ಸೋಲೂರಿನಲ್ಲಿ ವಿಜಯನಗರ ಕಾಲದ ಸ್ಮೃತಿ ಶಿಲ್ಪ (ಸ್ಮಾರಕ) ಪತ್ತೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ದೇವನಹಳ್ಳಿ ತಾಲೂಕಿನ ಸೋಲೂರು ಗ್ರಾಮದ ಕೆರೆಯಂಗಳದಲ್ಲಿ ವಿಜಯನಗರ ಕಾಲದ ಸ್ಮೃತಿ ಶಿಲ್ಪ (ಸ್ಮಾರಕ) ಪತ್ತೆಯಾಗಿದ್ದು, ಸುಮಾರು 14-15ನೇ ಶತಮಾನದ್ದಾಗಿದ್ದು, ವಿಜಯನಗರ ಕಾಲದ ಅರಸರ ಸ್ಮೃತಿ ಶಿಲ್ಪ ಸ್ಮಾರಕ ಪತ್ತೆಯಾಗಿದೆ. ಇದರಲ್ಲಿ ವೀರಗಲ್ಲಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ, ಇದು ಕೆರೆ-ಕಟ್ಟೆ, ಗುಡಿ-ಗೋಪುರಗಳನ್ನು ಕಟ್ಟಿರುವುದರ ನೆನಪಿಗಾಗಿ ಹಾಕಿರುವ ಅಪರೂಪದ ಸ್ಮೃತಿ ಶಿಲ್ಪ ಇದಾಗಿದೆ ಎಂದು ಸಾಹಿತಿ ಬಿಟ್ಟಸಂದ್ರ ಗುರುಸಿದ್ಧಯ್ಯ.ಬಿ.ಜಿ ತಿಳಿಸಿದರು.

CHETAN KENDULI

ದೇವನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅರಸರು ಆಳ್ವಿಕೆ ಮಾಡಿರುವ ಹಲವು ಕುರುಹುಗಳು ಇಂದಿಗೂ ದೊರೆಯುತ್ತಿರುವುದು ದೇವನಹಳ್ಳಿ ತಾಲೂಕಿನ ಇತಿಹಾಸವನ್ನು ಸಾರುವಂತಿದೆ. ದೊರೆತಿರುವ ಹಲವು ವೀರಗಲ್ಲು, ಮಾಸ್ತಿಗಲ್ಲು, ಶಾಸನಗಳು, ಶಿಲ್ಪ ಸ್ಮಾರಗಳು ಇತ್ಯಾದಿ ಕೆಲವು ಪ್ರಕಟಿತಗೊಂಡಿದ್ದು, ಇನ್ನುಳಿದ ಕೆಲವು ಭೂಮಿಯಲ್ಲಿ ಹುದುಗಿದ್ದು, ಮತ್ತೇ ಕೆಲವು ಅಪ್ರಕಟಿತವಾಗಿವೆ ಎಂದು ಹೇಳಿದರು. ಸುಮಾರು ವರ್ಷಗಳಿಂದ ಇಲ್ಲಿಯೇ ಇರುವ ಈ ಶಿಲ್ಪವನ್ನು ಇಂದಿಗೂ ಸಹ ಗ್ರಾಮದಲ್ಲಿ ಹಲವಾರು ಪೂಜೆ ಮಾಡುತ್ತಾರೆ ಎಂದು ಸೋಲೂರು ಗ್ರಾಮದ ನವೀನ್ ಹೇಳುತ್ತಾರೆ. 

Be the first to comment

Leave a Reply

Your email address will not be published.


*