ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರು ಗ್ರಾಮದಲ್ಲಿರುವ ಜೀವಂತ ಶಿವಯೋಗ ಸಮಾಧಿಸ್ತರಾದ ಶ್ರೀ ಕಾಶಿ ಪೀಠದ ಶಾಖಾನುವರ್ತಿಗಳಾದ ತಪಸ್ವಿ, ಸಿದ್ಧಿಪುರುಷ ಶ್ರೀ ಗುರು ಮಂಟೇಶ್ವರರ ಮಹಾ ರಥೋತ್ಸವ, ಕೆಲೂರ- ಶಿವಗಂಗಾ ಕ್ಷೇತ್ರದ ಪೀಠಾಧಿಪತಿಗಳಾದ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಫೆ-16 ರಿಂದ 18 ರವರೆಗೆ ಕೋವಿಡ್ ನಿಯಮಾವಳಿ ಪ್ರಕಾರ ಸರಳವಾಗಿ ಜರುಗಲಿದೆ.
ಫೆ.16 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಗುರು ಮಂಟೇಶ್ವರ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಸಾನಿಧ್ಯ ವಹಿಸಿದ ಶ್ರೀಗಳ ಪಾದಪೂಜೆ, ತೀರ್ಥಪ್ರಸಾದ ವಿನಿಯೋಗ, 8ಗಂಟೆಗೆ ಗ್ರಾಮದ ಗುರು ಮಂಟೇದೇವರ ಹಿರೇಮಠ ರಿಂದ ರಥೋತ್ಸವದ ಕಳಸ, ಜಗದ್ಗುರು ವಿಶ್ವಾರಾಧ್ಯ ಮೂರ್ತಿ ಹಾಗೂ ಬೆಳ್ಳಿ ಪಾದುಕೆ ಗಳಿಂದ ಪಲ್ಲಕ್ಕಿ ಉತ್ಸವ ಸಮಸ್ತ ವಾದ್ಯ ವೈಭವದೊಂದಿಗೆ ಮೆರವಣಿಗೆ ನಡೆಯುವುದು.
ಇದೇ ಸಂದರ್ಭದಲ್ಲಿ ಗುಳೇದಗುಡ್ಡ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಲಿಂಗದೀಕ್ಷೆ, ಅಯ್ಯಾಚಾರ ಕಾರ್ಯಕ್ರಮ. ಜರುಗುವುದು ವೇದಮೂರ್ತಿ ಬಸಯ್ಯ ವೀ ಪುರಾಣಿಕಮಠ, ವೇದಮೂರ್ತಿ ಬಸಯ್ಯ ಗು ಸಂಘಟಿಮಠ ವೇದಮೂರ್ತಿ ವೀರಯ್ಯ ಗು ಸಂಕೀನಮಠ ವೈದಿಕರಾಗಿ ಕಾರ್ಯನಿರ್ವಹಿಸುವರು. ಸಂಜೆ 4 ಗಂಟೆಗೆ ಶ್ರೀ ಗುರು ಮಂಟೇಶ್ವರರ ಮಹಾ ರಥೋತ್ಸವ ಜರುಗುವುದು.
6 ಗಂಟೆಗೆ ಪೂರ್ಣಿಮಾ ಧರ್ಮ ಚಿಂತನ ಹರಗುರು ಚರಮೂರ್ತಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಫೆ-17 ರಂದು ಸಂಜೆ 7ಕ್ಕೆ ಯರಗಲ್, ಮುದ್ದೇಬಿಹಾಳ,ದನ್ನೂರ ಕಲಾ ಸಿಂಚನ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ,ರಾತ್ರಿ 8 ಗಂಟೆಗೆ ರಾಮದುರ್ಗದ ಓಂ ಶಿವ ಮೇಳದವರಿಂದ ಜಾನಪದ ಕಾರ್ಯಕ್ರಮ, ಹನುಮಂತ ಭಜಂತ್ರಿ, ಶಂಕರ್ ಮಂಡಿ,ತಾಯಪ್ಪ ಮಾದರ ಅವರಿಂದ ಸಂಗೀತ ಸೇವೆ ಫೆ- 18ರಂದು ಕಳಸಾಅವರೋಹಣ ಹಾಗೂ ಧರ್ಮಸಭೆ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.
Be the first to comment