ಶವವನ್ನು ತೆಗಯಲು ಹೋದವರ ಬೋಟ್ ಗೆ ವಿದ್ಯುತ್ ಪ್ರಸರಿಸಿ ಅವಘಡ ಮೂವರು ದುರ್ಮರಣ…! ಸ್ಥಳಕ್ಕೆ ಭೇಟಿ ನೀಡಿದ ಶಾಸಕ ನಡಹಳ್ಳಿ…!!!

ವರದಿ: ಸಚೀನ ಚಲವಾದಿ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಕೃಷ್ಣ ನದಿಯಲ್ಲಿ ತಂದೆಯ ಶವವನ್ನು ಹುಡುಕಲು ಹೋಗಿ ಮೂರು ಜನರ ವಿದ್ಯುತ್ ಅವಘಡದಿಂದ ಸಾವನ್ನು ಅಪ್ಪಿದ ಘಟನೆ ತಂಗಡಗಿ ಗ್ರಾಮದ ಹತ್ತಿರದ ಧನ್ನೂರ ಚಾಕವೆಲ್ ಬಳಿಯಲ್ಲಿ ನಡೆದಿದೆ.



ತಾಳಿಕೋಟೆ ತಾಲ್ಲೂಕಿನ ಹರನಾಳ ಗ್ರಾಮದ ಶಿವಪ್ಪ ಅಂಬಳೂರು (೭೫) ಮನೆಯಿಂದ ಹೊರಗೆ ಬಂದು ಒಂದು ವಾರವಾದರೂ ಪತ್ತೆಯಾಗಿರಲಿಲ್ಲ ತಂದೆಯನ್ನು ಹುಡುಕಾಟ ನಡೆಸಿದ್ದ ಮಗ ಯಮನಪ್ಪ ಅಂಬಳೂರ,ಹಾಗೂ ಅಳಿಯ ಶರಣಗೌಡ ಬಿರಾದಾರ ಅವರಿಗೆ ತಂಗಡಗಿ ಕೃಷ್ಣ ನದಿಯ ಸೇತುವೆಯ ಮೇಲೆ ನಾಪತ್ತೆಯಾಗಿದ್ದ ಶಿವಪ್ಪ ಅಂಬಳನೂರ ಅವರ ಬಟ್ಟೆ, ಚಪ್ಪಲಿ ಮತ್ತು ಡೈರಿ ಪತ್ತೆಯಾಗಿದೆ ,ತನ್ನ ತಂದೆ ನದಿಯಲ್ಲಿ ಬಿದ್ದು ಪ್ರಾಣಬಿಟ್ಟಿದ್ದಾರೆ ಎಂದು ತಂದೆಯ ಶವ ಶೋಧಕ್ಕೆ ಕೂಡಲಸಂಗಮದಿಂದ ಪ್ರವಾಸಿಗರ ಹೊತ್ತೊಯ್ಯುವ ಬೋಟ್ ತರಿಸಿದ್ದಾರೆ ಮತ್ತು ಮುದ್ದೇಬಿಹಾಳ ಅಗ್ನಿ ಶಾಮಕದವರಿಗೆ ಸಹ ಮಾಹಿತಿಯನ್ನು ನೀಡಿ ಶವ ಶೋಧನೆಗೆ ಮುಂದಾದಾಗ ,ಆಲಮಟ್ಟಿ ಜಲಾಶಯದಿಂದ ಬಿಟ್ಟ ಹಿನ್ನಿರು ಹೆಚ್ಚಾಗಿ ಇದ್ದ ಕಾರಣ ಧನ್ನೂರ ಗ್ರಾಮದಲ್ಲಿ ನೀರು ಪೂರೈಸುವ ಜಾಕವೆಲ್ ಬಳಿ ಇದ್ದ ವಿದ್ಯುತ್ ಕಂಬದ ವಿದ್ಯುತ್ ತಂತುಗಳು ತುಂಬಾ ಕೆಳಗೆ ಇದ್ದ ಕಾರಣ ಭೂಟ್ ಚಲಾಯಿಸುತ್ತಿದ್ದ ಪರಶುರಾಮ ತಳವಾರ ವಿದ್ಯುತ್ ತಂತಿಯಿಂದ ಬೋಟ್ ತಪ್ಪಿಸಲು ಯತ್ನಿಸುವಷ್ಟರಲ್ಲಿ ಬೋಟ್ ಗೆ ವಿದ್ಯುತ್ ತಂತಿಯ ಮುಖಾಂತರ ವಿದ್ಯುತ್ ಪ್ರಸರಿಸಿ ಬೋಟ್ ನಲ್ಲಿಯೇ ನಾಪತ್ತೆಯಾಗಿದ್ದ ಶಿವಪ್ಪ ಅಂಬಳನೂರ ಅವರ ಸುಪುತ್ರ ಯಮನಪ್ಪ ಅಂಬಳನೂರ ಹಾಗೂ ಅಳಿಯ ಶರಣಗೌಡ ಬಿರಾದಾರ, ಬೋಟ್ ಚಾಲಕ ಪರಶುರಾಮ ತಳವಾರ ಕೃಷ್ಣೆಯ ಒಡಲಲ್ಲಿ ಪ್ರಾಣ ಬಿಟ್ಟಿದ್ದಾರೆ ,ಅದೃಷ್ಟವಶಾತ್ ಬೋಟ್ ನಲ್ಲಿ ಇದ್ದ ಉಳಿದ ಎಂಟು ಜನರು ನದಿಗೆ ಹಾರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ (ನಡಹಳ್ಳಿ) ಭೇಟಿ ನೀಡಿ ಘಟನೆ ಕುರಿತು ವಿವರಣೆ ಪಡೆದಿದ್ದಾರೆ ಈ ಘಟನೆ ಹುನಗುಂದ ಪೂಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಹುನಗುಂದ ಪೂಲೀಸ್ ಸಿಬ್ಬಂದಿಗಳು, ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋಡೆ, ಪಿಎಸೈ ರೇಣುಕಾ ಜಕನೂರ ಮತ್ತು ಮುದ್ದೇಬಿಹಾಳ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಇದ್ದು ಮೃತರ ಶವದ ಶೋಧ ನಡೆಸಿದ್ದಾರೆ, ವಿಪರ್ಯಾಸವೆಂದರೆ ನದಿಗೆ ಹಾರಿ ಸತ್ತಿದ್ದ ವ್ಯಕ್ತಿಯ ಶವ ಈಗ ಪತ್ತೆಯಾಗಿದೆ.

Be the first to comment

Leave a Reply

Your email address will not be published.


*