ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ಕಛೇರಿಯನ್ನು ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ .

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಮುಗ್ವಾದ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ಕಛೇರಿಯನ್ನು ಶಾಸಕರಾದ ದಿನಕರ ಶೆಟ್ಟಿಯವರು ಉದ್ಘಾಟಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿಯವರು ತಾಲೂಕಿನ ಹಾಗು ನೆರೆ ತಾಲೂಕಿನ ಸಂಘಗಳು ನಷ್ಟದಿಂದ ಕೂಡಿದೆ. ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಮತ್ತು ಕೆ.ಡಿ.ಸಿ.ಸಿ ಬ್ಯಾಂಕ್ನವರು ಈ ಎಲ್ಲಾ ಸಹಕಾರಿ ಸಂಘದ ವ್ಯವಹಾರ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಗಮನ ಕೊಡಬೇಕಿದೆ.

CHETAN KENDULI

ಸಂಘದ ಷೇರುದಾರರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು. ನಾನು ಯಾವತ್ತೂ ಸಹಕಾರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಸಹಕಾರಿ ಕ್ಷೇತ್ರದ ರಾಜಕಾರಣದಿಂದಲೂ ದೂರವೇ ಇದ್ದೇನೆ ನೂತನ ಕಛೇರಿ ಹೊಂದಿದ ಮುಗ್ವಾ ವಿ.ಎಸ್. ಎಸ್ ಬ್ಯಾಂಕ್ ಇನ್ನೂ ಹೆಚ್ಚೆಚ್ಚು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ನ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕ, ಮುಗ್ವಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಿ ಕೃಷ್ಣ ಅಂಬಿಗ, ಕೆ.ಡಿ.ಸಿ.ಸಿ ಬ್ಯಾಂಕ್ನ ಎಮ್.ಡಿ.ಆರ್.ಜಿ ಭಾಗವತ, ಎಸ್.ಆರ್.ಎಲ್ ಸಮೂಹ ಸಂಸ್ಥೆಯ ವೆಂಕಟರಮಣ ಹೆಗಡೆ ಕವಲಕ್ಕಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ನಾಗಭೂಷಣ ಚಂದ್ರಶೇಖರ , ಮಗ್ವಾ ವಿ.ಎಸ್.ಎಸ್ ಬ್ಯಾಂಕ್ನ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಗಡೆ , ಎಮ್.ಎಸ್.ಹೆಗಡೆ ಕಣ್ಣಿ , ಆಡಳಿತ ಮಂಡಳಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಸಂಘದ ಷೇರುದಾರರು ಉಪಸ್ತಿತರಿದ್ದರು.

Be the first to comment

Leave a Reply

Your email address will not be published.


*