ಅಣ್ಣಮಲೈ ಹೇಳಿಕೆ ವಿರುದ್ಧ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಆಕ್ರೋಶ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಮೇಕೆದಾಟು ಯೋಜನೆಯ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಕರ್ನಾಟಕ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಮಲೈ ಹೇಳಿಕೆ ವಿರುದ್ಧ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ವೀರೋಧಿಸುತ್ತೇವೆ ಎಂದು ಕರವೇ ಜಿಲ್ಲಾ ಯುವ ಅಧ್ಯಕ್ಷ ಅರ್ಷಿಗೌಡ ಕಿಡಿಕಾರಿದರು.

CHETAN KENDULI

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ಕರವೇ ಮುಂದಾಳತ್ವದಲ್ಲಿ ಹೋರಾಟ ನಡೆಸಲಾಗುತ್ತಿದ್ದು, ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಕನ್ನಡ ನಾಡು-ನುಡಿ, ಮಣ್ಣಿನ ನೆಲವನ್ನು ಗೌರವಿಸದೆ, ತಮಿಳುನಾಡಿನ ರಾಜಕಾರಣದ ಲಾಭಕ್ಕಾಗಿ ಮೇಕೆದಾಟು ಯೋಜನೆಯ ವಿರುದ್ಧ ಹೋರಾಟ ನಡೆಸುತ್ತಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಅಣ್ಣಮಲೈ ಅವರನ್ನು ಸಿಂಗಂ ಎಂದೇ ಪೊಲೀಸ್ ಇಲಾಖೆಯಲ್ಲಿ ಗುರ್ತಿಸುವಂತೆ ಕನ್ನಡಿಗರು ಮಾಡಿದ್ದಾರೆ. ತಮಿಳುನಾಡಿನಲ್ಲಿ ರಾಜಕೀಯವನ್ನು ಮಾಡಬೇಕಾದರೆ, ಈ ನೆಲದಲ್ಲಿ ಸೇವೆ ಸಲ್ಲಿಸಿದ ಋಣ ಇರುವುದು ಮರೆಯಬಾರದು. ಅಣ್ಣಮಲೈ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡಬಾರದು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾದ ಮೇಕೆದಾಟು ಯೋಜನೆ ಅತೀ ಅವಶ್ಯಕವಾಗಿದೆ.

ಈ ಬಗ್ಗೆ ಎರಡೂ ರಾಜ್ಯಗಳ ಶಾಂತಿ ಕಾಪಾಡುವುದನ್ನು ಬಿಟ್ಟು ಅಶಾಂತಿ ಕದಡುವ ಕೆಲಸಕ್ಕೆ ಮುಂದಾಗುತ್ತಿರುವುದು ಅವರ ಘನತೆ ಶೋಭೆ ತರುವಂತಹದ್ದಲ್ಲ. ಬಿಜೆಪಿ ಪಕ್ಷದ ನಿಷ್ಠೆಗಾಗಿ ತಮಿಳುನಾಡಿನ ರಾಜ್ಯದಲ್ಲಿ ಅಧಿಕಾರದಾಸೆಗೆ ಮೇಕೆದಾಟು ಯೋಜನೆಯ ವಿಚಾರವನ್ನು ಕೈಗೆತ್ತಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರ ಇಂತಹ ರಾಜ್ಯದ ನಡುವೆ ಶಾಂತಿ ಕದಡುವವರ ಮಾತಿಗೆ ಮಣೆ ಹಾಕಬಾರದು ಎಂದು ಸರಕಾರಕ್ಕೆ ಒತ್ತಾಯಿಸಿದರು.

Be the first to comment

Leave a Reply

Your email address will not be published.


*