ಜಿಲ್ಲಾ ಸುದ್ದಿಗಳು
ಹೊನ್ನಾವರ
ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ಹೊನ್ನಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಜಕೀಯ ವೈಶಮ್ಯಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸಂಗಡಿಗರು ತಾ.ಪಂ ಸದಸ್ಯನನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದು ಗುರುವಾರ ತಡರಾತ್ರಿ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಕರ್ಕಿ ನಡುಚಿಟ್ಟೆಯ ನಿವಾಸಿ , ರಾಜಕೀಯದಲ್ಲಿ ಸಕ್ರೀಯವಾಗಿದ್ದ ನಿಕಟಪೂರ್ವ ತಾಲೂಕು ಸದಸ್ಯ ತುಕಾರಾಮ ನಾಯ್ಕ ರ ಮೇಲೆ ಹಲ್ಲೆಯಾಗಿದ್ದು ಚಿಕ್ಕನಕೋಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಹಾಗೂ ಇತರ ಐದಾರು ಜನರು ಸೇರಿಕೊಂಡು ಹಲ್ಲೇ ಮಾಡಿ, ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದು ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೆ ಒಳಗಾಗಿರುವ ಸಮಾಜ ಸೇವಕ ತುಕಾರಾಮ ನಾಯ್ಕ ಸ್ಕೂಟಿಯಲ್ಲಿ ಹೊನ್ನಾವರ ಕಡೆಯಿಂದ ತನ್ನ ಮನೆಯಿರುವ ಕರ್ಕಿ ಕಡೆ ಹೋಗುತ್ತಿರುವಾಗ ಕರ್ನಲ್ ಹಿಲ್ ಸಮೀಪ ಇರುವ ಪಂಚರ್ ಶಾಪ್ ಹತ್ತಿರ ಪಕ್ಕ ನಿತಿದ್ದ ಚಿಕ್ಕನಕೊಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಕೈ ಅಡ್ಡ ಮಾಡಿ ಸ್ಕೂಟಿ ನಿಲ್ಲಿಸುವಂತೆ ಹೇಳಿ ಆರೋಪಿಗಳು ಕಾರಿನಿಂದ ಇಳಿದು ಬಂದ ವಿಘ್ನೇಶ್ವರ ಹಾಗೂ ಸಹಚರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದು ಆರೋಪಿಗಳ ವಿರುದ್ಧ ಕಲಂ 307 ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಹೊನ್ನಾವರ ಪೋಲೀಸರು ಸಹಚರರಾದ ಮೂವರು ಆರೋಪಿಗಳಾದ ಹರೀಶ್ನಾಯ್ಕ, ಅರುಣ ಈಶ್ವರ ನಾಯ್ಕ, ಕೃಷ್ಣ ಹನುಮಂತ ನಾಯ್ಕ, ಇವರನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡ ಉಳಿದ ಆರೌಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Be the first to comment