ಜಿಲ್ಲಾ ಸುದ್ದಿಗಳು
ಭಟ್ಕಳ
ಭಟ್ಕಳ ಮಾವಿನಕುರ್ವಾ ಗ್ರಾಮ ಪಂಚಾಯ್ತಿಯಿಂದ ಬೆಳ್ನಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳನ್ನು ಮಂಗಳವಾರ ಘೇರಾವ್ ಹಾಕಿದ ಸ್ಥಳೀಯರು ಕೆಲಸ ಮಾಡಲು ಅವಕಾಶ ನೀಡದೆ ವಾಪಾಸು ಕಳುಹಿಸಿದ್ದಾರೆ.
ಬೆಳ್ನಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡದಂತೆ ಈ ಹಿಂದೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಉಪವಿಭಾಗಾಧಿಕಾರಿ ಹಾಗೂ ಗ್ರಾಮ ಪಂಚಾಯ್ತಿಗೆ ಮನವಿ ನೀಡಿದ್ದರು. ಆದರೂ ಮಂಗಳವಾರ ಉದ್ದೇಶಿತ ಸ್ಥಳದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾದಾಗ ಸ್ಥಳೀಯರು ಅಧಿಕಾರಿಗಳಿಗೆ ಘೇರಾವ ಹಾಕಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸಿಪಿಐ ದಿವಾಕರ ಪ್ರತಿಭಟನೆಕಾರರನ್ನು ಸಮಧಾನಿಸಲು ಯತ್ನಿಸಿದಾದರೂ ಪ್ರತಿಭಟನೆಕಾರರು ಉದ್ದೇಶಿತ ಸ್ಥಳದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಇದಕ್ಕೆ ಸಮಜಾಯಿಸಿ ನೀಡಲು ಮುಂದಾದ ಅಧಿಕಾರಿಗಳು ಉದ್ದೇಶಿತ ತ್ಯಾಜ್ಯ ಘಟಕದಲ್ಲಿ ಯಾವುದೇ ಹಸಿ ಕಸವನ್ನು ಹಾಕುವುದಿಲ್ಲ. ಬದಲಾಗಿ ಪ್ಲಾಸ್ಟಿಕ್ ಹಾಗೂ ಒಣಕಸಗಳನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ತ್ಯಾಜ್ಯ ಘಟಕದ ಸುತ್ತ ಕಂಪೌಂಡ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಸಮಜಾಯಿಸಿ ನೀಡಲೂ ಪ್ರಯತ್ನಿಸಿದರೂ ಸ್ಥಳೀಯರು ಅದಕ್ಕೆ ಒಪ್ಪದ ಕಾರಣ ಘಟಕ ನಿರ್ಮಾಣ ಕಾರ್ಯ ಕೈಬಿಟ್ಟು ವಾಪಾಸು ತೆರಳಿದರು.
ತಾಜ್ಯ ಘಟಕ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ ಬೆಳ್ನಿ ಬಂದರ್ ರಾಜ್ಯ ಹೆದ್ದಾರಿಯಲ್ಲಿ ೨೪ ಘಂಟೆಯೂ ವಾಹನಗಳು ಓಡಾಡುತ್ತಿರುತ್ತದೆ. ಈ ರಸ್ತೆಯ ಪಕ್ಕದಲ್ಲೆ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ತ್ಯಾಜ್ಯ ಘಟಕ ನಿರ್ಮಾಣವಾದರೆ ನಾಯಿ ಹಸುಗಳು ನಿತ್ಯ ರಸ್ತೆ ದಾಟಿ ತ್ಯಾಜ್ಯ ತಿನ್ನಲು ಓಡಾಡುವುದರಿಂದ ಅಪಘಾತಗಳು ಸಂಭಿವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಈ ಪ್ರದೇಶದಲಿ ಶಾಲೆ ಇದೆ. ದೇವಸ್ಥಾನ ಇದೆ. ಜೊತೆಗ ಕೃಷಿ ಭೂಮಿ ನೂರಾರು ವಸತಿ ಮನೆಗಳಿವೆ. ಗ್ರಾಮ ಪಂಚಾಯ್ತಿ ಅವರು ಜನರಹಿತ ಸ್ಥಳವನ್ನು ಗುರುತಿಸಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲಿ. ನಮ್ಮದೇನೂ ಆಭ್ಯಂತರ ಇಲ್ಲ ಎಂದರು.
Be the first to comment