ಕೇಂದ್ರ ಮತ್ತು ರಾಜ್ಯ ಸರಕಾರದ ತಪ್ಪು ಆರ್ಥಿಕ ನೀತಿಯಿಂದ ಪೆಟ್ರೋಲ್ ದರ ಲೀಟರ್ ಗೆ 100 ರೂಪಾಯಿ ಆಗಿದೆ


ಶಿರಸಿ : ಕೇಂದ್ರ ಮತ್ತೂ ರಾಜ್ಯ ಸರಕಾರದ ತಪ್ಪಾದ ಆರ್ಥಿಕ ನೀತಿಯಿಂದ ಶಿರಸಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ನೂರು ರೂಪಾಯಿಗೆ ಏರಿಕೆಆಗಿರುವ ಹಿನ್ನೆಲೆಯಲ್ಲಿ, ಪ್ರತಿಪಟನಾರ್ಥವಾಗಿ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ್ ಮನೆಯಂಗಳದ್ದಲ್ಲಿ ಜಾಗಟೆ ಬಾರಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಕೋವಿಡ್ನ ನೀತಿ ನಿಯಮದಂತೆ ಸಾರ್ವಜನಿಕ ಪ್ರತಿಭಟನೆಗೆ ಅವಕಾಶ ಇಲ್ಲದಿರುವದರಿಂದ, ಅವರು ಇಂದು ಮನೆಯ ಅಂಗಳದಲ್ಲೇ ಸಂಕೇತೀಕವಾಗಿ ಪ್ರತಿಭಟನೆ ವ್ಯಕ್ತಪಡಿಸಿ, ಸರಕಾರ ಅತೀ ಶೀಘ್ರದಲ್ಲಿ ಇಂಧನ ಬೆಲೆ ಎಲೆಕೆಗೆ ಆಗ್ರಹಿಸಿದ್ದರು.
ಪೆಟ್ರೋಲ್ ಮೂಲ ಬೆಲೆ 33 ರುಪಾಯಿಗೆ ಕೇಂದ್ರ ಮತ್ತೂ ರಾಜ್ಯ ಸರಕಾರವು ಶೇ 260 ರಷ್ಟು ವಿವಿಧ ತೆರಿಗೆ ಹಾಕಿ, ಇಂದು 100ರ ಗಡಿ ದಾಟಲು ಕಾರಣವಾಗಿದ್ದು ಇರುತ್ತದೆ ಅಂತ ಅವರು ಹೇಳುತ್ತಾ ಜಗತ್ತಿನಲ್ಲೇ ಅತೀ ಹೆಚ್ಚು ತೆರೆಗೆ ಹಾಕುವ ರಾಷ್ಟ್ರ ಭಾರತವಾಗಿದೆ ಎಂದು ಅವರು ಹೇಳಿದ್ದರು.
ತಕ್ಷಣ ಸರಕಾರವು ಹೆಚ್ಚುವರಿ ತೆರಿಗೆಗೆ ಕಡಿವಾಣ ಹಾಕಿ, ಇಂಧನ ಬೆಲೆ ಕಡಿತಗೊಳಿಸಬೇಕೆಂದು ರವೀಂದ್ರ ನಾಯ್ಕ್ ಸಾರ್ವಜನಿಕವಾಗಿ ಸರಕಾರಕ್ಕೆ ಆಗ್ರಹಿಸಿದ್ದರು.

ವರದಿ- ಕುಮಾರ್ ನಾಯ್ಕ ಭಟ್ಕಳ
ಮೊಬೈಲ್-7975256370

Be the first to comment

Leave a Reply

Your email address will not be published.


*