್ ನರ್ಸ್ ಸಿಬ್ಬಂದಿ ನೇಮಿಸಲು ತಾಲೂಕು ಆರೋಗ್ಯಾಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬ ಆರೋಪವೂ ಸಹ ಇದೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನಹರಿಸಿ, ಸ್ಟಾಫ್ ನರ್ಸ್ ಹುದ್ದೆಗೆ ನೇಮಕಾತಿ ಮಾಡಿದರೆ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Be the first to comment