ರಾಜ್ಯ ಸುದ್ದಿಗಳು
ದೇವನಹಳ್ಳಿ
ಸುಮಾರು ವರ್ಷಗಳಿಂದ ಐತಿಹಾಸಿಕ ಕೊಯಿರ ಗುಹಾಂತರದಲ್ಲಿ ನೆಲೆಸಿರುವ ಬಂಡೆ ಭೀಮೇಶ್ವರ ದೇಗೂಲಕ್ಕೆ ಹೋಗಬೇಕಾದರೆ, ಎದ್ದುಬಿದ್ದು ಹೋಗುವ ಪರಿಸ್ಥಿತಿ ಇದೆ. ಬೆಟ್ಟದ ಮೊದಲ ಹಂತದಲ್ಲಿರುವ ಮುಜುರಾಯಿ ಇಲಾಖೆ ಸೇರಿರುವ ಪುರಾತನ ದೇಗುಲಕ್ಕೆ ದಾರಿ ಕಾಣದೆ, ತಡಿಪಡಿಸುವಂತಿದೆ. ದೇಗುಲದ ರಸ್ತೆ ಅಭಿವೃದ್ಧಿಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಗುಹಾಂತರ ಹೊಂದಿರುವ ಏಕೈಕ ಬೆಟ್ಟವೆಂದರೆ ಅದು ಕೊಯಿರ ಬೆಟ್ಟವಾಗಿದ್ದು, ಕೊಯಿರ ಬೆಟ್ಟದ ಅಭಿವೃದ್ಧಿಯ ಜೊತೆಗೆ ಮುಜುರಾಯಿ ಇಲಾಖೆಯವರು ದೇವಾಲಯದ ಅಭಿವೃದ್ಧಿಗೆ ಮುಂದಾಗಬೇಕು. ಸ್ಥಳಿಯವಾಗಿ ಮನಗೊಂಡನಹಳ್ಳಿ, ಕೊಯಿರ, ಅರುವನಹಳ್ಳಿ ಮತ್ತು ರಾಮನಾಥಪುರ ಗ್ರಾಮಗಳ ಮಧ್ಯೆ ಇರುವ ಈ ದೇಗುಲವನ್ನು ಸಂರಕ್ಷಿಸುವುದು ಅತ್ಯವಶ್ಯಕವಾಗಿದ್ದು, ಹಲವು ಕಡೆಗಳಿಂದ ಭೀಮೇಶ್ವರನ ಸನ್ನಿಧಾನಕ್ಕೆ ಬರಲು ಬೆಟ್ಟದಲ್ಲಿ ಕಾಲು ದಾರಿಯಿದ್ದು, ಸುಮಾರು ವರ್ಷಗಳಿಂದ ಅಭಿವೃದ್ಧಿಕಾಣದೆ, ಭಕ್ತಾಧಿಗಳಿಗೆ ಹೆಚ್ಚು ಅನಾನುಕೂಲವಾಗಿದ್ದು, ಪ್ರವಾಸಿಗರಿಗೂ ಸಹ ಸಾಕಷ್ಟು ತೊಂದರೆಯಾಗುತ್ತಿದೆ. ಕುಂದಾಣ ಬೆಟ್ಟಕ್ಕೆ ಹೋಗುವ ದಾರಿ ಅಭಿವೃದ್ದಿಯಾಗಿರುವ ಮಾದರಿಯಲ್ಲಿ ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯವರಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ಇತ್ತ ಗಮನಹರಿಸಿ ದೇಗುಲದ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Be the first to comment