ರಾಜ್ಯ ಸುದ್ದಿಗಳು
ಬೆಂಗಳೂರು
ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರವು ಕೊರೋನಾ ಕಟ್ಟಿಹಾಕಲು 50-50 ರೂಲ್ಸ್ ಜಾರಿ ಮಾಡಿದೆ.
ಸರ್ಕಾರವು ಚಿತ್ರಮಂದಿರ, ಮಾಲ್, ಪಬ್ , ಹೋಟೆಲ್ಗಳಲ್ಲಿ 50-50 ರೂಲ್ಸ್ ತಂದಿದ್ದು, ವೀಕೆಂಡ್ ಕರ್ಫ್ಯೂ ಟೈಮಲ್ಲಿ ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. ಮಾಲ್, ಥಿಯೇಟರ್ಸ್ ಎಂಟ್ರಿಗೆ ಡಬಲ್ ಡೋಸ್ ಕಡ್ಡಾಯವಾಗಿಬೇಕು. ಮದುವೆ, ಕಾರ್ಯಕ್ರಮಗಳಿಗೂ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ತಂದಿದ್ದು, ಒಳಾಂಗಣ ಕಾರ್ಯಕ್ರಮಗಳಿಗೆ 100 ಮಂದಿ , ಹೊರಾಂಗಣ ಕಾರ್ಯಕ್ರಮಗಳಿಗೆ 200 ಮಂದಿಗೆ ಅವಕಾಶ ಮಾಡಿದೆ. ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ 50 ಜನರಿಗೆ ಅವಕಾಶ ನೀಡಿದೆ. ಯಾವುದೇ ಉತ್ಸವ, ಜಾತ್ರೆಗಳಿಗೆ ಅವಕಾಶ ಇಲ್ಲ .
Be the first to comment