ಜಿಲ್ಲಾ ಸುದ್ದಿಗಳು
ಬೈಂದೂರ
ನಿನ್ನೆ ಮುಂಜಾನೆ ಶಿರೂರು ಮಾರ್ಕೆಟ್ ಅಲ್ಲಿರುವ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ಸುಪ್ರಭಾತ ಹಾಕಿರೋದನ್ನು ವಿರೋದಿಸಿ ಅಲ್ಲಿನ ಸ್ಥಳೀಯ ಮುಸ್ಲಿಂ ಕೋಮಿನ ಯುವಕ ಬೈಂದೂರು ಆರಕ್ಷಕ ಠಾಣೆಗೆ ಕರೆ ಮಾಡಿ ಇಲ್ಲಿ ದೇವಸ್ಥಾನದಲ್ಲಿ ಮೈಕ ಹಾಕಿ ನಮಗೆ ತೊಂದ್ರೆ ಕೊಡುತ್ತಾರೆ ಅಂತ ಕರೆ ಮಾಡಿ ಕಂಪ್ಲೇಂಟ್ ಮಾಡಿರುತ್ತಾನೆ..
ಆರಕ್ಷಕರು ಮುಂಜಾನೆ ಆ ದೇವಸ್ಥಾನಕ್ಕೆ ತೆರಳಿ ಮೈಕ್ ತೆರವುಗೊಳಿಸಿ ಎಂದು ಅಲ್ಲಿನ ಅರ್ಚ್ಚಕರಿಗೆ ತಿಳಿಸಿ ಬೈಂದೂರು ಆರಕ್ಷಕ ಠಾಣೆಗೆ ಬರಬೇಕು ಎಂದು ಹೇಳಿರುತ್ತಾರೆ…ಇದು ಬೈಂದೂರು ವಿಶ್ವ ಹಿಂದೂ ಪರಿಷತ್ತಿನ ಭಜರಂಗದಳ ಸಂಚಾಲಕರು ಆದ ಸುಧಾಕರ್ ನೆಲ್ಯಾಡಿ ಅವರ ಗಮನಕ್ಕೆ ಬಂದಿರುತ್ತದೆ. ನಿನ್ನೆ ಮದ್ಯಾಹ್ನ 3 ಗಂಟೆಗೆ ತಮ್ಮ ಸಂಘಟನೆಯ ಕಾರ್ಯ ಕರ್ತರೊಂದಿಗೆ ಆರಕ್ಷಕ ಠಾಣೆಗೆ ಹೋಗಿ ವಿಷಯದ ಬಗ್ಗೆ ಅಲ್ಲಿನ ಪಿ.ಎಸ್.ಐ ಪವನ್ ನಾಯ್ಕ ಅವರಲ್ಲಿ ನ್ಯಾಯ ಒದಗಿಸಿ ಕೊಡುವಂತೆ ಮನವಿ ಸಲ್ಲಿಸಿದರು..
ವಿಷಯದ ಬಗ್ಗೆ ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹೇಳಿರುತ್ತಾರೆ..ಪವನ್ ನಾಯ್ಕ ಅವರು ನ್ಯಾಯ ಒದಗಿಸುವ ಮತ್ತು ಅನಾಮಿಕ ಕರೆ ಮಾಡಿದವನನ್ನು ಠಾಣೆಗೆ ಕರೆಯಿಸಿ ವಿಚಾರಿಸುವ ವಾಗ್ದಾನ ನೀಡಿರುತ್ತಾರೆ.
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅವರು ಮುಂಚೂಣಿಯಲ್ಲಿ ಇದ್ದು ಸಮಸ್ಯೆಯ ಬಗ್ಗೆ ಮತ್ತು ಆಗುವ ಅನಾಹುತದ ಬಗ್ಗೆ ನಮ್ಮ ಮಾನ್ಯ ಪಿ.ಎಸ್.ಐ ಪವನ್ ನಾಯ್ಕ ಅವರಿಗೆ ವಿವರಣೆ ನೀಡಿದರು.
Be the first to comment