ಜಿಲ್ಲಾ ಸುದ್ದಿಗಳು
ಹೊನ್ನಾವರ
ಹೊನ್ನಾವರ ಪಟ್ಟಣದ ಹಿರಿಮೆ ಹೆಚ್ಚಿಸಬೇಕಿದ್ದ ಶರಾವತಿ ವೃತ್ತ ರಾಶಿ ರಾಶಿ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲೆಯ ಪ್ರತೀ ತಾಲೂಕ್ ಗೆ ಸರ್ಕಲ್ ಗೆ ತನ್ನದೇ ಆದ ವೈಶಿಷ್ಟ್ಯವಿದೆ. ಪಟ್ಟಣದ ಭಟ್ಕಳ ಹಾಗೂ ಕುಮಟಾ ಮಾರ್ಗಕ್ಕೆ ಸರ್ಕಲ್ ರೀತಿಯಲ್ಲಿರುವ ಶರಾವತಿ ವೃತ್ತಕ್ಕೆ ಹಲವು ವರ್ಷಗಳಿಂದ ಸುಸಜ್ಜಿತ ನಾಮಫಲಕ ಹಾಗೂ ಕಾರಂಜಿ ಪಟ್ಟಣ ಪಂಚಾಯತಿ ನಿರ್ಮಿಸಿಕೊಟ್ಟಿತ್ತು. ಇದರಿಂದ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಹೊನ್ನಾವರದ ಸರ್ಕಲ್ ಕಂಗೊಳಿಸುತ್ತಿತ್ತು.
ಕಳೆದ ಎರಡು ವರ್ಷಗಳಿಂದ ಕಾರಂಜಿ ಕೆಟ್ಟು ನಿಂತಿದೆ. ಈ ವೃತ್ತದ ಒಳಗೆ ಕಸ ಹಾಗೂ ಮುಳ್ಳಿನ ಪೊದೆ ಬೆಳೆದಿದೆ. ಇಲ್ಲಿನ ಸುತ್ತಲೂ ಅಳವಡಿಸಿದ ಕಬ್ಬಿಣದ ಸರಳಿಗೆ ಬಟ್ಟೆ ನೇತಾಡುತ್ತಿರುವುದು ಕಂಡು ಬರುತ್ತಿದೆ. ಪಟ್ಟಣದ ಪ್ರಮುಖ ಕೆಂದ್ರವಷ್ಟೇ ಅಲ್ಲದೆ , ಪಟ್ಟಣ ಪಂಚಾಯತಿ ಮುಂಭಾಗದಲ್ಲೇ ಇದೆ ಆದರೂ ಇದರ ಸ್ವಚ್ಛತೆ ಹಾಗೂ ಕಾರಂಜಿ ದುರಸ್ತಿಗೆ ಅಧಿಕಾರಿಗಳಾಗಲೀ, ಜನಪೃತಿನಿಧಿಗಳಾಗಲೀ ಮುಂದಾಗಲಿಲ್ಲ. ಇನ್ನೂ ಇಲ್ಲಿ ಅಳವಡಿಸಿದ ಸಿ.ಸಿ.ಕ್ಯಾಮೆರಾವು ಕೆಟ್ಟು ವರ್ಷಗಳೇ ಕಳೆದಿದೆ. ಕೆಟ್ಟು ಹೋದ ಹಾಗೂ ಕಸದ ತೊಟ್ಟಿಯಂತಾದ ಶರಾವತಿ ಸರ್ಕಲ್ ಬದಲಾಗಿರುವುದಕ್ಕೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ. ಸದಾ ಜನಸಂಚಾರವಿರುವ ಈ ಪ್ರದೇಶದ ಸ್ಥಿತಿಯೇ ಹೀಗಾದರೆ ಇನ್ನುಳಿದ ಕಡೆ ಯಾವ ರೀತಿಯಲ್ಲಿ ನಿರ್ಲಕ್ಷ್ಯತೆ ಇರಬಹುದು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನು ಸ್ವಚ್ಛತೆ ಮಾಡಬೇಕಿದ್ದ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಗೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Be the first to comment