ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ: ಸಾಂಸ್ಕೃತಿಕ ಕಲೆಗಳು ಎಲ್ಲಿರಗೂ ಲಭಿಸುವಂತಹ ವಿದ್ಯೆಯಲ್ಲ. ಕಠಿಣ ಪರಿಶ್ರಮದಿಂದ ಸತತ ಅಭ್ಯಾಸದಿಂದ ಮಾತ್ರ ಇಂತಹ ವಿದ್ಯೆಗಳು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಉದಯ್ ಡ್ಯಾನ್ಸ್ ಅಕಾಡೆಮಿ ಟ್ರಸ್ಟ್‌ನ ಅಧ್ಯಕ್ಷ ಎನ್.ರಾಮಮೂರ್ತಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಶಾಂತಿ ನಗರದಲ್ಲಿರುವ ಉದಯ್ ಡ್ಯಾನ್ಸ್ ಅಕಾಡೆಮಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ ನೃತ್ಯಶಾಲಾ ನೃತ್ಯ ಸ್ಪರ್ಧೆ ೨೦೨೨ ಮತ್ತು ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೃತ್ಯ ಕಲೆ ಸಾಮಾಜಿಕ ವಲಯದಲ್ಲಿರುವ ಹಲವು ಕ್ಷೇತ್ರಗಳಲ್ಲಿ ಒಂದಾಗಿದೆ. ಚಿಕ್ಕಂದಿನಿಂದಲೇ ನೃತ್ಯವನ್ನು ಮಾಡುವುದರ ಮೂಲಕ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದರೆ ತಪ್ಪಾಗಲಾರದು. ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಜೊತೆಯಲ್ಲಿ ಇಂತಹ ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಸತತವಾಗಿ ನಮ್ಮ ಟ್ರಸ್ಟ್ ಮೂಲಕ ನೃತ್ಯದಲ್ಲಿ ಪರಿಣಿತಗೊಂಡ ಹಲವಾರು ಮಕ್ಕಳು ಇಂದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಅದರಂತೆ ನೀವು ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಲಾಗುತ್ತಿದೆ ಎಂದು ಪ್ರೋತ್ಸಾಹಿಸಿದರು.
ಸರಕಾರಕ್ಕೆ ಮನವಿ: ಸ್ಥಳೀಯವಾಗಿರುವ ಹಲವು ಕಲಾವಿದರನ್ನು ಗುರ್ತಿಸುವಲ್ಲಿ ರಾಜ್ಯ ಸರಕಾರ ಮುಂದಾಗಬೇಕು. ಕಲವಾವಿದರ ಪ್ರತಿಭೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನೃತ್ಯ ಕಲೆಗಳ ಮೂಲಕ ಮನರಂಜಿಸುವ ಮತ್ತು ಮನ ಸಂತೋಷ ಪಡಿಸುವ ಕಲೆಗಳನ್ನು ಸರಕಾರ ಪ್ರೋತ್ಸಾಹಿಸಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ನಡೆಯುವ ಹಲವಾರು ಸಮಾರಂಭಗಳಿಗೆ ಸ್ಥಳೀಯ ಕಲಾವಿದರಿಗೆ ಮಾನ್ಯತೆ ಕೊಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಸ್ಥಳೀಯರಿಗೆ ಕಲ್ಪಿಸಿಕೊಡುವ ದೃಷ್ಠಿಕೋನವನ್ನು ಅಧಿಕಾರಿಗಳು ಮಾಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಂತರ್ ನೃತ್ಯಶಾಲಾ ನೃತ್ಯ ಸ್ಪರ್ಧೆಯನ್ನು ನಡೆಸಲಾಯಿತು ಮತ್ತು ಟ್ರಸ್ಟಿನ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉದಯ್ ಕಲ್ಚರಲ್ ಅಕಾಡೆಮಿ ಆಫ್ ಅರ್ಬನ್ ಅಂಡ್ ರೂರಲ್ ವೆಲ್‌ಫೇರ್ ಟ್ರಸ್ಟ್‌ನ ಉಪಾಧ್ಯಕ್ಷ ನಾರಾಯಣಪ್ಪ.ಎಂ, ಕಾರ್ಯದರ್ಶಿ ಪುಷ್ಪ, ಸಹ ಕಾರ್ಯದರ್ಶಿ ಅಂಜಲಿ.ಎಸ್, ಖಜಾಂಚಿ ಸುಂದರ್.ಯು, ರಣಹ್ಯೂಹ ಚಲನ ಚಿತ್ರ ನಿರ್ದೇಶಕ ಶಂಕರ್, ಪತ್ರಿಕಾವರದಿಗಾರ ಹೈದರ್‌ಸಾಬ್, ಅಖಿಲ ಕರ್ನಾಟಕ ಚಿರಂಜೀವಿ ಯುವ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಕಿರುಚಿತ್ರ ನಿರ್ದೇಶಕ ವಿ.ವೆಂಕಟೇಶ್, ದೈಶಿಶಿ ಜಿ.ಶ್ರೀನಿವಾಸ್, ಕಿರುಚಿತ್ರ ನಟ ರಾಜಣ್ಣ, ತಾರುಣ್ಯ ಎಂಟರ್ ಪ್ರೈಸಸ್ ಮಾಲೀಕೆ ಅಂಜಲಿಮುನಿರಾಜು, ಶಿಕ್ಷಕ ಮೌಲ, ನೃತ್ಯ ಕಲಾವಿದರು, ಮಕ್ಕಳು, ಪೋಷಕರು ಇದ್ದರು.
Be the first to comment