ರಾಜ್ಯ ಸುದ್ದಿಗಳು
ದೇವನಹಳ್ಳಿ
ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರು ಮಾಡಬೇಕು. ಎಂಇಎಸ್ ಪುಂಡಾಟಿಕೆಗೆ ಬುದ್ದಿಕಲಿಸುವ ಕೆಲಸಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಅನ್ನು ಜನಸಾಮಾನ್ಯರ ಪರಿಷತ್ ಅನ್ನಾಗಿ ಪರಿವರ್ತನೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ನಾಡೋಜ ಡಾ.ಮಹೇಶ್ ಜೋಷಿ ತಿಳಿಸಿದರು.ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಎಲ್ಲೆಡೆ ಕನ್ನಡದ ಕಂಪು ಪಸರಿಸಲು ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಕನ್ನಡ ಹೋರಾಟಗಾರ ಎಂಇಎಸ್ ಮುಖ್ಯಸ್ಥನ ಮುಖಕ್ಕೆ ಮಸಿ ಬಳಿದಾಗ ಹತ್ಯೆ ಎಂದು ಕೇಸು ದಾಖಲಿಸಿದರು. ಪೊಲೀಸರು ಅಧಿಕಾರ ದುರುಪಯೋಗ ಮಾಡಿದ್ದಾರೆ. ಕನ್ನಡಿಗರ ಮೇಲೆ ಹಾಕಿರುವ ಕೇಸನ್ನು ವಾಪಸ್ಸ್ ತೆಗೆಯಲು ಸರಕಾರದೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಕಸಾಪ ಜನಸಾಮಾನ್ಯರ ಪರಿಷತ್ ಆಗಬೇಕು 1 ಕೋಟಿ ಸದಸ್ಯತ್ವ ನೋಂದಣೆಯಾಗಬೇಕು. ಸದಸ್ಯತ್ವ ಶುಲ್ಕವನ್ನು ರೂ.250 ಇಳಿಸಲಾಗಿದೆ. ಗಡಿರಕ್ಷಣೆ ಮಾಡುವ ಸೈನಿಕರ ಮನೆಗಳಿಗೆ ತೆರಳಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಸದಸ್ಯತ್ವ ನೊಂದಣೆ ಮಾಡಲಾಗುವುದು, ವಿಶೇಷಚೇತನರಿಗೆ ಅತ್ಯಂತ ಗೌರವದಿಂದ ಶುಲ್ಕವಿಲ್ಲದೆ ಸದಸ್ಯತ್ವ ನೀಡಲಾಗುವುದು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಯುವ ಶಕ್ತಿಯನ್ನು ಬಲಿಷ್ಠಗೊಳಿಸಲಾಗುವುದು. ವಿದ್ಯಾರ್ಥಿಗಳಿಗೆ ರೂ.100 ಗಳಿಗೆ ಸದಸ್ಯತ್ವ ನೀಡಲಾಗುವುದು. ಕನ್ನಡದಲ್ಲಿ ವ್ಯಾಸಂಗ ಮಾಡಿದ ಕನ್ನಡ ಸಾರ್ವಬೌಮ ಆಧ್ಯತೆ ಮೆರೆಗೆ ಉದ್ಯೋಗ ಕೇವಲ ಬರವಸೆಯಾಗದೆ ಕಸಾಪ ಸರ್ಕಾರದ ಹಿಂದೆ ಬಿದ್ದು ಅದನ್ನು ಜಾರಿಗೆ ತರುವ ಕೆಲಸ ಮಾಡಲಾಗುವುದು. ಕನ್ನಡ ಶಾಲೆಗಳು ಮುಚ್ಚದಂತೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಕನ್ನಡ ಗೆಲ್ಲುವ ಭಾಷೆಯಾಗಬೇಕು, ಮುಂದಿನ ಕಸಾಪ ಎಲ್ಲಾ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಿ ಹಾರ ತುರಾಯಿ ಬದಲು ಕನ್ನಡ ಪುಸ್ತಕಗಳನ್ನು ಸ್ವೀಕರಿಸುವ ಕೆಲಸ ಮಾಡುತ್ತೇನೆ. ಕನ್ನಡ ಪುಸ್ತಕಗಳನ್ನು ಓದುವುದರಿಂದ ಸ್ಥಳಿಯ ಸಾಹಿತಿಗಳು ಕಲಾವಿದರಿಗೆ ಉತ್ತೇಜನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹೊಸ ಮನ್ವಂತರವನ್ನು ಸೃಷ್ಠಿಮಾಡಲಾಗುವುದು ಎಂದರು.
ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಕನ್ನಡ ಭಾಷೆ ಬೆಲೆಕಟ್ಟಲಾಗದ ಮುತ್ತು ಹೆತ್ತ ತಾಯಿ ಹೊತ್ತಭೂಮಿಯ ಹಾಗೆ ಕನ್ನಡ ಭಾಷೆ ಬೆಳಗಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಸಹಕಾರ ಪಡೆದು ಕನ್ನಡವನ್ನು ವಿಜೃಂಬಿಸಲಾಗುವುದು. ಪರಿಷತ್ತನ್ನು ಪ್ರತಿನಿಧಿಯ ಸಂಸ್ಥೆಯಾಗಿ ಕಸಾಪ ಶ್ರೀಮಂತಿಕೆಯನ್ನು ಹೆಚ್ಚಿಸಬೇಕು. ಅಖಿಲಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಗ್ರಾಮಾಂತರ ಜಿಲ್ಲೆಯಲ್ಲೇ ಮಾಡಲಾಗುವುದು. ಕಸಾಪ ಬೆಳೆಸಲು ಅನೇಕ ಯೋಜನೆಗಳನ್ನು ಕೇಂದ್ರ ಅಧ್ಯಕ್ಷರು ರೂಪಿಸಿದ್ದಾರೆ. ನಾವೆಲ್ಲರು ಅವರಿಗೆ ಸಹಕರಿಸಬೇಕು. ಸಂವಿಧಾನದ ಅಡಿಯಲ್ಲಿ ನಾವೆಲ್ಲರು ಕೆಲಸಮಾಡಬೇಕು. ಗ್ರಾಮಾಂತರ ಜಿಲ್ಲೆ ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು ಕನ್ನಡದ ಕಂಪನ್ನು ಮತ್ತಷ್ಟು ಹೆಚ್ಚಿಸೋಣ ಎಂದರು.
ಕರ್ನಾಟಕ ಸರಕಾರದ ರಾಜ್ಯ ಹಿಂದುಳಿದ ವರ್ಗ ಪ್ರವರ್ಗ-1ರ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡದ ಕಂಪು ಪಸರಿಸಲು ಪ್ರತಿ ಸಂಘಟನೆ ಕೈಜೋಡಿಸಬೇಕು. ಕನ್ನಡವೇ ಸತ್ಯ, ಕನ್ನಡವೇ ನಿತ್ಯವಾಗಿದೆ. ನಾವು ನಿಂದ ಮಣ್ಣಿನ ಋಣವನ್ನು ತೀರಿಸುವ ಕಾಲ ಬಂದಿದೆ ಎಂದು ಹೇಳಿದರು.ಈ ವೇಳೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಆರಾಧ್ಯ, ಕಸಾಪ ನಿಕಟಪೂರ್ವ ಅಧ್ಯಕ್ಷ ಆರ್.ಕೆ.ನಂಜೇಗೌಡ (ಆರ್‌ಎನ್‌ಕೆ), ಕಸಾಪ ತಾಲೂಕು ಸಂಚಾಲಕ ಬಿ.ಕೆ.ಶಿವಪ್ಪ, ಕರವೆ ರಾಜ್ಯಗೌರವಾಧ್ಯಕ್ಷ ಚಂದ್ರಶೇಖರ್, ಕಸಾಪ ತಾಲೂಕು ಕೋಷಾಧ್ಯಕ್ಷ ಅಶ್ವಥ್‌ಗೌಡ, ಮುನಿರಾಜು (ಅಪ್ಪಯ್ಯಣ್ಣ) ಪುರಸಭೆ ಅಧ್ಯಕ್ಶೆ ರೇಖ, ಮುಖಂಡರಾದ ಬಿ.ಕೆ.ನಾರಾಯಣಸ್ವಾಮಿ, ಗುಣಶೀಲ್, ರವಿಕಿರಣ್, ಚಂದ್ರು, ಶ್ರೀನಿವಾಸ್ ಅನಿಪುಲ್ಲಾ, ಎಸ್.ಎಲ್.ಎನ್.ಮುನಿರಾಜು, ಆದಿತ್ಯ ನಾಗರಾಜ್ ಸೇರಿದಂತೆ ಅನೇಕರು ಇದ್ದರು.
Be the first to comment