ಕೃಷಿ ಭೂಮಿಯಲ್ಲಿ ಮಣ್ಣಿನ ಸತ್ವ ಹೆಚ್ಚಿಸಲು ಹಸಿರೆಲೆ ಗೊಬ್ಬರ ಉಪಯುಕ್ತ ಹಸಿರೆಲೆಗೊಬ್ಬರ ಬೀಜದುಂಡೆಗಳು ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವಂತಾಗಬೇಕು ರೈತರ ಆಗ್ರಹ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಕಷ್ಟು ರೈತರು ಕೃಷಿ ಭೂಮಿಯಲ್ಲಿ ಬೆಳೆದ ಅನುಪಯುಕ್ತ ಗಿಡಗಂಟೆಗಳನ್ನೇ ಭೂಮಿಯಲ್ಲಿ ಉಳುಮೆ ಮಾಡುವುದರ ಮೂಲಕ ಹಸಿರೆಲೆ ಗೊಬ್ಬರವನ್ನಾಗಿ ಪರಿವರ್ತಿಸಿ ಬೆಳೆಯನ್ನು ಹಿಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.ಮಣ್ಣಿನಲ್ಲಿರುವ ಸತ್ವವನ್ನು ಹೆಚ್ಚಿಸಲು ಹಾಗೂ ಮಣ್ಣಿನಲ್ಲಿ ಬೆಳೆಯುವ ಬೆಳೆಗಳಿಗೆ ಪೋಷಕಾಂಸಗಳನ್ನು ಹೆಚ್ಚಿಸಲು ಹಸಿರೆಲೆಯ ಗೊಬ್ಬರ ತಂತ್ರಕ್ಕೆ ರೈತರು ಮೊರೆಹೋಗಿರುವುದು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಂಡುಬಂದಿದೆ. ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಸಿರೆಲೆಗೊಬ್ಬರದ ಬೀಜದುಂಡೆಗಳು ರೈತರಿಗೆ ಸಿಗುವಂತಾಗಬೇಕು ಎಂದು ರೈತರ ಆಗ್ರಹವಾಗಿದೆ.

CHETAN KENDULI

 

ಹಸಿರೆಲೆಗೊಬ್ಬರ ಪದ್ಧತಿ: ರೈತರು ತಮ್ಮ ಕೃಷಿಭೂಮಿಯಲ್ಲಿ ಕೆಲವು ಗಿಡಗಳ ಎಲೆ ಕಾಂಡ ಮತ್ತು ಗಿಡಗಳ ಸಮೇತ ಹಸಿರಾಗಿರುವಾಗಲೇ ಮಣ್ಣಿಗೆ ಬೆರೆಸಿಕೊಂಡು ಬೆಳೆದ ಹಸಿರು ಎಲೆ ಎಡಗಳನ್ನು ಮಣ್ಣಿನಲ್ಲಿಯೇ ಸೇರಿಸುವುದರಿಂದ ಮಣ್ಣಿನಲ್ಲಿ ಬೆಳೆಗಳಿಗೆ ಬೇಕಾದ ತಾಕತ್ತು ಪೋಷಕಾಂಶಗಳ ಕೊರತೆ ಒದಗಿಬರುವುದಿಲ್ಲ. ಮಿತ ಬಂಡವಾಳದ ರೈತ ಸ್ನೇಹಿ ವಿಧಾನದಲ್ಲಿ ಭೂಮಿ ಫಲವತ್ತತೆ ಹೆಚ್ಚುತ್ತದೆ ಮತ್ತು ಹಸಿರೆಲೆಗೊಬ್ಬರವನ್ನಾಗಿಸಿದರೆ ಬೆಳೆ ಸಮೃದ್ಧವಾಗಿ ಬರಲಿದೆ ಎಂಬುವುದು ರೈತ ಮುಖಂಡರ ಅಭಿಪ್ರಾಯವಾಗಿದೆ.ತೇವಾಂಶದಲ್ಲಿ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ: ಅತೀ ತೇವಾಂಶ ಹೊಂದಿರುವ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳು ದ್ವಿಗುಣಗೊಳ್ಳುತ್ತವೆ. ಆದಷ್ಟು ಭೂಮಿ ತೇವಾಂಶ ಕಾಪಾಡಿದರೆ, ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗಿ ಮಣ್ಣಿನ ರಂಧ್ರಗಳು ಉಂಟಾಗಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಗೊಬ್ಬರದ ಸಾರ ಆಳಕ್ಕೆ ಇಳಿಯಲು ಪೂರಕವಾಗಿ ಬೆಳೆ ಚೆನ್ನಾಗಿ ಬರಲು ಕಾರಣವಾಗುತ್ತದೆ.ರಾಸಾಯನಿಕ ಗೊಬ್ಬರದಿಂದ ಇಳುವರಿ ಕ್ಷೀಣ: ರೈತರು ಬೆಳೆಗಳಿಗೆ ರಾಸಾಯನಿಕಯುಕ್ತ ಪೋಷಕಾಂಶಗಳನ್ನು ನೀಡುವುದರಿಂದ ಕಾಲಕಾಲಕ್ಕೆ ಆ ಜಮೀನುಗಳಲ್ಲಿ ಮಣ್ಣಿನ ಫಲವತ್ತತೆ ಕ್ಷೀಣಿಸಲಿದ್ದು, ರೈತರು ಮುಂದಿನ ಯಾವುದೇ ಬೆಳೆ ಇಟ್ಟಾಗ ಇಳುವರಿ ನೀರಿಕ್ಷಿಸಿದಷ್ಟು ಬರದೆ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ ಇದರಿಂದ ಸಾವಯವ ಪದ್ಧತಿಯಲ್ಲಿ ಕೃಷಿ ನಾಟಿ ಮಾಡುವುದು ಉತ್ತಮವಾಗಿದೆ.

ಮಣ್ಣಿನೊಳಗೆ ಸಾಂಧ್ರತೆ: ಸೆಣಬು, ಅಗಸೆ, ಹೆಸರು, ಉದ್ದು, ಹುರಳಿ, ಡಯಂಚ, ಹೀಗೆ ಮುಂದಾದ ಹಸಿರು ಗುಣವುಳ್ಳ ಎಲೆಗಳನ್ನು ಬೆಳೆದು ಗೊಬ್ಬರವನ್ನಾಗಿಸಿ ರೈತರು ಮಣ್ಣಿನ ಸಾಂದ್ರತೆಗೆ ಒತ್ತು ನೀಡಿದರೆ, ಕೃಷಿ ಚಟುವಟಿಕೆಯಲ್ಲಿ ಭೂಮಿವಾತಾವರಣದ ಸಾರಜನಕವನ್ನು ಹೀರಿಕೊಂಡು ಮಣ್ಣಿನೊಳಗೆ ಸಾಂಧ್ರತೆ ಹೆಚ್ಚಳವಾಗಿ ಭೂಮಿ ಬರಡಾಗದಂತೆ ಇರಲು ಸಹಕಾರಿಯಾಗಲಿದೆ.ಕೋಟ್ ೧ರಾಸಾಯನಿಕ ಬಳಕೆ ಮಾಡುವುದಕ್ಕಿಂತ ಮುಂಚೆ ಹತ್ತಾರು ಬಾರಿ ಯೋಚನೆ ಮಾಡಬೇಕು. ಸಾವಯವ ಗೊಬ್ಬರ ತಯಾರಿಸಿ ಕೃಷಿ ಚಟುವಟಿಕೆ ನಡೆಸಿದರೆ ಹೆಚ್ಚು ಇಳುವರಿ ಕಾಣಲು ಸಾಧ್ಯ. ರಾಸಾಯನಿಕ ಬಳಕೆಯಿಂದ ಬೆಳೆದ ಬೆಳೆಗಳನ್ನು ಸೇವಿಸುವುದು ವಿಷಪೂರಿತವಾಗುತ್ತದೆ. ಹಸಿರೆಲೆಗೊಬ್ಬರ ಬೀಜದುಂಡೆಗಳು ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವಂತೆ ಆಗಬೇಕು.  ಮುನಿಶಾಮಪ್ಪ | ರೈತಮುಖಂಡ,ದೇವನಹಳ್ಳಿಕೋಟ್ ೨ಎರಡು ರೀತಿ ಹಸಿರೆಲೆಗೊಬ್ಬರ ಮಾಡುವುದಾಗಿದೆ. ಹಸಿರು ಗುಣವುಳ್ಳ ಎಲೆಗಳನ್ನು ಬಳಸುವುದರಿಂದ ೧ ಎಕರೆಗೆ ೩-೪ ಟನ್ ಉತ್ಪಾದನೆ, ಹೂ ಬಿಡುವ ಹಂತದಲ್ಲಿ ರೋಟರಿ ಹೊಡೆದರೆ ೧೫ ದಿನದಲ್ಲಿ ಕೊಳೆತು ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ನಂತರ ಅಗತ್ಯಕ್ಕೆ ತಕ್ಕಂತೆ ರಾಸಾಯನಿಕ ಗೊಬ್ಬರವನ್ನು ಸಹ ಬಳಸಿ, ಮಣ್ಣಿನ ಫಲವತ್ತತೆಯ ಜತೆ ಬೆಳೆ ಇಟ್ಟರೆ ಉತ್ತಮ ಫಸಲು ಕಾಣಲು ಸಾಧ್ಯ.  ಡಾ.ಪಿ.ವೀರನಾಗಪ್ಪ | ಮಣ್ಣು ವಿಜ್ಞಾನಿ, ಕೆವಿಕೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ

Be the first to comment

Leave a Reply

Your email address will not be published.


*