ಜಿಲ್ಲಾ ಸುದ್ದಿಗಳು
ಭಟ್ಕಳ:
ಹಲವಾರು ದೇಶ ಪ್ರೇಮಿಗಳ ತ್ಯಾಗ-ಬಲಿದಾನದ ದ್ಯೋತಕವಾದ ಭಾರತ ಸ್ವಾತಂತ್ರ್ಯಗೊಂಡು ನಾವೆಲ್ಲರೂ ಸ್ವತಂತ್ರವಾಗಿ ಬದುಕು ನಡೆಸುವಂತೆ ಆಗಿದೆ. ಭಾರತ ದೇಶದಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿದರು.
ಭಟ್ಕಳ ತಾಲೂಕಿನ ಸರ್ಕಾರಿ ವೈ.ಎಂ.ಎಸ್.ಎ ಕ್ರೀಡಾಂಗಣದ ಆವರಣದಲ್ಲಿ ನಡೆದ ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಖಂಡ ಭಾರತ ದೇಶವು ಹಲವು ಧರ್ಮಗಳ ಪ್ರಜಾ ಪ್ರಭುತ್ವ ರಾಷ್ಟ್ರವಾಗಿದೆ. ನಮ್ಮ ಭಾರತ ನಮಗೆ ಹೆಮ್ಮೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹಲವರನ್ನು ಸ್ಮರಿಸುವ ದಿನವಾಗಿದೆ. ಇಂತಹ ಸುಸಂದರ್ಭದಲ್ಲಿ ಇಂದಿನ ಯುವ ಪೀಳಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ದೇಶ ಪ್ರೇಮದ ಕಿಚ್ಚನ್ನು ತುಂಬಬೇಕು. ಗಡಿಕಾಯುವ ಸೈನಿಕನಂತೆ ನಮ್ಮ ಮಕ್ಕಳನ್ನು ಬೆಳೆಸಬೇಕು ಇದು ನಾವು ದೇಶಕ್ಕೆ ನೀಡುವ ಕೊಡುಗೆ ಎಂದು ಭಾವಿಸಬೇಕು ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಶಾಸಕರು ಭಟ್ಕಳ್ ತಂಜಿಮ್ ಸಂಸ್ಥೆ ಕೋವಿಡ್ ಮಹಾಮಾರಿ ಸಮಯದಲ್ಲಿ ಮಾಡಿದ ಸಮಾಜಮುಖಿ ಕಾರ್ಯವನ್ನು ಕೊಂಡಾಡಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಹಾಯಕ ಆಯುಕ್ತೆ ಮಮತದೇವಿಯವರು ಕೋವಿಡ್ ಮಹಾಮಾರಿಯಿಂದಾಗಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶ ಸ್ವತಂತ್ರಗೊಂಡಾಗಿನಿಂದಲೂ ವರ್ಷ ಕಳೆದಂತೆ ನಮ್ಮ ರಾಷ್ಟ್ರಧ್ವಜ ಮುಗಿಲು ಚುಂಬಿಸುತ್ತಿರುವುದು ನಮ್ಮೆಲ್ಲರ ಕೀರ್ತಿ ಪತಾಕೆ ಹಾರುತಿದೆ ಎಂದರು.ಇದೆ ವೇಳೆ ಅವರು ಭಟ್ಕಳ ತಂಜಿಮ್ ಸಂಸ್ಥೆ ಸಹಕಾರವನ್ನು ಹೊಗಳಿದರು. ಕೋವಿಡ್ ಸಮಯದಲ್ಲಿ ಭಟ್ಕಳ ತಂಜಿಮ್ ಸಂಸ್ಥೆ ಮಾಡಿದ ಕಾರ್ಯವನ್ನು ಕೊಂಡಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿಚಂದ್ರ, ಡಿ.ಎಸ್.ಪಿ ಬಿಳಿಯಪ್ಪ, ತಾಲೂಕ ಪಂಚಾಯತ್ ಕಾರ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ , ಬಿ.ಈ.ಓ ದೇವಿದಾಸ್ ಮೊಗೇರ್, ಪುರ ಸಭೆ ಅಧ್ಯಕ್ಷ ಪ್ರವೇಜ್ ಕಾಶಿಮ್, ಪುರಸಭೆ ಮುಖ್ಯಾಧಿಕಾರಿ ರಾಧಿಕಾ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ
ವೆರ್ಣೇಕರ್ ಮುಂತಾದವರು ಉಪಸ್ಥಿತರಿದ್ದರು.
Be the first to comment