ಜಿಲ್ಲಾ ಸುದ್ದಿಗಳು
ಕುಮಟಾ
ಕುಮಟಾ ಕೆಲವು ಪರ್ತಕರ್ತರು ಎಂದು ಹೇಳಿಕೊಳ್ಳುವವರು ಕೂಜಳ್ಳಿ ಟೈಮ್ಸ್ ಸ್ಥಳೀಯ ಸುದ್ದಿವಾಹಿನಿಯು ಯಾವುದೇ ನೊಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತದೆ ಎಂದು ಜನರಲ್ಲಿ ಗೊಂದಲ ಮೂಡಿಸುತ್ತಿದ್ದು, ಪ್ರತಿಕಾಗೋಷ್ಠಿಯು ಸೇರಿದಂತೆ, ಸುದ್ದಿಯ ವರದಿಗಾರಿಕೆಗೆ ತೆರಳಿದಾಗ, ಸಾರ್ವಜನಿಕರ ಮುಂದೆ ಈ ಸಂಸ್ಥೆಯು ನೊಂದಣಿ ಇಲ್ಲ ಎಂದು ಕೆಲವು ಪತ್ರಕರ್ತರು ಆಕ್ಷೇಪವನ್ನು ವ್ಯಕ್ತಪಡಿಸಿ, ಸಾರ್ವಜನಿಕರ ಮುಂದೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ, ಇದರಿಂದಾಗಿ ವೀಕ್ಷಕರಿಗೆ, ಸಾರ್ವಜನಿಕರಿಗೆ ತಪ್ಪು ಮಾಹಿತಿಯಿಂದ ಗೊಂದಲ ಉಂಟಾಗಬಾರದು ಎಂದು ಕೂಜಳ್ಳಿ ಟೈಮ್ಸ್‌ನ ನೊಂದಣಿಗೆ ಸಂಭಂದಿಸಿದ ದಾಖಲೆಗನ್ನೊಳಗೊಂಡ ಮನವಿ ಪತ್ರವನ್ನು ಕುಮಟಾ ಸಹಾಯಕ ಆಯುಕ್ತರಿಗೆ, ಹಾಗೂ ಕುಮಟಾ ಪೋಲಿಸ್ ವೃತ್ತ ನಿರೀಕ್ಷಕರಿಗೆ ಸಲ್ಲಿಸಲಾಯಿತು. ಈ ವೇಳೆ ಜನರಲ್ಲಿ ಅನಗತ್ಯ ಗೊಂದಲ ಮೂಡಿಸಿಸುವವರ ಮೇಲೆ ಕಾನೂನು ಕ್ರಮಕೈಗೋಳ್ಳಬೇಕು ಎಂದು ಮನವಿ ನೀಡಲಾಯಿತುಈ ವೇಳೆ ಮಾತನಾಡಿದ ಕೂಜಳ್ಳಿ ಟೈಮ್ಸ್‌ನ ಸಂಪಾದಕಾರದ ಪ್ರಜೋತ ಕೂಜಳ್ಳಿ ಮಾತನಾಡಿ, ನಮ್ಮ ಸಂಸ್ಥೆಯು ಏಳಿಗ್ಗೆಯನ್ನು ಸಹಿಸದೇ ಕೆಲ ಪತ್ರಕರ್ತರೂ ಸಂಸ್ಥೆಯ ಬಗ್ಗೆ ಜನರಲ್ಲಿ ಗೊಂದಲ ಮೊಡಿಸುತ್ತಿದ್ದಾರೆ, ಕೂಜಳ್ಳಿ ಟೈಮ್ಸ್ ಮಾಸ ಪತ್ರಿಕೆಯು ಕೂಡಾ ಸದ್ಯದಲ್ಲೇ ಬರಲಿದ್ದು, ಮಾಸ ಪತ್ರಿಕೆಗಾಗಿ ದೆಹಲಿಯಿಂದ ಆರ್.ಎನ್.ಆಯ್ ನೊಂದಣಿಯಾಗಿದೆ. ಇದರಿಂದ ಹತಾಶರಾದ ಕೆಲ ಪತ್ರಕರ್ತರು ಅಪಪ್ರಚಾರ ಮಾಡುತ್ತಿದ್ದಾರೆ, ಮಾದ್ಯಮದಲ್ಲಿ ಪೈಪೋಟಿಗಳು ಸಾಮಾನ್ಯವಾಗಿದ್ದು, ಆರೋಗ್ಯಕರ ಪೈಪೋಟಿ ಇದ್ದರೆ ಉತ್ತಮ ಬೆಳವಣಿಗೆ ಸಾಧ್ಯ. ಅದರ ಬದಲು ಬಂದು ಸಂಸ್ಥೆಯ ಬಗ್ಗೆ ಜನರಲ್ಲಿ ಅಪಪ್ರಚಾರ ಮಾಡಿ ಗೊಂದಲ ಮೂಡಿಸುವುದು ಎಷ್ಟರ ಮಟ್ಟಿಗೆ ಸರಿ, ಇಂತಹ ಸನ್ನಿವೇಶಗಳು ಮರುಕಳಿಸಿದರೆ ಅಂತವರ ವಿರುದ್ದ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿಲಾಗುವುದು ಎಂದು ಹೇಳಿದರು.
ಈ ವೇಳೆ ಭಟ್ಕಳದ ಪತ್ರಕರ್ತರಾದ ಅರ್ಜುನ ಮಲ್ಯ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿರುವುದು ಕುಮಟಾದಲ್ಲಿ ಪತ್ರಿಕಾಭವನ ನಿರ್ಮಾಣವಾಗಬೇಕು ಎಂದು ಹೋರಾಟ ಮಾಡಬೇಕು ಅದರ ಬದಲು ಸುಖಾಸುಮ್ಮನೆ ಒಬ್ಬರ ಎಳಿಗ್ಗೆಯನ್ನು ಸಹಿಸದೇ ಒಂದು ಸಂಸ್ಥೆಯನ್ನು ತುಳಿಯುವುದು ಸರಿಯಲ್ಲ ಎಂದು ಹೇಳಿದರು
ಈ ಸಂಧರ್ಭದಲ್ಲಿ ಸ್ಥಳೀಯರಾದ, ಮಾರುತಿ ನಾಯ್ಕ, ಗಜಾನನ ಹಳ್ಳೇರ, ಶ್ರೀನಿವಾಸ ನಾಯ್ಕ ಇತರಿದ್ದರು.
Be the first to comment