ಸಮಾಜ ಸೇವೆಯಲ್ಲಿ ತೊಡಗಿ ಯುವಕರಿಗೆ ಮಾದರಿಯಾಗಿರುವ ಇಂಜಿನಿಯರ್ ವಿದ್ಯಾರ್ಥಿ ವೈ.ಎಸ್.ಸುಮಂತಗೌಡ…!!!

ವರದಿ: ಆಕಾಶ ಚಲವಾದಿ

ರಾಜ್ಯ ಸುದ್ದಿಗಳು

CHETAN KENDULI

ಬೆಂಗಳೂರು(ಯಲಹಂಕ):

ಯುವಕರು ಶಿಕ್ಷಣದಲ್ಲಿ ಸಿರಿವಂತರಾದರೆ ಅವರು ಶಿಕ್ಷಣ ರಂಗದಲ್ಲಿಯೇ ಉನ್ನತ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಶಿಕ್ಷಣ ಕ್ಷೇತ್ರ ಬಿಟ್ಟರೆ ಬೇರ್‍ಯಾವುದೇ ಕ್ಷೇತ್ರದಲ್ಲಿಯೂ ಆಸಕ್ತಿ ತೋರುವುದಿಲ್ಲ ಎಂದು ಹಲವರು ಮಾತನಾಡುತ್ತಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಓರ್ವ ಯುವಕ ಉನ್ನತ ಶಿಕ್ಷಣವಂತನಾದರೂ ಸಾಮಾಜಿಕ ಕಳಕಳಿಯಲ್ಲಿ ತೊಡಗಿಕೊಂಡು ಸಮಾಜ ಸೇವೆಗೆ ಮುಂದಾಗಿ ಎಲ್ಲ ಯುವಕರಿಗೂ ಮಾದರಿಯಾಗಿದ್ದಾನೆ.
ಹೌದು, ತಮ್ಮ ಪ್ರೌಢ ಶಿಕ್ಷಣವನ್ನು ಕೇಂಬ್ರಿಡ್ಜ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ, ಪಿಯುಸಿಯನ್ನು ನಾರ್ಗಾಜುನ ಪಿಯು ಕಾಲೇಜಿನಲ್ಲಿ ಮುಗಿಸಿದ ಇವರು ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕದ ವೈ.ಎಸ್.ಸುಮಂತಗೌಡ ವೃತ್ತಿಪರವಾಗಿ ಇಂಜಿನಿಯರಿಂಗ್ ಮುಗಿಸಿದ್ದರೂ ತಾನೂ ಸಮಾಜಮುಖಿಯಾಗಿ ಬಡವರ ಸೇವೆ ಮಾಡಬೇಕು ಎಂಬ ಸಂಕಲ್ಪವನ್ನು ಇಟ್ಟುಕೊಂಡು ಹಲವು ವರ್ಷಗಳಿಂದ ಅನಾಥಾಶ್ರಮ, ವೃದ್ಧಾಶ್ರಮ, ಬಡವರಿಗೆ ನಿರ್ಗತಿಕ ಮಂಗಳಮುಖಿಯರಿಗೆ ಯಾರಿಂದಲೂ ಸಹಾಯ ಪಡಯದೇ ತಮ್ಮ ಸ್ವಂತ ಹಣದಿಂದಲೇ ಸಹಾಯಹಸ್ತ ಚಾಚುವ ಮೂಲಕ ಸಮಾಜ ಸೇವಕರಾಗಿದ್ದಾರೆ.

                              ವೈ.ಎಸ್.ಸುಮಂತಗೌಡ, ಸಮಾಜ ಸೇವಕ, ಬೆಂಗಳೂರು(ಯಲಹಂಕ)

ವಿವಿಧ ಸಂಘಟನೆಯ ಮೂಲಕವೂ ಸೇವೆ ಮಾಡುತ್ತಿರುವ ಸುಮಂತಗೌಡ:
ಸುಮಂತಗೌಡ ಕೇವಲ ಸಮಾಜ ಸೇವಕನಾಗಿ ಸೇವೆಗೈಯದೇ ಕನ್ನಡ ಭಾಷೆ ಉಳಿವಿಕೆಗಾಗಿಯೂ ವಿವಿಧ ಬಗೆಯ ಯೋಜನೆಗಳನ್ನು ರೂಪಿಸುತ್ತಾ ಸಂಘಟಿತರಾಗಿದ್ದಾರೆ. ಇವರ ಸೇವೆಯನ್ನು ಮೆಚ್ಚಿರುವ ಕರ್ನಾಟಕ ರಕ್ಷಣಾ ವೇಧಿಕೆ ಪ್ರಮುಖರು ಸುಮಂತಗೌಡ ಅವರನ್ನು ಬೆಂಗಳೂರು ನಗರ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದಲ್ಲದೇ ಕರ್ನಾಟಕ ಚಲನಚಿತ್ರ ನಟರಾದ ಧ್ರುವಸರ್ಜಾ ಅವರ ಅಭೀಮಾನಿಯಾಗಿರುವ ಸುಮಂತಗೌಡ ಅವರು ಧ್ರುವ ಸರ್ಜಾ ಯುವ ಘರ್ಜನೆ ಸಂಘಟನೆಯನ್ನು ಸ್ಥಾಪಿಸಿ ಸ್ಥಳೀಯ ರಂಗಭೂಮಿ ಕಲಾವಿದರನ್ನು ಗುರುತಿಸುವುದು ಸೇರಿದಂತೆ ಕಲಾವಿದರಿಗೆ ಬೆನ್ನೆಲಬಾಗಿದ್ದಾರೆ. ೨೮ರ ವಯಸ್ಸಿನಲ್ಲಿನ ಇವರ ಸಮಾಜ ಸೇವೆಯನ್ನು ಮೆಚ್ಚಿರುವ ಕುಂಚಿಟಿಗರ ಸಮಾಜದ ಹಿರಿಯರು ಹಾಗೂ ಯುವಕರು ಸುಮಂತಗೌಡ ಅವರನ್ನು ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ.

ಪ್ರತಿಯೊಂದು ರಂಗದಲ್ಲಿಯೂ ಸಮಾಜ ಸೇವೆ ಮಾಡುವ ದಾರಿ ಇರುತ್ತದೆ. ಆದರೆ ಅಂತಹ ದಾರಿಯಲ್ಲಿ ಯಾವುದೇ ಸ್ವಾರ್ಥ ಬಯಸದೇ ನಡೆಯುದೇ ನಿಜವಾದ ಮುನುಷ್ಯ ಧರ್ಮ. ನನ್ನ ಪಿಯುಸಿ ಶಿಕ್ಷಣ ಪೂರೈಸಿದ ನಂತದ ಸಮಾಜಮುಖಿಯಾಗಿ ಇರಬೇಕು ಎಂದು ನಿರ್ಧರಿಸಿದೆ. ಇದೇ ದಾರಿಯಲ್ಲಿ ನಡೆಯುತ್ತಿದ್ದೇನೆ. ಇದಕ್ಕೆ ನಮ್ಮ ತಂದೆ ಮತ್ತು ತಾಯಿಯ ಆರ್ಶಿವಾದವೂ ಇದೆ. ಸದ್ಯಕ್ಕೆ ಕೊರೊನಾ 2ನೇ ಅಲೆಯಲ್ಲಿ ಸಾಕಷ್ಟು ಬಡವರು ನಿರ್ಗತಿಕರು ತತ್ತರಿಸಿದ್ದಾರೆ. ಇವರ ಸಹಾಯಕ್ಕೆ ಎಲ್ಲ ಯುವಕರೂ ಮುಂದೆ ಬರಬೇಕು. ಒಂದಾಗಿದ್ದರೇ ಪ್ರತಿಯೊಂದು ಸಮಸ್ಯೆಯನ್ನು ಹೋಗಲಾಡಿಸಬಹುದು.

-ವೈ.ಎಸ್.ಸುಮಂತಗೌಡ, ಸಮಾಜ ಸೇವಕ, ಬೆಂಗಳೂರು(ಯಲಹಂಕ)



ಯುವಕರ ಕಣ್ಮನಿ ಸುಮಂತಗೌಡ:
ವೈ.ಎಸ್.ಸುಮಂತಗೌಡ ಅವರು ಸಮಾಜ ಸೇವೆಗಾಗಿ ಮುಂದಾದ ಸಂದರ್ಭದಲ್ಲಿ ಇವರ ಸೇವೆಯನ್ನು ಮೆಚ್ಚಿಸುವ ಸುತ್ತಮುತ್ತಲಿನ ತಾಲೂಕಿನ ಯುವಕರು ಸುಮಂತಗೌಡ ಅವರ ಸಮಾಜ ಸೇವೆಯನ್ನೂ ತಾವೂ ಮಾಡಬೇಕು ಎಂದು ಯುವಕರಲ್ಲಿಯೇ ವಿವಿಧ ಸಂಘಟನೆಗಳನ್ನು ಸ್ಥಾಪಿಸಿದ್ದಾರೆ. ಒಟ್ಟಿನಲ್ಲಿ ೨೮ ಹರಿಯದ ಯುವಕ ಸುಮಂತಗೌಡ ಯುವಕರ ಕಣ್ಮನಿಯಾಗಿದ್ದಾರೆ.
ಕೊರೊನಾ ಸಂಕಷ್ಟುದಲ್ಲಿ ಬಡವರಿಗೆ ಸಹಾಯಹಸ್ತ ಚಾಚಿದ ಸುಮಂತಗೌಡ:
ಕೊರೊನಾ ೨ನೇ ಅಲೆಯಲ್ಲಿ ದೇಶವೇ ತತ್ತರಿಸಿದ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಟವನ್ನು ಅನುಭವಿಸುತ್ತಿದ್ದ ಬಡವರಿಗೆ ಹಾಗೂ ನಿರ್ಗತಿಕರಿಗೆ ಸ್ವತಃ ತಮ್ಮ ವಾಹನದಲ್ಲಿ ಊಟ ಉಪಹಾರವನ್ನು ತೆಗೆದುಕೊಂಡು ಹೋಗಿ ಆಹಾರವನ್ನು ವಿತರಿಸುತ್ತಿದ್ದಾರೆ. ಬಡವರಿಗೆ ಅನ್ನದಾನ ಮಾಡಿದರೆ ಅದೇ ಶ್ರೇಷ್ಠ ದಾನವಾಗುತ್ತದೆ ಎನ್ನುವುದು ಸುಮಂತಗೌಡ ಅವರ ಅಭಿಪ್ರಾಯವಾಗಿದೆ.


ಅಪ್ಪಟ ಆಂಜನೇಯ ಭಕ್ತ:
ವೈ.ಎಸ್.ಸುಮಂತಗೌಡ ಅವರು ಅಪ್ಪಟ ಆಂಜನೇಯ ಭಕ್ತರಾಗಿದ್ದು ಪ್ರತಿ ಶನಿವಾರ ತಪ್ಪದೇ ಶ್ರೀ ಆಂಜನೇಯ ದೇವಸ್ಥಾನಕ್ಕೆ ತೆರಲಿ ಸರ್ವಜನಾಂಗಕ್ಕೂ ಒಲಿತಾಗುವ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಯೊಂದಿಗೆ ದೇವರ ಭಕ್ತರಾಗಿರುವ ಸುಮಂತಗೌಡ ಅವರು ತಮ್ಮ ತಂದೆಯವರಾದ ಶಾಂತಕುಮಾರ ಹಾಗೂ ತಾಯಿ ಮಂಜುಳಾ ಅವರಿಗೆ ಪ್ರೀತಿಯ ಪುತ್ರರಾಗಿದ್ದಾರೆ.

Be the first to comment

Leave a Reply

Your email address will not be published.


*