ರಾಮನಾಥಪುರದ ಪುರಾತನ ಆಂಜನೇಯ ಸ್ವಾಮಿಗೆ ವಿಳ್ಯೆದೆಲೆ ಅಲಂಕಾರ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ 

ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿಯು ಪುರಾತನ ಕಾಲದಿಂದಲೂ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಜೊತೆಗೂಡಿ ಕಷ್ಟಗಳನ್ನು ನಿವಾರಣೆ ಮಾಡುವಂತಹ ಪ್ರಸಿದ್ಧವಾದ ಐತಿಹಾಸಿಕ ದೇವಾಲಯವಾಗಿದೆ ಎಂದು ದೇವಾಲಯದ ಅರ್ಚಕ ಮಂಜುನಾಥ್ ತಿಳಿಸಿದರು.

CHETAN KENDULI

ಹನುಮ ಜಯಂತಿ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿ ವಷ೯ದಂತೆ ಈ ವರ್ಷವೂ ಸಹ ಹನುಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಮತ್ರು ಪ್ರದೋಸ ೨೬ವಷ೯ದ ಧನುರ್ ಮಾಸ ಪ್ರಾರಂಭವಾಗುದರಿಂದ ಪ್ರತಿ ದಿನ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸ್ವಾಮಿಗೆ ಪ್ರಿಯವಾದ ಅಲಂಕಾರಗಳು ಧೂಪ, ದೀಪರಾತಿ, ನೈವೇದ್ಯ, ಅಷ್ಟಾವಧಾನ ಸೇವೆ, ಆಂಜನೇಯನ ಅಷ್ಟ್ರೋತರ ಶಾತ್ತೂಮರೈ ರಾಷ್ಟಾಶೀವಾದ ನಡೆಸಲಾಗಿದ್ದು, ಪ್ರತಿ ದಿನ ಬೆಳಿಗ್ಗೆ ೬.೩೦ಕ್ಕೆ ಮಹಾಮಂಗಳಾರತಿಯನ್ನು ಮಾಡಲಾಗುತ್ತಿದೆ. ಭಕ್ತಾಧಿಗಳು ಸಕಾಲದಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದರು. 

Be the first to comment

Leave a Reply

Your email address will not be published.


*