ರಾಜ್ಯ ಸುದ್ದಿಗಳು
ದೇವನಹಳ್ಳಿ
ಕೇಂದ್ರ ಮತ್ತು ರಾಜ್ಯ ಸರಕಾರ ಕೊರೊನಾ ನಿಯಂತ್ರಣದಲ್ಲಿ ಸಾಕಷ್ಟು ಎಡವುತ್ತಿದ್ದು, ಸಮಪರ್ಕ ಲಸಿಕೆಯನ್ನು ಸಕಾಲದಲ್ಲಿ ಜನರಿಗೆ ದೊರೆಯುವಂತೆ ಮಾಡಬೇಕು ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಆಸ್ಪತ್ರೆಯೊಂದರಲ್ಲಿ ಕೋವಿಡ್ ಎರಡನೇ ಡೋಸ್ ಲಸಿಕೆಯನ್ನು ಪಡೆದು ಅವರು ಮಾತನಾಡಿದರು. ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ಮೊದಲನೇ ಅಲೆಯಲ್ಲಿ ಸಾಕಷ್ಟು ಜನರು ಸಂಕಷ್ಟದಲ್ಲಿ ಸಿಲುಕುವಂತೆ ಆಯಿತು. ಎರಡನೇ ಅಲೆಯಲ್ಲಿ ಸಾಕಷ್ಟು ಜನರ ಪ್ರಾಣಗಳು ಹೋದವು. ಕುಟುಂಬಗಳೇ ಅನಾಥವಾದ ವರದಿಗಳು ನೋಡಿದ್ದೇವೆ. ಕೊರೊನಾಗೆ ಸರಿಯಾದ ಲಸಿಕೆ ಕಂಡುಕೊಳ್ಳುವಲ್ಲಿ ಸರಕಾರಗಳು ಸರಿಯಾದ ಕ್ರಮಗಳನ್ನು ಕೈಗೊಂಡಿದ್ದರೆ ಎಷ್ಟೋ ಪ್ರಾಣಗಳು ಉಳಿಯುತ್ತಿದ್ದವೇನೋ. ಈಗಲೂ ಸಹ ಗ್ರಾಮೀಣ ಭಾಗದಲ್ಲಿರುವ ಜನರಿಗೆ ಸಮರ್ಪಕ ಲಸಿಕೆ ಸಿಗುತ್ತಿಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೋದರೆ, ವ್ಯಾಕ್ಸಿನ್ ಇಲ್ಲ ಎಂಬ ಮಾತುಗಳು ಕೇಳುತ್ತಿವೆ. ಇದರಿಂದ ಕೊರೊನಾ ಸಾಂಕ್ರಾಮಿಕ ರೋಗ ಹರಡುವುದಕ್ಕೆ ಕಾರಣವಾಗಬಹುದು. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಚಿಂತನೆ ಮತ್ತು ಯೋಜನೆ ರೂಪಿಸಿ ಜನರ ಸಂಕಷ್ಟಗಳ ಕಾಲದಲ್ಲಿ ಸ್ಪಂಧಿಸುವ ಕೆಲಸವನ್ನು ಶೀಘ್ರವಾಗಿ ಮಾಡಬೇಕು ಎಂದು ಹೇಳಿದರು.
ಸರಕಾರ ಜನರ ರಕ್ಷಣೆ ಮಾಡಲು ಸೀಲ್‌ಡೌನ್, ಕರ್ಫ್ಯೂ, ಲಾಕ್‌ಡೌನ್ ಹೀಗೆ ಹಲವು ರೀತಿಯಲ್ಲಿ ಆದೇಶ ಹೊರಡಿಸುವುದನ್ನು ಬಿಟ್ಟು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯೋಜನೆ ರೂಪಿಸಬೇಕು. ಜನರು ಆರೋಗ್ಯಕ್ಕೆ ತಮ್ಮದೇ ಆದಂತೆ, ಒತ್ತು ನೀಡುತ್ತಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ಲಾಕ್‌ಡೌನ್ ಅಸ್ತ್ರವನ್ನು ಬಿಟ್ಟು ಬೇರೆ ರೀತಿಯಲ್ಲಿ ಯೋಜನೆ ರೂಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ಜನಸಾಮಾನ್ಯರು ಸಾಕಷ್ಟು ಬೇಸತ್ತುಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Be the first to comment