ಸೋಮನಾಥ ನಗರದ ಜನರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

 

ಮಸ್ಕಿ

CHETAN KENDULI

ಮೆರವಣಿಗೆಯ ಮೂಲಕ ಪಟ್ಟಣದ ಸಾವಿರಾರು ಫಲಾನುಭವಿಗಳು ಆಗಮಿಸಿ ಸೋಮನಾಥ ನಗರದಿಂದ ಹೊರಟ ಪ್ರತಿಭಟನೆ,ವಾಲ್ಮೀಕಿ ವೃತ್ತ, ಕನಕ ವೃತ್ತ, ತೇರಿನ ಬಜಾರ, ಕಲೀಲ ವೃತ್ತ, ಮುಖಾಂತರ ಅಂಬೇಡ್ಕರ್ ಪ್ರತಿಮೆಗೆ ಆಗಮಿಸಿ ಪ್ರತಿಭಟಿಸಿದರು.ಸರಕಾರಿಯ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುವ ಸರ್ವೆ ನಂಬರ್ (ಟಿಬಿಪಿ) 223,224 ನಲ್ಲಿ 25 ರಿಂದ 30 ವರ್ಷಗಳಿಂದ ಮನೆಕಟ್ಟಿಕೊಂಡು ವಾಸವಾಗಿರುವ ಫಲಾನುಭವಿಗಳು ತಮಗೆ ಭೂ-ಕಂದಾಯ ಕಾಯಿದೆ 1964ರ ಕಲಂ 94 ಸಿಸಿ ಅಡಿಯಲ್ಲಿ ಮನೆ ಮಾಲೀಕತ್ವದ ಹಕ್ಕು ಪತ್ರಗಳನ್ನು ನೀಡುವಂತೆ ಹಾಗೂ ಪುಸ್ತಕದಲ್ಲಿ ಹಕ್ಕನ್ನು ದಾಖಲಿಸಿ ಮಾಲೀಕತ್ವದ ಈ ಸ್ವತ್ತು ಉತ್ತರವನ್ನು ನೀಡುವಂತೆ ಸರ್ಕಾರದಅಧಿಕಾರಿಗಳಿಗೆ ಒತ್ತಾಯಿಸಿದರು.

ಇದೇ ಜಾಗದಲ್ಲಿ ಕಳೆದ 20-30ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಮಾಡುತ್ತಿದ್ದೇವೆ. ಇದುವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ ಚುನಾವಣೆ ಬಂದಾಗ ಮಾತ್ರ ನಗರದ ಜನರು ಮಾತ್ರ ನೆನಪಾಗುತ್ತಾರೆ ಚುನಾವಣೆ ಮುಗಿದ ಮೇಲೆ ಜನರ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ ನಮ್ಮಂತ ಬಡಜನರಿಗೆ ನ್ಯಾಯವನ್ನು ಒದಗಿಸಿ ಕೊಡಿ ಎಂದು ಸಾರ್ವಜನಿಕರೆಲ್ಲರೂ ಒತ್ತಾಯವಾಗಿದೆ ಹಾಗೂಇಂತಹ ಮನೆಗಳನ್ನು ಅಕ್ರಮ-ಸಕ್ರಮ ಯೋಜನೆಯಲ್ಲಿ ಸಕ್ರಮಗೊಳಿಸಿ ಹಕ್ಕು ಪತ್ರ ವಿತರಿಸಬೇಕು. ಸೋಮನಾಥ ನಗರದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವ ಫಲಾನುಭವಿಗಳ ಮನೆಗಳನ್ನು ಸಕ್ರಮಗೊಳಿಸಿ ಮಾಲೀಕತ್ವದ ಹಕ್ಕು ಪತ್ರಗಳನ್ನು ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಹಕ್ಕು ಪತ್ರಗಳನ್ನು ನೀಡದೆ ಇದ್ದರೆ ಆಮರಣ ಉಪವಾಸ ಮಾಡುವುದಾಗಿ ಫಲಾನುಭವಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮನವಿಪತ್ರ ನೀಡುವ ಮೊದಲಿಗೆ ಮಾತನಾಡುತ್ತಾ ಸೋಮನಾಥ ನಗರದ 12 ನೇ ವಾರ್ಡ ನ ನಿವಾಸಿಗಳಿಗೆ ಯಾವುದೇ ರೀತಿಯ ಅನ್ಯಾಯ ಮಾಡದೆ ನೀರಾವರಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಅಧಿಕಾರಿಗಳ ಹಾಗೂ ಸಚಿವರುಗಳ ಅನುಮತಿ ಪಡೆದು ಕೊಡುಟ್ಟಿರೋ ಗೊತ್ತಿಲ್ಲ, ಆದರೇ ಯಾವುದೇ ಮೂಲದಿಂದ ಆಗಲಿ 12 ನೇ ವಾರ್ಡಿನ ನಿವಾಸಿಗಳಿಗೆ ಹಕ್ಕು ಪತ್ರ ಬರಲಿ ಎಂಬುದು ನಮ್ಮ ಆಶಯ ಎಂದು ಮಾಜಿ ಶಾಸಕರಾದ ಪ್ರತಾಪ ಗೌಡ ಪಾಟೀಲ್ ಹೇಳಿದರು. ಸರಕಾರದ ಯಾವುದೇ ಮೂಲ ಸೌಕರ್ಯಗಳು ಸಾರ್ವಜನಿಕರಿಗೆ ತಲುಪಿಸಲು ಆಗುತ್ತಿಲ್ಲ ಹಾಗಾಗಿ ತಮ್ಮ ಎಲ್ಲಾ ರೀತಿಯ ಬೇಡಿಕೆಯನ್ನು ಸರಕಾರಕ್ಕೆ ಮನವಿ ಪತ್ರದ ಮೂಲಕ ಸಂಭಂದಪಟ್ಟ ಇಲಾಖೆಗೆ ಮತ್ತು ಕಂದಾಯ, ನೀರಾವರಿ ಇಲಾಖೆ ಸಚಿವರಿಗೆ ಅಧಿಕಾರಿಗಳಿಗೆ ಕರೆಯ ಮೂಲಕ ತಿಳಿಸಿದ್ದೇನೆ ಎಂದು ಆರ್.ಬಸನಗೌಡ ತುರುವಿಹಾಳ ಶಾಸಕರು ವಿಧಾನ ಸಭಾ ಕ್ಷೇತ್ರ ಮಸ್ಕಿ ಇವರು ಅಂಬೇಡ್ಕರ್ ವೃತ್ತದ ಪ್ರತಿಭಟನೆಯ ಕುರಿತು ಮಾತನಾಡಿದರು.

ಮಸ್ಕಿಯಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸಲು ಇದೆ ನೀರಾವರಿ ಇಲಾಖೆಯ ವ್ಯಾಪ್ತಿ ಯಲ್ಲಿ ಬರುವ PWD ಕ್ಯಾಂಪ್ ಮಸ್ಕಿಯಲ್ಲಿರುವ ಸುಮಾರು 5 ಎಕರೆಯಷ್ಟು ಭೂಮಿಯನ್ನು ನೀಡಿ ಅದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯ ವತಿಯಿಂದ 5 ಎಕರೆ ಕಂದಾಯ ಇಲಾಖೆಗೆ ಒಳಪಟ್ಟ ಭೂಮಿಯನ್ನು ನೀರಾವರಿ ಇಲಾಖೆಗೆ ಹಸ್ತಾಂತರಿಸುವ ಮೂಲಕ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಹೇಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದಿರೋ ಹಾಗೆಯೇ ಈಗ ಜನವಸತಿ ಪ್ರದೇಶಗಳಾದ TBP ಯ ಸರ್ವೇ ನಂಬರ್ ಗಳಾದ 223, 224 ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಸೋಮನಾಥ ನಗರ ಹಿತರಕ್ಷಣ ವೇದಿಕೆ ಹಾಗೂ ವಾಲ್ಮೀಕಿ ನಾಯಕ ಸ್ವಾಭಿಮಾನಿ ಸಂಘವು ಸೋಮನಾಥ ನಗರದ ಸೌಲಭ್ಯ ವಂಚಿತ ಫಲಾನುಭವಿಗಳ ಸಮ್ಮುಖದಲ್ಲೇ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಹಾಲಿ, ಮಾಜಿ ಶಾಸಕರುಗಳ ಮುಖಾಂತರ ಕಂದಾಯ, ನೀರಾವರಿ ಇಲಾಖೆಯ ಸಚಿವರು, ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ನಂತರ ಮಾತನಾಡುತ್ತ ನಿಮ್ಮ ಈ ಮನವಿ ಪತ್ರವನ್ನು ಸಂಭಂದಪಟ್ಟ ಅಧಿಕಾರಿಗಳಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ತಹಶೀಲ್ದಾರ್ ಕವಿತಾ. ಆರ್ ತಿಳಿಸಿದರು. ಇದೇ ಸಂದರ್ಭದಲ್ಲಿಪ್ರತಾಪ ಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ, ಆರ್.ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ, ಚೇತನ್ ಪಾಟೀಲ್, ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ ಮಸ್ಕಿ,ಸುರೇಶ ಹರಸೂರು, ಶೇಖರ್ ಗೌಡ ಮಾಲಿ ಪಾಟೀಲ್ ಕಾಟಿಗಲ್, ಮಹ್ಮದ್ ಗೌಸ್ ಪಾಷ, ಮಸೂದ್ ಪಾಷ,ದುರುಗರಾಜ್ ವಟಗಲ್, ಅಮರೇಶ್ ನಾಯಕ ಸೋಮನಾಥ ನಗರ, ರಮಾ, ಅಂಜನಮ್ಮ, ದುರ್ಗಾ ಭವಾನಿ, ದುರುಗಮ್ಮ, ಶ್ರೀದೇವಿ, ಕೇಶವರೆಡ್ಡಿ, ನಭಿ ಸಾಬ್ ಮೇಸ್ತ್ರಿ, ಬಸವರಾಜ್ ಕೊಠಾರಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*