ನಗರ ಅಭಿವೃದ್ಧಿಯ ಜೊತೆಗೆ ಸುಂದರತೆಯೂ ನಿವಾಸಿಗರ ಜವಾಬ್ದಾರಿಯಾಗಿದೆ : ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಪಟ್ಟಣದ ಅಭಿವೃದ್ಧಿ ಕನಸಿನ ಜೊತೆಗೆ ಸುಂದರೀಕರಣಗೊಳಿಸುವುದು ಕೇವಲ ನನ್ನ ಕನಸಲ್ಲ. ಇದಕ್ಕಾಗಿ ಸಾಕಷ್ಟು ಸ್ಥಳೀಯ ಹೋರಾಟಗಾರರ ಕನಸೂ ಆಗಿತ್ತು. ಹೋರಾಟಗಾರರ ಕನಸೂ ನನಸಾಗಿದೆ. ಆದರೆ ಸಸಿಗಳನ್ನು ಸುರಕ್ಷೆಯು ನಮ್ಮೆಲ್ಲರ ಜವಾಬ್ದಾರಿ ಎನ್ನುವುದು ಮರೆಯಬಾರದು ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಪಟ್ಟಣದ ಹುನಗುಂದ-ಮುದ್ದೇಬಿಹಾಲ-ತಾಳಿಕೋಟಿ ರಾಜ್ಯ ಹೆದ್ದಾರಿಯ ಡಿವೈಡರ್‌ಗಳಲ್ಲಿ ವಿವಿಧ ತಳಿಗಳ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಿವೈಡರ್‌ಗಳಲ್ಲಿ ವಿವಿಧ ಉದ್ಯಮಿಗಳು ಸೇರಿದಂತೆ ಇನ್ನಿತರ ರಾಜಕೀಯ ಜಾಹಿರಾತುಗಳಿಗೆ ಅವಕಾಸ ನೀಡಲಾಗುವುದಿಲ್ಲ. ಅದಕ್ಕಾಗಿ ಪುರಸಭೆಯಿಂದ ಕೆಲ ಕಡೆ ಜಾಗವನ್ನು ನಿಗದಿ ಮಾಡಲಾಗುತ್ತಿ ಅದೇ ಜಾಗದಲ್ಲಿಯೇ ತಮ್ಮ ಜಾಹಿರಾತುಗಳನ್ನು ಹಾಕಬೇಕು. ಇಲ್ಲವಾದಲ್ಲಿ ಪುರಸಭೆಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
೧೫ಲಕ್ಷದ ಸಸಿಗಳು:
ಮುದ್ದೇಬಿಹಾಳ ಪಟ್ಟಣದ ಅಂದಾಜು ೨.೭೭ ಕಿಮಿ ಉದ್ದದ ರಾಜ್ಯ ಹೆದ್ದಾರಿ ಡಿವೈಡರ್‌ನಲ್ಲಿ ಅಂದಾಜು ೧೫ ಲಕ್ಷ ಮೊತ್ತದ ಸಾವಿರಾರು ದೇಶಿ ಸೇರಿದಂತೆ ವಿದೇಶ ತಳಿಗಳ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಪಾಟೀಲ, ಉಪಾಧ್ಯಕ್ಷೆ ಶಹದಾಜಬಿ ಹುಣಚಗಿ, ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಅಶೋಕ ನಾಡಗೌಡ, ಬಸವರಾಜ ನಂದಿಕೇಶ್ವರಮಠ, ಅಶೋಕ ರೇವಡಿ, ಪುರಸಭೆ ಪ್ರಾಭರಿ ಮುಖ್ಯಾಧಿಕಾರಿ ಎಂ.ಬಿ.ಮಾಡಗಿ, ಅರಣ್ಯ ಇಲಾಖೆ ಅಧಿಕಾರಿ ಸಂತೋಷ ಅಜೂರ, ಕೆಆರ್‌ಡಿಸಿಎಲ್ ಅಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*