ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಕುಮಟಾದ ತಾಯಿ: 7 ತಿಂಗಳಿಗೇ ನಾರ್ಮಲ್​ ಡೆಲಿವರಿ..!!!

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕುಮಟಾ

ಗೋಕರ್ಣದ ಗಂಗಾವಳಿ ನಿವಾಸಿ ಹಲೀಮಾ ಸಾಧಿಕ್ ಸಾಬ್ ಎಂಬುವರಿಗೆ 7 ತಿಂಗಳಿನಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣದಿಂದ ಪಟ್ಟಣದ ಡಾ. ಜಾನು ಮಣಕಿಕರ್ಸ್ ಮೆಟರ್​​​ನಿಟಿ ಮತ್ತು ನರ್ಸಿಂಗ್ ಹೋಮ್‍ನಲ್ಲಿ ದಾಖಲಿಸಲಾಗಿತ್ತು. ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯ ಡಾ. ಪ್ರಶಾಂತ ಮಣಕಿಕರ್ ಹೆರಿಗೆ ಮಾಡಿಸುವ ಬಗ್ಗೆ ತಿಳಿಸಿದ್ದರು.‌ ಅದರಂತೆ ಇಂದು ಸುರಕ್ಷಿತ ಮತ್ತು ಯಶಸ್ವಿಯಾಗಿ ನಾರ್ಮಲ್​​ ಹೆರಿಗೆ ಮಾಡಿಸಲಾಗಿದ್ದು, ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

CHETAN KENDULI

ಮಹಿಳೆಯೋರ್ವಳು ಅವಧಿ ಪೂರ್ವವೇ ತ್ರಿವಳಿ ಮಕ್ಕಳಿಗೆ ಸಹಜ ಹೆರಿಗೆ ಮೂಲಕ ಜನ್ಮ ನೀಡಿರುವ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. 

ತಾಯಿ ಮತ್ತು ಮೂರೂ ಶಿಶುಗಳು ಆರೋಗ್ಯವಾಗಿದ್ದರೂ ಕೂಡ ಶಿಶುಗಳ ಸಂಪೂರ್ಣ ಬೆಳವಣಿಗೆಯಾಗದ ಕಾರಣದಿಂದ ಅವುಗಳ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ. 

ತಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲು ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ಘಟನೆ ನಡೆದಿದೆ ಎಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪ್ರಶಾಂತ ಮಣಕಿಕರ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆಯಾಗಿಲ್ಲ, ಎಲ್ಲಾ ಸುಸೂತ್ರವಾಗಿ ನಾರ್ಮಲ್​ ಹೆರಿಗೆ ಆಗಿದೆ ಎಂದು ತಿಳಿಸಿದ್ದಾರೆ. 

Be the first to comment

Leave a Reply

Your email address will not be published.


*