ಜಿಲ್ಲಾ ಸುದ್ದಿಗಳು
ಕುಮಟಾ
ತಾಲೂಕಿನ ನಾಗೂರು ಗ್ರಾಮದಲ್ಲಿ ಅನೇಕ ಗಿಡಮರಗಳ ಮಾರಣ ನಡೆಯುತ್ತಿದೆ. ಪರಿಸರವಾದೀಗಳೇ ಎಲ್ಲಿದ್ದೀರಾ ..?? ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಭೂಮಿಯನ್ನು ತಮ್ಮ ಲಾಭಕ್ಕಾಗಿ ನಾಶ ಮಾಡುತ್ತಿದ್ದಾರೆ.
ಕುಮಟಾ ತಾಲೂಕಿನ ನಾಗೂರು ಗ್ರಾಮದಲ್ಲಿ ಸರಕಾರೀ ಜಾಗ ( ಕಂದಾಯ ಭೂಮಿ) ಯನ್ನು ಕಬಳಿಸಲು ಭೂಗಳ್ಳರು ಹೊಂಚು ಹಾಕಿ ಕುಳಿತಿದ್ದಾರೆ. ಅರಣ್ಯ ಸಂಪತ್ತನ್ನು ನಾಶ ಮಾಡಿ ನೂರಾರು ಎಕರೆ ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದಾರೆ.
ಭೂಗಳ್ಳರು ಸರಕಾರೀ ಜಾಗವನ್ನು ಕಬಳಿಸಿ ಅತಿಕ್ರಮಣವನ್ನು ಮಾಡುತ್ತಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಚಕಾರ ಎತ್ತುತ್ತಿಲ್ಲ. ಆದರೇ ಕ.ರ.ವೇ ಸ್ವಾಭಿಮಾನಿ ಬಣ ಇದನ್ನು ಖಂಡಿಸುತ್ತದೆ. ಇದು ನಮ್ಮ ನಿಮ್ಮೆಲ್ಲರ ಆಸ್ತಿ ಇದನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಹೊಣೆ. ಅದನ್ನು ಭೂಗಳ್ಳರು ಕಬಳಿಸುವುದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ತಮ್ಮ ಲಾಭಕ್ಕಾಗಿ ಸಾರ್ವಜನಿಕ ಭೂಮಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ..
Be the first to comment