ಭಟ್ಕಳದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಪಿಂಚಣಿ ಅದಾಲತ್

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಉದ್ದೇಶದಿಂದ ಭಟ್ಕಳ ಸೂಸಗಡಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಮಂಗಳವಾರದAದು ಇಲ್ಲಿನ ತಹಸೀಲ್ದಾರ ಕಛೇರಿಯಲ್ಲಿ ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ನಡೆಯಿತು.

CHETAN KENDULI

ಸಭೆಯಲ್ಲಿ ಮಾತನಾಡಿದ ತಹಶಿಲ್ದಾರರ ರವಿಚಂದ್ರನ್ ಸರಕಾರದಿಂದ ಜನರಿಗೆ ಬರುವ ಪಿಂಚಣಿ ಸಾಮಾನ್ಯ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಅದಾಲತ ನಡೆಸುತ್ತಿದ್ದು,ಜನರು ಕಛೇರಿ ತಿರುಗಾಡುವ ಬದಲು ಅದಾಲತನಲ್ಲಿ ಪಾಲ್ಗೊಂಡು ಅರ್ಹ ದಾಖಲಾತಿ ನೀಡಿದ್ದಲ್ಲಿ ಒಂದು ದಿನದಲ್ಲಿ ಅವರಿಗೆ ಆದೇಶ ಪ್ರತಿ ನೀಡುವ ವ್ಯವಸ್ಥೆ ಇದರಿಂದಾಗಲಿದೆ.

ಇನ್ನೂ ಸರ್ಕಾರದಿಂದ ಪಿಂಚಣೆ ಹಣವನ್ನು ಹೆಚ್ಚಳ ಮಾಡಿದ್ದು ಸಾರ್ವಜನಿಕರು ಕಂದಾಯ ಇಲಾಖೆಯಿಂದ ಸರಕಾರದಿಂದ ದೊರೆ ಯುವ ವಿಧವ ವೇತನ,ವೃದ್ಯಾಪ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ವೇತನಗಳನ್ನು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಒಟ್ಟು ೩೫ ಮಂದಿ ಪಿಂಚಣಿ ಅರ್ಹ ಫಲಾನುಭವಿಗಳಿಗೆ ಮಂಜುರಾತಿ ಪತ್ರಗಳನ್ನು ತಹಶಿಲ್ದಾರ ವಿತರಿಸಿದರು.ಹಾಗೂ ವಿವಿಧ ಪಿಂಚಣೆಗೆ ಸಂಬAಧಿಸಿದ ಸುಮಾರು ೨೫ ಕ್ಕೂ ಅರ್ಜಿಯನ್ನು ಸಾರ್ವಜನಿಕರು ಸಲ್ಲಿಸಿದರು. ಈ ಸಂಧರ್ಭದಲ್ಲಿ ಶಿರಸ್ತೇದಾರಾದ ವಿಜಯಲಕ್ಷ್ಮಿಮಣಿ, ಪ್ರಭಾರಿ ಕಂದಾಯ ನಿರೀಕ್ಷಕ ಕೆ.ಶಂಭು,ತಹಸೀಲ್ದಾರ್ ಕಛೇರಿ ಕ್ಲರ್ಕ ವಿಶ್ವನಾಥ ಕರಡಿ ಮತ್ತು ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*