ಹಾಲಾಪೂರ ಗ್ರಾ.ಪಂ : ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಡಿ ಎಸ್.ಎಸ್ ಒತ್ತಾಯ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಮಸ್ಕಿ ತಾಲೂಕಿನ
ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ 2021-2022 ನೇ ಸಾಲಿನ ನರೇಗಾ ಯೋಜನೆಯಲ್ಲಿ ಹಾಗೂ 15 ನೇ ಹಣಕಾಸಿನ ಯೋಜನೆಯಡಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಾಮಗಾರಿ ನಿರ್ವಹಿಸದೇ ಬೋಗಸ್ ಬಿಲ್ಲ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕರ್ತವ್ಯದಿಂದ ವಜಾ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ದಾದಾಸಾಹೇಬ್ ಡಾ. ಎನ್.ಮೂರ್ತಿ ಸ್ಥಾಪಿತ ) ಒತ್ತಾಯಿಸಿದೆ.ಈ ಕುರಿತು ತಾಲೂಕು ಪಂಚಾಯತ್ ಸಹಾಯಕ ಕಾರ್ಯನಿರ್ವಾಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಹಾಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲನಗೌಡ, ನೋಡಲ್ ಅಧಿಕಾರಿ ಶಿವಾನಂದ ರೆಡ್ಡಿ ಮತ್ತು ಸಂಬಂಧಿಸಿದಅಧಿಕಾರಿಗಳು 2021 -22 ನೇ ಸಾಲಿನ ನರೇಗಾ ಯೋಜನೆಯಡಿ ಮತ್ತು 15 ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸದೇ ಬೋಗಸ್ ಬಿಲ್‌ಗಳನ್ನು ಮಾಡಿದ್ದಾರೆ.

CHETAN KENDULI

ರಾಜೀವ್ ಗಾಂಧಿ ಸೇವಾ ಕೇಂದ್ರ ಕಾಮಗಾರಿಯು ಹಾಲಾಪೂರ ಗ್ರಾಮ ಪಂಚಾಯತ್ ಛಾವಣಿ ಮೇಲ್ಗಡೆ ಮಾಡಬೇಕು ಆದರೆ ಗ್ರಾ.ಪಂ ಕಟ್ಟಡಕಾಮಗಾರಿ ಮಾಡದೇ ಮುಂಗಡ 13,57,445 ರೂಪಾಯಿಗಳನ್ನು ಹಣವನ್ನು ಲಪಟಾಯಿಸಿದ್ದಾರೆ. 9 ಲಕ್ಷ ರೂ ವರ್ಕ ಎಂಟ್ರಿ ಮಾಡಿ ಬೋಗಸ್ ಬಿಲ್ ಎತ್ತಲಾಗಿದೆ. ನರೇಗಾ ಯೋಜನೆಯಡಿ ಮರನ ಹೊಂದಿದ ಫಲಾನುಭವಿಗಳ ಹೆಸರಲ್ಲಿ ಎನ್‌ಎಂಆರ್ ಹಾಕಿ ಹಣವನ್ನು ಡಾಟಾ ಆಪರೇಟರ್ ಆದ ರಂಗಪ್ಪ ಹಾಲಾಪೂರು ಪಿಡಿಓ ಸೇರಿಕೊಂಡು ಹಣ ಲಪಟಾಯಿಸಿದ್ದಾರೆ.

ನರೇಗಾ ಯೋಜನೆಯಡಿ ಸುಮಾರು 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಈ ಅನುದಾನವು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರು ಶಾಮೀಲಾಗಿ ಹಣ ದುರ್ಭಳಕೆ ಮಾಡಿಕೊಂಡಿದ್ದಾರೆ. ಕುಡಿಯುವ ನೀರಿನ ನೈರ್ಮಲೀಕರಣ ಹಾಗೂ ಅಂಗವಿಕಲರ ಕಲ್ಯಾಣ ನಿಧಿ ಕಾಮಗಾರಿ ಮಾಡದೇ ಬೋಗಸ್ ಬಿಲ್ ಮಾಡಿದ್ದಾರೆ. ಕಾಮಗಾರಿ ಅರೆಬರೆ ಮಾಡಿ ಮುಚ್ಚಿಹಾಕಲಾಗಿದೆ. ಆದ್ದರಿಂದ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೋಡಗಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಸಮಿತಿಯ ಮರಿಸ್ವಾಮಿ ಮುದಬಾಳ ಹಾಗೂ ಸುಭಾಷ್ ಹಿರೇಕಡಬೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*