ಜಿಲ್ಲಾ ಸುದ್ದಿಗಳು
ಶಿರಸಿ
ಧರೆಯ ಇಳಿಜಾರಿನಲ್ಲಿ ಹಾಕಲಾಗಿದ್ದ ತಂತಿಗೆ ಸಿಲುಕಿ ಅಪರೂಪದ ಕಪ್ಪುಚಿರತೆ ಮೃತಪಟ್ಟ ಘಟನೆ ತಾಲೂಕಿನ ಬೆಂಗಳೆ ಗ್ರಾಮದ ಹುಲೇಮಳಗಿ ,ಮಂಟಕಾಲ ಮಧ್ಯಭಾಗದ ರಸ್ತೆಯಂಚಿನಲ್ಲಿ ಶುಕ್ರವಾರ ನಡೆದಿದೆ.ಬನವಾಸಿ ಅರಣ್ಯ ವ್ಯಾಪ್ತಿಯ ಈ ಪ್ರದೇಶದಲ್ಲಿ ಮುಂಜಾನೆ ತಂತಿಯ ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದ ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಕಂಡು ಸ್ಥಳೀಯರು ಕೆಲವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ನೋವಿನಿಂದ ಕೂಗುತ್ತಿದ್ದ ಚಿರತೆಯ ಬಳಿ ತೆರಳಿ ರಕ್ಷಿಸುವುದಕ್ಕೂ ಭಯಗೊಳ್ಳುವ ಸ್ಥಿತಿಯಿತ್ತು .ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಲೆ ಹಾಕಿ ಚಿರತೆ ಹಿಡಿದು ರಕ್ಷಿಸುವ ಪ್ರಯತ್ನ ಮಾಡಿದರು ತಂತಿಯ ಉರುಳಿನಿಂದ ಸೊಂಟಕ್ಕೆ ಗಂಭೀರ ಗಾಯವಾದ ರಿಂದ ಚಿರತೆ ರಕ್ಷಿಸುವುದು ಪ್ರಯತ್ನ ಸಫಲವಾಗಲಿಲ್ಲ
ಇನ್ನು ಚಿರತೆ ಸಿಲುಕಿರುವ ಸುದ್ದಿ ಸುತ್ತಲಿನ ಊರುಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಸಾಕಷ್ಟು ಜನರು ಅಲ್ಲಿ ಜಮಾಯಿಸಿದ್ದರು ಕೆಲವರು ದೂರದಲ್ಲಿ ನಿಂತು ಇನ್ನು ಕೆಲವರು ಭಯದಿಂದ ಮರವನ್ನೇರಿ ಕುತೂಹಲದಿಂದ ವೀಕ್ಷಿಸಿದರು.
ಈ ನಡುವೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ ಹೆಗಡೆ ವಲಯ ಅರಣ್ಯ ಅಧಿಕಾರಿಗಳ ಉಷಾ ಕಬ್ಬೇರ ನೇತೃತ್ವದಲ್ಲಿ ಅರಣ್ಯ ಇಲಾಖೆ 30ಕ್ಕೊ ಹೆಚ್ಚು ಸಿಬ್ಬಂದಿ ರಕ್ಷಿಸುವ ಪ್ರಯತ್ನ ನಡೆಸಿದರು ಯಶಸ್ವಿಯಾಗಲಿಲ್ಲ ಚಿರತೆ ಹಿಡಿಯಲು ಶಿವಮೊಗ್ಗದಿಂದ ತಜ್ಞರ ತಂಡ ಬರುವ ಹೊತ್ತಿಗೆ ಚಿರತೆ ಮೃತಪಟ್ಟಿದ್ದು ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಲಯ ಅರಣ್ಯಾಧಿಕಾರಿ ಕಚೇರಿ ಆವಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
Be the first to comment