ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ತಾಲೂಕಿನ ವಿಜಯಪುರ ಟೌನ್ ರಸ್ತೆಯಲ್ಲಿರುವ ಅಂಧರ ಆಶ್ರಮದಲ್ಲಿ ಅಂಧ ಮಕ್ಕಳಿಗೆ ಒಪ್ಪತ್ತಿನ ಊಟವನ್ನು ಸಮಾಜ ಸೇವಕ ಮತ್ತು ಜೇಸಿಐ ಚಪ್ಪರಕಲ್ಲು ಚಂದನ ಘಟಕ ಉಪಾಧ್ಯಕ್ಷ ಶಿವಾಜಿ ಗೌಡ ಉಣಬಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಕಣ್ಣು ಕಾಣಿಸಿದರೂ ಕೆಲವೊಂದು ಬಾರಿ ಕಣ್ಣಿಗೆ ಪರದೆ ಹಾಕಿಕೊಂಡಿರುತ್ತೇವೆ. ಸುತ್ತಮುತ್ತಲಿನಲ್ಲಿನ ಜನರು ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವುದನ್ನು ನೋಡಿಯೂ ನೋಡದಂತೆ ಇರುವ ಸಮಾಜದಲ್ಲಿ ನಮ್ಮ ಕೈಲಾದ ಸಹಾಯವನ್ನು ಇಂತಹ ಆಶ್ರಮಗಳಿಗೆ ನೀಡಿದರೆ, ಅಲ್ಲಿನ ಹಲವಾರು ಮಕ್ಕಳಿಗೆ ಸಹಾಯವಾಗುತ್ತದೆ. ಪ್ರತಿಯೊಬ್ಬರೂ ಇಂತಹ ಪುಣ್ಯದ ಕೆಲಸಗಳನ್ನು ಮಾಡುತ್ತಿದ್ದರೆ. ನಾವು ಭೂಮಿಯಲ್ಲಿ ಹುಟ್ಟಿದ್ದು, ಸಾರ್ಥಕತೆಯಾಗುತ್ತದೆ. ಇಂದಿನ ಸಮಾಜದಲ್ಲಿ ಏನೆಲ್ಲಾ ನೋಡುತ್ತಿದ್ದೇವೆ. ಈ ಅಂಧ ಮಕ್ಕಳು ಕತ್ತಲಿನಲ್ಲಿ ಬದುಕು ಕಟ್ಟಿಕೊಂಡು ಕತ್ತಲೆಯಲ್ಲಿಯೇ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಪರಿತಪಿಸುತ್ತಿರುತ್ತಾರೆ. ಇಂತಹವರ ಪಾಲಿಗೆ ನೆರವಾದರೆ ಮುಂದೊಂದು ದಿನ ಅವರೂ ಸಹ ಸಮಾಜದ ಮುಖ್ಯವಾಹಿನಿಗೆ ಬರುವಂತಾಗುತ್ತದೆ ಎಂದು ಹೇಳಿದರು.ಈ ವೇಳೆಯಲ್ಲಿ ಕೊಯಿರ ಗ್ರಾಪಂ ಸದಸ್ಯೆ ಮಮತಾ ಶಿವಾಜಿ ಗೌಡ, ಸಂಚಾರಿ ಪೊಲೀಸ್ ಎಎಸ್‌ಐ ಲೋಕೇಶ್, ಮನಗೊಂಡನಹಳ್ಳಿ ಹನುಮೇಗೌಡ, ಆಶ್ರಮದ ಪದಾಧಿಕಾರಿಗಳು ಇದ್ದರು.
Be the first to comment