ಬೈರದೇನಹಳ್ಳಿ ಗ್ರಾಮಸ್ಥರಿಂದ ಅದ್ದೂರಿ ಹನುಮಜಯಂತಿ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಎಲ್ಲೆಡೆ ಶ್ರೀ ಆಂಜನೇಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ತಾಲೂಕಿನ ಬೈರದೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯ ಅಂಗವಾಗಿ ಸ್ವಾಮಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಗ್ರಾಮದ ಪ್ರತಿ ಜನರು ಪಾಲ್ಗೋಂಡು ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಹನುಮ ಜಯಂತಿಯಂದು ಸ್ವಾಮಿಗೆ ಸ್ಮರಿಸುವುದರಿಂದ ಮನೆಗಳಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ. ಬಹಳ ಶಕ್ತಿಯುತ ದೇವರಾದ ಶ್ರೀ ಆಂಜನೇಯನು ಶ್ರೀ ರಾಮನ ಪರಮ ಭಕ್ತನಾಗಿ, ಸಕಲ ಭಕ್ತಾಧಿಗಳ ಇಷ್ಟಾರ್ಥಗಳನ್ನು ಈಡೇಸುವ ಶಕ್ತಿಯನ್ನು ಹೊಂದಿದ್ದಾನೆ ಎಂಬ ಘಾಡ ನಂಬಿಕೆಯನ್ನು ಭಕ್ತಾಧಿಗಳು ಹೊಂದಿದ್ದಾರೆ. ಹನುಮ ಜಯಂತಿಯಲ್ಲಿ ದೇವಾಲಯವನ್ನು ಶುಭ್ರಗೊಳಿಸಿ, ತಳಿರು, ತೋರಣಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಬರುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಕಾರ್ಯವನ್ನು ಸಹ ಗ್ರಾಮಸ್ಥರು ಏರ್ಪಡಿಸಿದ್ದಾರೆ ಎಂದು ದೇಗುಲದ ಅರ್ಚಕ ಪ್ರಕಾಶ್ ಹೇಳಿದರು. ಈ ವೇಳೆಯಲ್ಲಿ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

CHETAN KENDULI

Be the first to comment

Leave a Reply

Your email address will not be published.


*