ಅಕ್ರಮ ಗಾಂಜಾ ಮಾರಾಟ; ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ

CHETAN KENDULI

ಶಿರಸಿ: ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ಶಿರಸಿ ಸಿ.ಪಿ.ಐ. ರಾಮಚಂದ್ರ ನಾಯಕ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ಮಂಜುನಾಥ ಗೋಪಾಲ ಪಾಠಣಕರ 27 ವರ್ಷ ಅಯ್ಯಪ್ಪನಗರ, ಹರೀಶ ಮಂಜುನಾಥ ನಾಯ್ಕ 26 ವರ್ಷ, ವಿರೇಶ ಕಾರ್ತಿಕ ಸಿರ್ಸಿಕರ 21 ವರ್ಷ ಎಂಬುವರೇ ಬಂಧಿತ ಅರೋಪಿಗಳಾಗಿದ್ದಾರೆ.

ಈ ಮೂವರು ಅಕ್ರಮವಾಗಿ ಕೆ.ಎಚ್.ಬಿ. ಕಾಲೋನಿ ಬಳಿ ಗಾಂಜಾ ಮಾರಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಸಿ.ಪಿ.ಐ. ರಾಮಚಂದ್ರ ನಾಯ್ಕ ಹಾಗೂ ಮಾರುಕಟ್ಟೆ ಪಿ.ಎಸ್.ಐ. ಭೀಮಾಶಂಕರ ದಾಳಿ ನಡೆಸಿ ಆರೋಪಿತರಿಂದ 228 ಗ್ರಾಂ ಗಾಂಜಾವನ್ನು, ನಗದು 1250 ರೂ, 3 ಮೊಬೈಲ್ ಒಂದು ಹೊಂಡಾ ಎಕ್ಟಿವಾ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.


ಅಲ್ಲದೆ ಮೊದಲನೇ ಆರೋಪಿಯಾದ ಮಂಜುನಾಥ ಗೋಪಾಲ ಪಾಠಣಕರ ಈತನ ಮೇಲೆ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಪೆÇಲೀಸ್ ಠಾಣೆಯಲ್ಲಿ 4 ಗಾಂಜಾ ಪ್ರಕರಣ ಗಳು, 2 ಸುಲಿಗೆ ಪ್ರಕರಣ ಗಳು ಹಾಗೂ ಒಂದು ದೊಂಬಿ ಪ್ರಕರಣ ದಾಖಲಾಗಿರುತ್ತದೆ. ಈ ಯಶಸ್ವಿ ಕಾರ್ಯಾಚರಣೆ ಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ, ಹೆಚ್ಚುವರಿ ವರಿಷ್ಠಾಧಿಕಾರಿ ಬದರಿನಾಥ, ಡಿ.ಎಸ್.ಪಿ. ರವಿ ನಾಯ್ಕ ಅವರ ಮಾರ್ಗದರ್ಶನ ದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ಮಾರುಕಟ್ಟೆ ಪಿಎಸ್.ಐ. ಭೀಮಾಶಂಕರ, ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ ಪೂಜಾರಿ, ಮೋಹನ ನಾಯ್ಕ, ಹನುಮಂತ ಮಾಕಾಪುರ ಹಾಗೂ ಚಾಲಕ ಪಾಂಡುರಂಗ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*