ಸರಕಾರ ಮತ್ತು ಸಹಕಾರ ಸಂಘ ಎರಡರ ಸಹಕಾರದೊಂದಿಗೆ ಮಾತ್ರ ರೈತರಿಗೆ ಅನುಕೂಲ ನೂತನ ಎಂಪಿಸಿಎಸ್ ಕಟ್ಟಡ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ರೈತರಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಸರಕಾರ ಮತ್ತು ಸಹಕಾರ ಸಂಘಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ರೈತರು ಆರ್ಥಿಕವಾಗಿ ಮುಂಬರಲು ರೈತರಿಗೆ ಕಾರ್ಯಕ್ರಮ ರೂಪಿಸುವ ಕೆಲಸವನ್ನು ಕ್ರಮಬದ್ಧವಾಗಿ ಮಾಡಬೇಕಾಗುತ್ತದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಬಚ್ಚಹಳ್ಳಿ ಗ್ರಾಮದಲ್ಲಿ ನೂತನ ಬಚ್ಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಾಗಲೇ ತಾಲೂಕಿನಾದ್ಯಂತ ಯಾವುದೇ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಗಳ ಪ್ರಾರಂಭ ಮಾಡುವ ಸಂದರ್ಭದಲ್ಲಿ ಬಮೂಲ್ ನಿರ್ದೇಶಕರಾದ ಶ್ರೀನಿವಾಸ್ ಅವರು ಪ್ರತಿ ಬಾರಿ ಈ ಸಂಘಕ್ಕೆ ಆದ್ಯತೆ ತಮ್ಮಿಂದ ಆಗಬೇಕು ಎಂದು ಮನವಿ ಕೊಟ್ಟಾಗ ಮೊದಲ ಆದ್ಯತೆ ಸಹಕಾರ ಸಂಘಕ್ಕೆ ಸಹಕಾರ ಕೊಟ್ಟಿದ್ದೇನೆ. ಯಾವ ಊರಿನಲ್ಲಿ ಮತ್ತು ಯಾವ ಗ್ರಾಮದಲ್ಲಿ ಸಹಕಾರ ಸಂಘವಿಲ್ಲ ಎಂಬ ಮಾಹಿತಿ ಪಟ್ಟಿ ಮಾಡಿಕೊಡಿ ಎಂದು ಕೇಳಲಾಗಿದೆ. ಸಂಂಧ ಪಟ್ಟ ಗ್ರಾಮ ಠಾಣ, ಸರ್ವೆ ನಂ., ಸರಕಾರಿ ಜಾಗ ಇರುವುದು ನನ್ನ ಗಮನಕ್ಕೆ ತಂದುಕೊಟ್ಟರೆ ಮೂರು ದಿನಗಳಲ್ಲಿಯೇ ನಾನು ಮಾಡಿಕೊಡುತ್ತೇನೆ. ಬಮೂಲ್‌ನಿಂದ ೨೫ ಎಕರೆ ಜಾಗಕ್ಕೆ ಬೇಡಿಕೆ ಇಟ್ಟಿದ್ದಾರೆ. ಸರಕಾರಿ ಜಾಗವಿದ್ದರೆ ಖಂಡಿತ ಮಾಡಿಸಿಕೊಡಲಾಗುತ್ತದೆ. ಸರಕಾರದ ಜೊತೆ ಹೋರಾಟ ಮಾಡಿಯಾದರೂ ಸಹ ಜಾಗವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದೇವನಹಳ್ಳಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡುವುದಕ್ಕೆ ನನ್ನ ಸಹಕಾರ ಇರುತ್ತದೆ ಆದರೆ ಕ್ಷೇತ್ರದ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕು. ಪ್ರತಿ ಗ್ರಾಮದಲ್ಲಿಯೂ ಸಹ ಯಾವುದೇ ಮೂಲಭೂತ ಸೌಕರ್ಯಗಳು ಆಗಬೇಕಿರುವುದನ್ನು ಗಮನಿಸಿ ವಿವಿಧ ಯೋಜನೆಗಳ ಮತ್ತು ಸರಕಾರದ ಹಂತದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಾಡಲಾಗಿದೆ. ನೂತನ ಎಂಪಿಸಿಎಸ್ ಸಂಘ ಬಲಿಷ್ಟವಾಗಿ ಬೆಳೆಯಲು ನನ್ನ ಸಹಕಾರ ಇರುತ್ತದೆ ಎಂದರು.

CHETAN KENDULI

ಜೆಡಿಎಸ್ ಮುಖಂಡ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಸುಮಾರು ೩೫ ವರ್ಷಗಳಿಂದ ಈ ಭಾಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವಿರಲಿಲ್ಲ. ಹಲವಾರು ಬಾರಿ ಕಟ್ಟಡಕ್ಕಾಗಿ ಪ್ರಯತ್ನ ಪಡಲಾಗಿತ್ತು. ಚನ್ನಕೃಷ್ಣಪ್ಪ ಹಾಗೂ ಊರಿನ ಮುಖಂಡರ ಸಹಕಾರದಲ್ಲಿ ಸರಕಾರಿ ಜಾಗವನ್ನು ಗುರ್ತಿಸಿ, ಆ ಜಾಗದಲ್ಲಿ ನೂತನ ಎಂಪಿಸಿಎಸ್ ಕಟ್ಟಡವನ್ನು ಸುಮಾರು ೧೬ಲಕ್ಷ ೫೦ ಸಾವಿರ ರೂ.ವೆಚ್ಚದಲ್ಲಿ ಎರಡು ಹಂತಸ್ತಿನ ಕಟ್ಟಡವನ್ನು ಕಟ್ಟಲು ಮುಖ್ಯ ಪಾತ್ರ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘವು ಉತ್ತಮವಾಗಿ ಬೆಳೆಯುವಂತಾಗಬೇಕು. ಹಾಲು ಸರಬರಾಜು ಹೆಚ್ಚಳ ಮಾಡಬೇಕು. ಈ ಭಾಗದಲ್ಲಿ ಸಾಕಷ್ಟು ಜನರು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಸಂಘಕ್ಕೆ ಯಾವ ಸಂದರ್ಭದಲ್ಲಿಯೂ ಸಹ ಸಹಕಾರವನ್ನು ನೀಡಲಾಗುತ್ತದೆ ಎಂದು ಹೇಳಿದರು.

ಎಂಪಿಸಿಎಸ್ ಅಧ್ಯಕ್ಷ ಬಚ್ಚಹಳ್ಳಿ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಡಕ್ ಸಮಿತಿ ಅಧ್ಯಕ್ಷ ಆರ್.ಮುನೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ವೀಣಾರಾಣಿ ನವೀನ್‌ಕುಮಾರ್, ಸದಸ್ಯರು, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರವೀಂದ್ರ, ತಾಪಂ ಸದಸ್ಯ ಎಸ್.ಮಹೇಶ್, ಬಮೂಲ್ ಒಕ್ಕೂಟದ ಮುಖ್ಯಸ್ಥ ಎಂ.ಸ್ವಾಮಿ, ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ, ಬಮೂಲ್ ನಿರ್ದೇಶಕ ಶ್ರೀನಿವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಊರಿನ ಮುಖಂಡರಾದ ದೊಡ್ಡೇಗೌಡ, ಅಶ್ವತ್ಥ್ ನಾರಾಯಣ್, ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*