ಡೊಂಗ್ರಿ ಪಿ.ಡಿ.ಓ ವಿರುದ್ಧ ಜಿಲ್ಲಾ ಪಂಚಾಯತ್ ಸಿ.ಇ.ಓ ಗೆ ದೂರು

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಅಂಕೋಲಾ 

ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸದ ಕುರಿತು ಗ್ರಾ.ಪಂ ಉಪಾಧ್ಯಕ್ಷರು ಹಾಗೂ ಸದಸ್ಯರ ನಿಯೋಗವು ಮಂಗಳವಾರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಎಮ್. ಅವರಿಗೆ ಮನವಿ ಸಲ್ಲಿಸಿದೆ.ಡೋಂಗ್ರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗಿರೀಶ ನಾಯಕ ತಮ್ಮ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದೇ, ಗ್ರಾ.ಪಂ ಜನಪ್ರತಿನಿಧಿಗಳಿಗೂ ಸರಿಯಾದ ಮಾಹಿತಿಗಳನ್ನು ನೀಡದೇ ಸ್ವಇಚ್ಛೆಯಂತೆ ನಡೆದುಕೊಳ್ಳುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಗ್ರಾಪಂ ಮಟ್ಟದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೂತನ ಯೋಜನೆಗಳು ಹಾಗೂ ಗ್ರಾಪಂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಠರಾವು ಮಾಡಿದ್ದೆವು. ಆದರೆ ಈ ಬಗ್ಗೆ ಠರಾಯಿಸಿದ ಠರಾವು ಪಟ್ಟಿಯನ್ನೇ ನಾಪತ್ತೆ ಮಾಡಲಾಗಿದೆ. ಈ ಬಗ್ಗೆ ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಆಡಳಿತ ಕಮಿಟಿಯವರು ಪುನಃ ನಡೆಸಿದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಿದ ವಿಷಯವನ್ನೂ ಸರಿಯಾಗಿ ಠರಾವು ಪಟ್ಟಿಯಲ್ಲಿ ನಮೂದಿಸದೇ ಅರ್ಧವನ್ನು ಮಾತ್ರ ನಮೂದಿಸಿ, ಗಂಭೀರ ತೀರ್ಮಾನಗಳನ್ನೇ ಕೈ ಬಿಟ್ಟಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರಗಳನ್ನು ನೀಡಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಸಭೆಯಲ್ಲಿ ಪ್ರಸ್ತಾಪಿಸಿದ ಹಲವಾರು ವಿಷಯ ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಜನರ ಹಲವಾರು ಮನವಿಗಳಿಗೂ ಉತ್ತರ ನೀಡಲು ಆಗುತ್ತಿಲ್ಲ.

CHETAN KENDULI

ಕಳೆದ ಜ.10 ರಂದು ಸೋಮವಾರ ಮತ್ತೊಮ್ಮೆ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಗ್ರಾಪಂ ಎಲ್ಲ ಜನಪ್ರತಿನಿಧಿಗಳು ಉಪಸ್ಥಿತರಿದ್ದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾತ್ರ ವಿಳಂಬವಾಗಿ ಸಭೆಗೆ ಹಾಜರಾಗಿ, ಕಾಟಾಚಾರಕ್ಕೆ ಸಭೆ ನಡೆಸಿದಂತೆ ಒಂದೆರಡು ವಿಚಾರಗಳನ್ನು ಸಭೆಯ ಮುಂದಿಟ್ಟು ಕೆಡಿಪಿ ಸಭೆಗೆ ಹಾಜರಾಗಬೇಕು ಎಂದು ಸುಳ್ಳು ಹೇಳಿ, ಸಭೆಯನ್ನು ಮೊಟಕುಗೊಳಿಸಿ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸದೇ ಸಭೆಯಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಸಭೆಗೆ ಹಾಜರಾದ ಜನಪ್ರತಿನಿಧಿಗಳಿಗೆ ಅವಮಾನವಾದಂತಾಗಿದೆ.ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಅಹವಾಲು ಸ್ವೀಕರಿಸದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಿರೀಶ ನಾಯಕ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುವ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಜಿಪಂ ಸಿಇಒ ಅವರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ವಿನೋದ ಭಟ್ಟ, ಸದಸ್ಯರಾದ ರೇಣುಕಾ ಸಿದ್ದಿ, ಪ್ರೇಮಾ ರಮೇಶ ಹೆಬ್ಬಾರ, ಸಂಗೀತಾ ಹುಲಸ್ವಾರ ಇದ್ದರು.ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೇ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬೇಕಾಬಿಟ್ಟಿ ಸ್ವಇಚ್ಛೆಯಂತೆ ನಡೆದುಕೊಳ್ಳುತ್ತಿದ್ದು, ಇದರಿಂದ ಜನಪ್ರತಿನಿಧಿಗಳಿಗೆ ಅವಮಾನವಾದಂತಾಗಿದೆ. ಇದು ಮುಂದುವರೆದರೆ ಸಾರ್ವಜನಿಕರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ, ಪ್ರತಿಭಟನೆ ನಡೆಸಬೇಕಾಗುತ್ತದೆ. – ವಿನೋದ ಭಟ್ಟ (ಉಪಾಧ್ಯಕ್ಷ, ಗ್ರಾಪಂ ಡೋಂಗ್ರಿ

Be the first to comment

Leave a Reply

Your email address will not be published.


*