ವೈಭವದಿಂದ ಜರುಗಿದ ಅನಂತ ಚತುರ್ದಶಿ ವೃತ (ಅನಂತ ನೋಪಿ)

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳ

ನಗರದ ಶ್ರೀ ಕಾಮಾಕ್ಷೀ ದೇವಸ್ಥಾನ, ಚೋಳೇಶ್ವರ ದೇವಸ್ಥಾನ, ವಡೇರ ಮಠ, ಮೂಡಭಟ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶ್ರೀ ತಿರುಮಲ ದೇವಸ್ಥಾನ, ಶ್ರೀ ಆದಿಕೇಶವ ದೇವಸ್ಥಾನ, ಶ್ರೀರಾಮಚಂದ್ರ ದೇವಸ್ಥಾನ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಸೋನಾರಕೇರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಸೇರಿದಂತೆ ಸಂಪ್ರದಾಯದಿಂದ ಪಾಲಿಸಿಕೊಂಡು ಬಂದ ಬಕ್ತರ ಮನೆಗಳಲ್ಲಿಯೂ ವೈಭವದಿಂದ ಆಚರಿಸಲ್ಪಟ್ಟಿತು. ಗಣೇಶ ಚೌತಿಯದಿನ ಚಂದ್ರನ ದರ್ಶನವಾದರೆ ಕಳ್ಳತನದ ಅಪವಾದ ಬರುವುದು ಎಂದು ಪುರಾಣಗಳಲ್ಲಿ ಉಲ್ಲೆಖ. ಅಪವಾದ ನಿವಾರಣೆಗಾಗಿ ಅನಂತ ನೋಪಿಯ ಪ್ರಸಾದ ಸ್ವೀಕರಿಸುವ ಸಂಪ್ರದಾಯ ಬೆಳೆದುಬಂದಿದೆ ಅಂತೆಯೆ ಭಕ್ತಾದಿಗಳು ಶ್ರೀ ಅನಂತಪದ್ಮನಾಭ (ನೋಪಿ ಕಲಶಕ್ಕೆ) ದೇವಾಲಯಗಳಿಗೆ ತೆರಳಿ ಹಣ್ಣುಕಾಯಿ ಸಮರ್ಪಣೆ ಮಾಡಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

CHETAN KENDULI

Be the first to comment

Leave a Reply

Your email address will not be published.


*