ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಳಕಲ್ಲ ನಗರದ ಖಾಸಗಿ ಕಾರ್ಯಕ್ರಮ ನಿಮಿತ್ಯ ಆಗಮಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿಯವರು ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಪದವೀಧರ ಶಿಕ್ಷಕರ ಸಮಸ್ಯೆ, ವರ್ಗಾವಣೆ ಸಮಸ್ಯೆ ಹಾಗೂ ನೂತನ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸಲು ತೀವ್ರ ಒತ್ತಡವನ್ನು ಹಾಕಲಾಗಿದ್ದು ಶೀಘ್ರವೇ ನಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.ತಾಲ್ಲೂಕು ಘಟಕದ ಪರವಾಗಿ ಅಧ್ಯಕ್ಷರಾದ ಆರ್. ಎನ್.ಮಾಸರಡ್ಡಿ ಹಾಗೂ ಪದಾಧಿಕಾರಿಗಳು ರಾಜ್ಯಾಧ್ಯಕ್ಷರನ್ನು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ, ಹುನಗುಂದ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಬಿ. ಶೀಲವಂತರ,ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ. ಬಂಡರಗಲ್,ಡಿ.ಎಂ. ಬಾಗವಾನ,ಜಿಲ್ಲಾ ಗೌರವಾಧ್ಯಕ್ಷರಾದ ಎ.ಜಿ. ರಾಂಪೂರ, ಉಪಾಧ್ಯಕ್ಷರಾದ ಪಿ.ಎಚ್.ಲೂತಿಮಠ,ಲಲಿತಾ ಬಿಜ್ಜಳ,ಖಜಾಂಚಿ ಎಸ್.ಹೆಚ್. ಹೀರೆಕುಂಬಿ,ಸಹ ಕಾರ್ಯದರ್ಶಿಗಳಾದ ಎಸ್. ಎಸ್.ರೇಶ್ಮಿ, ಸಂಘಟನಾ ಕಾರ್ಯದರ್ಶಿಗಳಾದ ಎಸ್. ಎಚ್. ಪೂಜಾರಿ,ಎ.ಎನ್ ದೇವರಡ್ಡಿ ಎ ಜಿ ಗಡೇದ,ಎಸ್ ಎಂ ಅರಕೇರಿ,ಎಸ್ ವೈ ಭೋವೇರ ಹಾಗೂ ಪದಾಧಿಕಾರಿಗಳು, ಗುರುಮಾತೆಯರು,ಶಿಕ್ಷಕರು ಉಪಸ್ಥಿತರಿದ್ದರು.
Be the first to comment