ಕಾರವಾರ ಆಕ್ಸಿಜನ್ ಉತ್ಪಾದನಾ ಘಟಕದ ಉದ್ಘಾಟನೆ- ಶಾಸಕಿ ರೂಪಾಲಿ ನಾಯ್ಕ

ವರದಿ: ಸುಚಿತ್ರಾ ನಾಯ್ಕ ಹೊನ್ನಾವರ

 

ಕಾರವಾರ:

Chetan Kenduli

ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಿರ್ಮಾಣವಾದ ಆಕ್ಸಿಜನ್ ಘಟಕವನ್ನು ಗುರುವಾರ ಶಾಸಕಿ ರೂಪಾಲಿ ನಾಯ್ಕ ಲೋಕಾರ್ಪಣೆಗೊಳಿಸಿದರು.

ಪಿ.ಎಂ ಕೇಸ್ ನಿಧಿಯಿಂದ ದೇಶದ ವಿವಿಧೆಡೆ ನಿರ್ಮಾಣವಾದ ಆಕ್ಸಿಜನ್ ಘಟಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆಗೊಳಿಸಿದ್ದರು.

ಕಾರವಾರದಲ್ಲಿ ಆಕ್ಸಿಜನ್ ಘಟಕವನ್ನು ಲೋಕಾರ್ಪಣೆಗೊಳಿಸಿದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿದ ಅವರು ಕಾರವಾರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣವಾಗಿರುವುದು ಬಹಳ ಉಪಯುಕ್ತವಾಗಿದೆ. ಕೋವಿಡ್ 19 ಮತ್ತು ಇನ್ನಿತರ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಾಗುವುದಿಲ್ಲ. ಆಕ್ಸಿಜನ್ ಉತ್ಪಾದನಾ ಘಟಕದ ನಿರ್ಮಾಣದಿಂದ ಭವಿಷ್ಯದಲ್ಲಿ ಜಿಲ್ಲೆಗೆ ಆಕ್ಸಿಜನ್ ಸಮಸ್ಯೆಯಾಗುವುದಿಲ್ಲ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು , ಜಿಲ್ಲಾಧಿಕಾರಿಗಳು, ವೈದ್ಯಕೀಯ ಕಾಲೇಜಿನ ನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಭಾರತೀಯ ಜನತಾ ಪಕ್ಷದ ರಾಜ್ಯ ಮೀನುಗಾರರ ಪ್ರಕೋಷ್ಟಕದ ಸಹ ಸಂಚಾಲಕರು , ವೈದ್ಯಕೀಯ ಸಿಬ್ಬಂದಿಗಳು, ವೈದ್ಯ ವಿದ್ಯಾರ್ಥಿಗಳು ಉಪಸ್ತಿತರಿದ್ದರು.

Be the first to comment

Leave a Reply

Your email address will not be published.


*