ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಒಬ್ಬ ಕಡು ಭ್ರಷ್ಟ ಡಿ.ಡಿ.ಪಿ.ಐ N.H ನಾಗುರ


ಉಡುಪಿ -ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಶಿಕ್ಷಣ ನೀಡುವ ಶಿಕ್ಷಕರೇ ಮೌಲ್ಯಗಳನ್ನು ಅಳವಡಿಸಿಕೊಳ್ಳದೇ, ಮಕ್ಕಳಿಗೆ ಬೋಧನೆಯೂ ಮಾಡದೆ ಶಿಕ್ಷಣ ಇಲಾಖೆಯ ನೌಕರರಾಗಿರುವುದು, ಅಂತಹವರನ್ನು ಪೋಷಿಸುವುದು ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಉಪನಿರ್ದೇಶಕರಾದ ಎನ್.ಹೆಚ್.ನಾಗೂರ್ ಇವರಿಗೆ ಎಲ್ಲವೂ ಗೊತ್ತಿದ್ದು, ಲಾಭದ ಆಸೆಗಾಗಿ ತಾನೂ ಒಬ್ಬ ಫಲಾನುಭವಿಯಾಗಿ, ಕಣ್ಣು ಮುಚ್ಚಿಕೊಂಡು ತನ್ನ ಕೆಲಸ ತಾನು ಮಾಡಿ ಪ್ರಚಾರಗಿಟ್ಟಿಸಿಕೊಳ್ಳುವ ಶತ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಪ್ರಾಮಾಣಿಕ ನೌಕರರು ಇಲಾಖೆಯೊಳಗಡೆ ಬೇಕಾಗಿಲ್ಲ. ಇವರ ಪುಸ್ತಕ ಮಾರಾಟ, ಸಿ.ಡಿ.ಬಿಡುಗಡೆ, ಪ್ರತಿನಿತ್ಯ ಮನೆಗೆ ಎಲ್ಲಾ ದಿನಪತ್ರಿಕೆಗಳನ್ನು ಕೊಡುವುದು, ಕುಟುಂಬಕ್ಕೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡುವುದು, ಸ್ವಂತ ವಾಹನಕ್ಕೆ ಡೀಸೆಲ್ ಹಾಕಿಸುವುದು, ರಜಾ ದಿನಗಳಲ್ಲಿ ಇವರ ಕುಟುಂಬವನ್ನು ಟ್ರಿಪ್ಗೆ ಕರೆದುಕೊಂಡು ಹೋಗುವುದು, ಇವರ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳನ್ನು ಪ್ರಿಂಟ್ ಹಾಕಿಸಿಕೊಡುವುದು ಈ ಕೆಲಸಗಳನ್ನು ಇಲಾಖೆ ಸಿಬ್ಬಂದಿ ಮಾಡುತ್ತಿದ್ದರೆ ಮುಗಿಯಿತು. ಆಗಾಗ್ಗೆ ೧೦,೧೫,೨೦ ವರ್ಷಗಳ ಕಾಲಮಿತಿ ಬಡ್ತಿ ಪ್ರಸ್ತಾವನೆಗಳನ್ನು ಇವರು ಅನುಮೋದಿಸಲು, ವಾರ್ಷಿಕ ಕಾರ್ಯ ನಿರ್ವಹಣಾ ವರದಿ ಬರೆಯಲು ಹಾಗೂ ಕಛೇರಿಯಲ್ಲಿ ಯಾವುದೇ ಕಡತಕ್ಕೆ ಇವರ ಸಹಿ ಬೀಳಬೇಕಾದರೆ ಮೊದಲೇ ಇವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ಕೆಲಸ ಮಾಡಿದರೆ ಶಿಕ್ಷಣ ಇಲಾಖೆಯ ನೌಕರರೆಲ್ಲ ಇವರ ಪ್ರಕಾರ ಒಳ್ಳೆಯವರು. ಇವರು ಪೋಷಿಸುತ್ತಿರುವ ಚಂದ್ರಾನಾಯ್ಕ, ವಂಡ್ಸೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಬಿ.ಇ.ಓ.ಕಛೇರಿಯಲ್ಲಿ ಶಿಕ್ಷಣ ಸಂಯೋಜಕನಾಗಿ ಕೆಲಸ ಮಾಡುವಾಗ ಹಣ ದುರುಪಯೋಗ, ನಕಲಿ ಸಹಿ ಮಾಡಿರುವುದು, ಸ್ಪರ್ಧಾ ನಿಯಮಗಳನ್ನು ಉಲ್ಲಂಘಿಸಿರುವುದು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು, ಮೋಸ, ವಂಚನೆ ಮಾಡಿರುವುದು, ಸುಳ್ಳು ಹೇಳಿರುವುದು, ಹಣಕಾಸು ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ಗೌಪ್ಯತೆ ಕಾಪಾಡಿರುವುದು, ಬಿ.ಇ.ಓ.ಸೀಲ್ ಕಳ್ಳತನ ಮಾಡಿರುವುದು, ಶಿಕ್ಷಕಿಯೊಬ್ಬರ ಮೇಲೆ ಅಸಹ್ಯ ಪದಗಳನ್ನೆಲ್ಲಾ ಬಳಕೆ ಮಾಡಿ ದೂರು ಪತ್ರ ಬರೆದಿರುವುದು, ಕರ್ತವ್ಯದ ಅವಧಿಯಲ್ಲಿ ವೈಯಕ್ತಿಕ ಕೆಲಸಗಳನ್ನು ನಿರ್ವಹಿಸಿರುವುದು, ಅನಧಿಕೃತ ಗೈರು ಹಾಜರಿ, ಟಿ.ಪಿ/ಟಿ.ಡಿ ಗೆ ಅನುಮೋದನೆ ಪಡೆಯದೇ ಇರುವುದು ಹಾಗೂ ಇತರ ದುಷ್ಕೃತ್ಯಗಳ ಬಗ್ಗೆ ದೂರುಗಳಿದ್ದರೂ, ವಿಚಾರಣೆ ನಡೆಸದೆ, ಕನಿಷ್ಠ ಶಿಕ್ಷೆ ವಿಧಿಸಿ, ಒಪ್ಪಿಕೊಳ್ಳದಿರುವ ಆಪಾದನೆಗಳ ಮೇಲೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿರುತ್ತಾರೆ.

ಅನಾಮಧೇಯ ಪತ್ರ ಬರೆಯುವುದು, ಆ ಪತ್ರಗಳಿಗೆ ಬೇರೆ ದಾಖಲೆಗಳಲ್ಲಿರುವ ಸಹಿಗಳನ್ನು ಅಂಟಿಸುವುದು ಚಂದ್ರಾನಾಯ್ಕನ ಹವ್ಯಾಸಗಳಲ್ಲೊಂದು, ಹೀಗೆ ಮಾಡಿ ತನಗಾಗದ, ತನ್ನ ಭೃಷ್ಟ ಕೆಲಸಕ್ಕೆ ಸಹಕಾರ ನೀಡದ ಇಲಾಖೆ ನೌಕರರ ಮೇಲೆ ಇದೇ ಅಸ್ತ್ರವನ್ನು ಬಳಸುತ್ತಿರುವುದಕ್ಕೆ ಬೇಕಾದಷ್ಟು ದಾಖಲೆಗಳು ಉಪನಿರ್ದೇಶಕರ ಕಛೇರಿಯ ಕಡತದಲ್ಲಿವೆ. ಎಷ್ಟು ದೂರುಗಳನ್ನು ಬರೆದರೂ ಕ್ರಮ ಕೈಗೊಳ್ಳದೇ ಕುಳಿತ ಉಪನಿರ್ದೇಶಕರಿಗೆ ಏನೋ ಲಾಭ ಇರಬೇಕೆಂದೇ ಭಾವಿಸಬೇಕಾಗಿದೆ.


ಇನ್ನೊಬ್ಬ ದಿನಕರ ಶೆಟ್ಟಿ, ಕುಂದಾಪುರ ತಾಲ್ಲೂಕಿನ ಹನಗಳ್ಳಿ ಶಾಲೆಯಲ್ಲಿ ನೆಪ ಮಾತ್ರಕ್ಕೆ ಕೆಲಸ ನಿರ್ವಹಿಸುವ ಶಿಕ್ಷಕ. ಹಲವಾರು ವರ್ಷಗಳಿಂದ ಅನಧಿಕೃತ ಗೈರು ಹಾಜರಾಗಿ, ರಿಯಲ್ ಎಸ್ಟೇಟ್ ವ್ಯವಹಾರ, ಹೋಟೆಲ್ ಉದ್ಯಮ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಕೇವಲ ೪ ತಿಂಗಳು ಕೆಲಸಕ್ಕೆ ಗೈರು ಹಾಜರಾದರೆ ಸರ್ಕಾರಿ ಕೆಲಸದಿಂದ ವಜಾ ಮಾಡಬೇಕೆಂದು ಕೆ.ಸಿ.ಎಸ್.ನಿಯಮ ಹೇಳಿದರೂ ಇವರೇಕೆ ಈ ನೌಕರನ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ ಎಂಬುದೆ ಪ್ರಶ್ನೆ. ಅಷ್ಟೇ ಅಲ್ಲದೆ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತನ್ನ ಸ್ನೇಹಿತ ಎಂದು ಹೇಳಿ ಸ್ವಾಗತ. ಮಕ್ಕಳ ಮನೆ ಬೇಟಿ ಕಾರ್ಯಕ್ರಮದಲ್ಲಿ ಈ ಕೆಲಸ ನಿರ್ವಹಿಸದ ವ್ಯಕ್ತಿಯೊಂದಿಗೆ ಉಪನಿರ್ದೇಶಕರಿರುವ ಫೋಟೋ ನೋಡಿದರೇ ತಿಳಿಯುತ್ತದೆ ಉಪನಿರ್ದೇಶಕರು ನಿಜಕ್ಕೂ ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ ಎಂದು. ನಿರಂತರ ಗೈರು ಹಾಜರಿರುವ ಈ ವ್ಯಕ್ತಿ ಶಿಕ್ಷಕರ ಚುನಾವಣೆಗೆ ಸ್ಪರ್ಧಿಸಿದ್ದಾದರೂ ಹೇಗೆ? ಈಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ, ಹಾಗೂ ನೌಕರರ ಸಂಘದ ಅಧ್ಯಕ್ಷ. ಕುಂದಾಪುರ ತಾಲ್ಲೂಕಿನ ಬಿ.ಇ.ಓ.ಗಳು ಈ ವ್ಯಕ್ತಿಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಜಾರಿಕೊಳ್ಳುತ್ತಿರುವುದಾದರೂ ಏಕೆ ಎಂಬುದೇ ಅರ್ಥವಾಗುತ್ತಿಲ್ಲ.
ಇನ್ನೊಬ್ಬ ಉಪನಿರ್ದೇಶಕರ ಚಾಲಕ ರಾಘವೇಂದ್ರ. ಈತ ಅನಧಿಕೃತ ಗೈರು ಹಾಜರಿ, ಕಛೇರಿ ಅವಧಿಯಲ್ಲಿ ಇತರೆ ಕೆಲಸ ಮಾಡುವುದು, ಇಲಾಖೆಯ ನೌಕರರೊಂದಿಗೆ ಉದ್ಧಟತನ ಪ್ರದರ್ಶಿಸುವುದು, ಮನಬಂದಂತೆ ವಾಹನ ಚಲಾಯಿಸುವುದು, ಸ್ವಂತ ಕೆಲಸಕ್ಕೆ ಕಛೇರಿ ವಾಹನ ಬಳಸಿಕೊಳ್ಳುವುದು ಹಾಗೂ ಇತರ ದುಷ್ಕೃತ್ಯಗಳ ಬಗ್ಗೆ ದೂರುಗಳು ಬಂದರೂ, ಯಾವುದರ ಮೇಲೂ ಕ್ರಮ ವಹಿಸದೆ ಡ್ರೈವರ್ನ ಎಲ್ಲಾ ಕೆಲಸವನ್ನು ಬೆಂಬಲಿಸಿ ಪ್ರಾಮಾಣಿಕರನ್ನು ಬಲಿ ಕೊಡಲು ಪ್ರಯತ್ನಿಸುತ್ತಿರುವುದು ಉಪನಿರ್ದೇಶಕರ ಕಾರ್ಯವೈಖರಿಗೆ ಸಾಕ್ಷಿ.
ಇವರು ಉಡುಪಿಗೆ ಬಂದ ಕೆಲವೇ ದಿನಗಳಲ್ಲಿ ಅಂದರೆ ೧೨.೧೨.೨೦೨೦ರಂದು ಇವರು ಬರೆದ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಮಾಡಿದರು. ಇದರ ಖರ್ಚು ವೆಚ್ಚವನ್ನೆಲ್ಲಾ ಯಾವುದೋ ಶಿಕ್ಷಕರ ಸಂಘದವರು ನೋಡಿಕೊಳ್ಳಬೇಕಾಯಿತು. ಈ ಪುಸ್ತಕಗಳ ಮಾರಾಟಕ್ಕೆ ಶಿಕ್ಷಣ ಇಲಾಖೆ ಅನುಮತಿಯನ್ನೇ ಕೊಟ್ಟಿಲ್ಲ. ಈ ಪುಸ್ತಕಗಳು ಶಾಲಾ ಗ್ರಂಥಾಲಯಕ್ಕೆ ಖರೀದಿಸಲು ಅರ್ಹವಾಗಿವೆ ಎಂದು ಯಾವ ಸಮಿತಿಯೂ ಹೇಳಿಲ್ಲ. ಆದರೂ ಉಪನಿರ್ದೇಶಕರೇ ತಾವು ಬರೆದ ಪುಸ್ತಕಗಳ ಖರೀದಿಗೆ ತಾವೇ ಆದೇಶ ಮಾಡಿ ಎಲ್ಲಾ ಬಿ.ಇ.ಓ.ಗಳಿಗೆ ಮನೆಗೆ ಕರೆದುಕೊಂಡು ಹೋಗಿ ಪುಸ್ತಕಗಳನ್ನು ನೀಡಿ ಮಾರಾಟಮಾಡಲು ತಿಳಿಸಿದ್ದಾರೆ. ಅದರಂತೆ ಪುಸ್ತಕಗಳು ಮಾರಾಟವೂ ಆಗಿದೆ. ಸುಳ್ಳು ಬಿಲ್ಗಳನ್ನು ಉಪನಿರ್ದೇಶಕರು ನೀಡಿ ನಗದು ರೂಪದಲ್ಲಿ ಹಣ ಪಡೆದೂ ಆಗಿದೆ. ಇಷ್ಟೇ ಸಾಲದೆಂಬಂತೆ ಇವರು ಬರೆದ ಕವನಗಳ ಸಿ.ಡಿ. ಮಾಡಲು ಇಲಾಖೆಯ ಸಂಗೀತ ಶಿಕ್ಷಕರನ್ನೇ ಶಾಲಾ ಕೆಲಸದ ಅವಧಿಯಲ್ಲಿ ಬಳಸಿಕೊಳ್ಳಲಾಗಿದೆ.

ಏಪ್ರಿಲ್ ೧೪ರಂದು ಸಿ.ಡಿ.ಬಿಡುಗಡೆ ಸಮಾರಂಭವೂ ಯಾವುದೋ ಖಾಸಗಿ ಶಾಲೆಯ ಸಹಕಾರದೊಂದಿಗೆ ಜರುಗಿದ್ದು, ಇನ್ನೊಂದು ಖಾಸಗಿ ಶಾಲೆಯವರು ಖರ್ಚು ಭರಿಸಿರುತ್ತಾರೆ. ಸಿ.ಡಿ.ಯಲ್ಲಿರುವ ಕವನಗಳನ್ನು ಯಾವುದೇ ಸಮಿತಿ ಪರಿಶೀಲಿಸಿರುವುದಿಲ್ಲ. ಸರ್ಕಾರಿ ಶಾಲೆಗಳಿಗೆ ಸಿ.ಡಿ.ಯನ್ನು ಈಗಾಗಲೇ ನೀಡಲಾಗಿದೆ.
ಮಕ್ಕಳಿಗೆ ಮೌಲ್ಯ ಅಳವಡಿಸಿಕೊಳ್ಳುವಂತೆ ಬೋಧನೆ ಮಾಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾದ ಶಿಕ್ಷಕರೇ ಪಾಠ ಮಾಡದೇ ಇತರೇ ಕುಕೃತ್ಯಗಳಲ್ಲಿ ತೊಡಗಿದ್ದು, ಅದನ್ನು ನೋಡಿಯೂ ನೋಡದಂತೆ ಇರುವ ಉಪನಿರ್ದೇಶಕರು ನಿಜವಾಗಲೂ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತರಲಾರರು.

ವರದಿ- ಕುಮಾರ್ ನಾಯ್ಕ. ಭಟ್ಕಳ
ಮೊಬೈಲ್ ನೋ-7975256370

Be the first to comment

Leave a Reply

Your email address will not be published.


*