ರುಧ್ರ ಭೂಮಿ ಎಂದರೆ ಅದು ಸ್ವರ್ಗದ ಭೂಮಿ ಇದ್ದಂತೆ;  ಜನಿವಾರ ಸಮಾಜದ ಸಶ್ಮಾನದ ಸ್ವಚ್ಚತಗೆ ಚಾಲನೆ ! 

ವರದಿ ಸಚಿನ ಚಲವಾದಿ‌ ಮುದ್ದೇಬಿಹಾಳ

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ

ಮನುಷ್ಯನ ಅವಸಾನದ ನಂತರದಲ್ಲಿ ನಡೆಯುವ ಅಂತ್ಯಕ್ರಿಯೆ ಸಶ್ಮಾನದಲ್ಲಿ ( ರುಧ್ರಭೂಮಿ) ಯಲ್ಲಿ ನಡೆಯುತ್ತದೆ, ರುಧ್ರಭೂಮಿ ಅಂದರೆ ಅದು ಸ್ವರ್ಗವಿದ್ದಂತೆ ಆ ಪವಿತ್ರ ಭೂಮಿಯನ್ನು ನಾವುಗಳು ಸ್ವಚ್ಚತಾ ಮಾಡಬೇಕು ಎಂದು ಕರ್ನಾಟಕ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾವಸಾಬ ದೇಸಾಯಿ ಮರಾಠ ಸಮಾಜದ ಹಣಮಂತ ನಲವಡೆ ಹೇಳಿದರು

CHETAN KENDULI

ರವಿವಾರ ಪಟ್ಟಣದ ಮಹಾಂತೇಶ ನಗರದ ( ಶಾರದ ಶಾಲೆಯ ಬಳಿಯ) ಜನಿವಾರ ಸಮಾಜದವರ ಸಶ್ಮಾನದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರುಗತಿಸಿದ ನಮ್ಮ ಹಿರಿಯರ ಅಂತ್ಯಸಂಸ್ಕಾರ ನಡೆಯುವ ಸ್ಥಳವನ್ನು ಸಮಾಜದ ಎಲ್ಲಾ ಭಾಂದವರು ಸೇರಿ ಸಂರಕ್ಷಣೆ ಮತ್ತು ಸ್ವಚ್ಚತೆ ಮಾಡಬೇಕು ‌ಎಂದರು

ಈ ವೇಳೆ ಸವಿತಾ ಸಮಾಜದ ಮುಖಂಡ ಮಹೇಶ ತೇಲಂಗಿ, ಕಲಾಲ ಸಮಾಜದ ಚಂದ್ರಶೇಖರ ಕಲಾಲ ಮಾತನಾಡಿ ಸಶ್ಮಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಬೇಕಿದೆ ಈ ನಿಟ್ಟಿನಲ್ಲಿ ಜನಿವಾರ ಸಮಾಜದ ಎಲ್ಲಾ ಬಾಂಧವರು ಸೇರಿ ಅಗತ್ಯವಿರುವ ಸಮಸ್ಯೆಗಳನ್ನು ಸರಿಪಡಿಸಬೇಕಿದೆ ಮತ್ತು ನಮ್ಮ ಸಶ್ಮಾನದ ಸ್ಥಳದಲ್ಲಿ ಸಾರ್ವಜನಿಕರು ಮಲಮೂತ್ರದ ತಾಣವಾಗಿಸಿದ್ದಾರೆ ಇದಕ್ಕೆ ಕಡಿವಾಣ ಹಾಕಲು ಸಶ್ಮಾನದ ಕಾಂಪೌಂಡ್ ತಡೆಗೂಡೆ ಎತ್ತರವನ್ನು ಹೆಚ್ಚಿಸಬೇಕು ಮತ್ತು ಸಶ್ಮಾನದ ಗೇಟ್ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು ಎಂದರು

ಭರತ ಭೋಸಲೆ ಮಾತನಾಡಿ ಸಶ್ಮಾನದ ಸ್ವಚ್ಚತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದ್ದು ಮುಂದಿನ ಭಾನುವಾರ ಜನಿವಾರ ಸಮಾಜದ ೧೬ ಸಮುದಾಯ ಬಂಧುಗಳು ಆಗಮಿಸಿ ನಿಮ್ಮಿಂದ ಆಗುವ ಸಹಾಯವನ್ನು ಮಾಡಬೇಕು ಎಂದು ಕರೆ ನೀಡಿದರು

ಸಶ್ಮಾನದ ಅಂಗಳದಲ್ಲಿ ಜೀನಿ ಕಂಟಿಗಳು ,ಬೆಳೆದಿವೆ ಸಶ್ಮಾನದ ನೀರನ ವ್ಯವಸ್ಥೆ ಮಿನಿ ಟ್ಯಾಂಕ್ ವ್ಯವಸ್ಥೆ ಮಾಡಿದ್ದರು ಸ್ಥಗಿತಗೊಂಡ ಕಾರಣ ಅವ್ಯವಸ್ಥೆ ಇದೆ,ಸಶ್ಮಾನದ ಕೋಣೆಯ ಬಾಗಿಲು ಒಡೆದು ಹಾಕಲಾಗಿದೆ,ಚಿತಾಗಾರದ ಕಬ್ಬಿಣದ ಗೇಟ್ ಕಳ್ಳತನ ಮಾಡಿದ್ದಾರೆ,ಸುತ್ತಲಿನ ಜನರು ಇಲ್ಲಿ ಮಲಮೂತ್ರ ಸ್ಥಳವಾಗಿಸಿದ್ದರೆ ,ಪುಂಡ ಪೂಕರಿಗಳು ಗುಟ್ಕಾ ತಿನ್ನಲು ಇಸ್ಪಿಟ ಆಡಲು ತಾಣವಾಗಿಸಿದ್ದಾರೆ, ಈ ಎಲ್ಲಾ ಗಲೀಜು ತಾಣವನ್ನು ಸ್ವಚ್ಚತೆ ಮಾಡಿ ಸಶ್ಮಾನದಲ್ಲಿ ಪುರಸಭೆ ಇಂದ ಕುಳಿತು ಕೊಳ್ಳಲು ಆಸನದ ಮತ್ತು ಅಂತ್ಯಕ್ರಿಯೆ ಗೆ ನೀರಿನ ವ್ಯವಸ್ಥೆ ಮಾಡಬೇಕು, ಸಶ್ಮಾನದ ಸಸಿಗಳನ್ನು ನೆಟ್ಟು ಉದ್ಯಾನದ ವಾತಾವರಣ ನಿರ್ಮಿಸಲು ಜನಿವಾರ ಸಮಾಜದ ವಿವಿಧ ಮುಖಂಡರು ಚರ್ಚಿಸಿದರು

ಸಶ್ಮಾನದ ಸ್ವಚ್ಚತಾ ಕಾರ್ಯದಲ್ಲಿ ಶಿವಾಜಿ ವಿಜಯಪುರ, ಶಂಭು ಕದಂ,ತಾನಾಜಿ ಘೋರ್ಪಡೆ,ರಾಘವೇಂದ್ರ ನಲವಡೆ,ರವಿ ತೇಲಂಗಿ, ಈರಣ್ಣ ಇಡ್ಲೂರ,ಶರಣಪ್ಪ ಮಸಾಲಜಿ,ಶ್ರೀನಿವಾಸ ಶಹಾಪೂರ,ಯಲ್ಲಪ್ಪ ತೇಲಂಗಿ, ದೇವೇಂದ್ರ ಶಹಾಪೂರ,ರಾಜು ಕಲಾಲ‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಶ್ರಮದಾನ ಮಾಡಿದರು

Be the first to comment

Leave a Reply

Your email address will not be published.


*