ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕುಂದಾಣ ಹೋಬಳಿಯಾದ್ಯಂತ ಮಳೆಯಾಗುತ್ತಿದ್ದು, ಧರೆ ತಂಪೆರೆದಿದೆ. ಮಧ್ಯಾಹ್ನ 12-00ಕ್ಕೆ ಪ್ರಾರಂಭವಾದ ಮಳೆ ಸುಮಾರು 4 ಗಂಟೆಗಳ ಕಾಲ ನಿರಂತರವಾಗಿ ಧಾರಕಾರ ಜೋರು ಮಳೆಯಾಗಿದೆ.ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ರೈತರು ತಮ್ಮ ಜಮೀನಿನಲ್ಲಿ ಹಾಕಿರುವ ರಾಗಿ ಫಸಲು ಈ ಬಾರಿ ಉತ್ತಮ ಮಳೆಯಿಂದಾಗಿ ನಿರೀಕ್ಷಿತ ಬೆಳೆ ಬೆಳೆಯಲು ಸಹಕಾರಿಯಾಗಿದೆ. ಮಳೆಯಿಂದಾಗಿ ವಾಹನ ಸವಾರರು ಕೆಲ ಕಾಲ ಅಂಗಡಿ, ಮನೆಯಂಗಳ, ರಸ್ತೆ ಬದಿಗಳಲ್ಲಿ ಆಸರೆ ಪಡೆದುಕೊಂಡಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕುಂದಾಣ ಹೋಬಳಿಯ ಕಾರಹಳ್ಳಿ, ರಬ್ಬನಹಳ್ಳಿ, ರಾಮನಾಥಪುರ, ಕೊಯಿರ, ವಿಶ್ವನಾಥಪುರ, ಕುಂದಾಣ, ಸೋಲೂರು, ಆಲೂರುದುದ್ದನಹಳ್ಳಿ, ಚಪ್ಪರದಕಲ್ಲು, ಜಾಲಿಗೆ ಸುತ್ತಮುತ್ತಲ ಹಳ್ಳಿಗಳು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಗ್ರಾಮೀಣ ಭಾಗದ ಜನರು ಕೊಡೆಗಳನ್ನು ಹಿಡಿದು ರಸ್ತೆಗಿಳಿದರು, ಜಾನುವಾರುಗಳನ್ನು ಮೇಯಿಸಲು ಹೋದಂತಹ ರೈತರು ತಮ್ಮ ಜಾನುವಾರುಗಳ ಜೊತೆಯಲ್ಲಿ ಮಳೆಯಲ್ಲಿಯೇ ನಿಂದು ಮನೆಗಳನ್ನು ಸೇರಿದ ದೃಶ್ಯ ಕಂಡುಬಂತು.
Be the first to comment