ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುಕೊಡುತ್ತೇನೆ ಬಿಬಿಎಂಪಿ ಮಾಜಿ ಸದಸ್ಯ ಎಂ.ಆನಂದ್ ಕುಮಾರ್ ಮನವಿ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಂಕಾಕ್ಷಿಗಳ ಪಟ್ಟಿಯಲ್ಲಿ ನಾನು ಸಹ ಕ್ಷೇತ್ರದ ಜನರ ಸೇವೆ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ನನಗೊಂಡು ಅವಕಾಶ ಮಾಡಿಕೊಟ್ಟರೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುಕೊಡುತ್ತೇನೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಎಂ.ಆನಂದ್‌ಕುಮಾರ್ ಮನವಿ ಮಾಡಿದರು. ತಾಲೂಕಿನ ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸಾವಕನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರನ್ನು ಭೇಟಿ ನೀಡುವುದರ ಮೂಲಕ ನೂತನವಾಗಿ ನಿರ್ಮಾಣದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಮೇಲ್ಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎಂ.ಆನಂದ್‌ಕುಮಾರ್ ಒಂದು ಲಕ್ಷ ರೂ.ಗಳ ಆರ್ಥಿಕ ದನಸಹಾಯ ಹಾಗೂ ಸಾವಕನಹಳ್ಳಿ ಗ್ರಾಮದ ಎಸ್‌ಸಿ ಕಾಲೋನಿಯ ೩೮ ವರ್ಷದ ಕೂಲಿ ಕಾರ್ಮಿಕ ಯುವಕ ಕೂಲಿ ಕಾರ್ಮಿಕ ಜಾಗದಲ್ಲಿ ಸಾವನ್ನಪ್ಪಿದ್ದರಿಂದ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ನೀಡಿ ಕುಟುಂಬಸ್ಥರಿಗೆ ದನಸಹಾಯ ಮಾಡಿ ಅವರು ಮಾತನಾಡಿದರು. ಸಾವಕನಹಳ್ಳಿ ಎಪಿಸಿಎಸ್ ಅಧ್ಯಕ್ಷ ಎಸ್.ಪಿ.ಮುನಿರಾಜು ಅವರು ಸಮುದಾಯ ಭವನ ನಿರ್ಮಾಣ ಮಾಡುತ್ತಿದ್ದಾರೆ. ಭವನದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಬಂದಿದ್ದು, ಜತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಮಹದಾಸೆ ಇದ್ದು, ಕೆಲವರು ಸ್ಥಳೀಯರಲ್ಲವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ತಾಯಿಯವರ ಸ್ವಂತ ಊರು ಇದೇ ತಾಲೂಕಿನ ವಿಜಯಪುರ ಹೋಬಳಿಯ ಶೆಟ್ಟರಹಳ್ಳಿಯಾಗಿದೆ. ವಿದ್ಯಾಭ್ಯಾಸವನ್ನು ಸಹ ಶೆಟ್ಟರಹಳ್ಳಿಯಲ್ಲಿಯೇ ಬೂನಾದಿಯಾಗಿದೆ. ನಂತರ ಬೆಂಗಳೂರಿನತ್ತ ರಾಜಕೀಯವಾಗಿ ಗುರ್ತಿಸಿಕೊಂಡು ಬಿಬಿಎಂಪಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ನನ್ನ ತಾಯಿಯವರ ಹುಟ್ಟೂರಿನ ತಾಲೂಕಿನಲ್ಲಿ ಶಾಸಕ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನು ಒಬ್ಬನಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಚಿರಪರಿಚಿತರಾಗಿದ್ದಾರೆ. ಸ್ಥಳೀಯನೇ ಆಗಿರುವ ನನಗೆ ಕಾಂಗ್ರೆಸ್‌ನ ವರಿಷ್ಠರು ಟಿಕೆಟ್ ನೀಡಿದರೆ ಪ್ರಾಮಾಣಿಕ ಸೇವೆಗೆ ಬದ್ಧನಾಗಿರುತ್ತೇನೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಮುನಿರಾಜು ಅವರ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳನ್ನು ಒಳಗೊಂಡಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಕಾಂಕ್ಷಿ ಪಟ್ಟಿಯಲ್ಲಿರುವ ಎಂ.ಆನಂದ್‌ಕುಮಾರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಗ್ರಾಪಂ ಸದಸ್ಯರಾದ ವಿಶ್ವನಾಥ್, ನಿರ್ಮಲಾಮೂರ್ತಿ, ರಾಜಶೇಖರ್, ಎಂಪಿಸಿಎಸ್ ನಿರ್ದೇಶಕರಾದ ಭಾಗ್ಯಮ್ಮ, ಮುನಿಕೃಷ್ಣ, ರಾಮಾಂಜಿನಪ್ಪ, ಕೆಂಪೇಗೌಡ, ಚಿಕ್ಕನಾರಾಯಣಸ್ವಾಮಿ, ಮುಖಂಡ ರಾಜಣ್ಣ, ಊರಿನ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು. 

Be the first to comment

Leave a Reply

Your email address will not be published.


*