ಜಿಲ್ಲಾ ಸುದ್ದಿಗಳು
ಕುಮಟಾ
ನಾನು ಯಾವುದೇ ಪಕ್ಷ ಚಟುವಟಿಕೆ ಹಾಗೂ ಪಕ್ಷದ ಸದಸ್ಯನಾಗಿರದೆ ಕೇವಲ ಕನ್ನಡ ನೆಲ,ಜಲಕ್ಕಾಗಿ ಹೋರಾಟ ಮಾಡುವ ಮೂಲಕ ಕನ್ನಡಿಗರಿಗೆ ಪರವಾಗಿ ನಿಲ್ಲುವ ಕಾರ್ಯ ಮಾಡುತ್ತೇನೆ ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಹೇಳಿದರು.ಸೋಮವಾರ ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತಿಚೆಗೆ ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುವಂತೆ ಪಕ್ಷದ ಪ್ರಮುಖರೊಬ್ಬರು ಕೇಳಿಕೊಂಡಿದ್ದು, ಅಧಿಕೃತವಾಗಿ ನಾನು ಯಾವುದೇಪಕ್ಷದಲ್ಲಿಗುರುತಿಸಿಕೊಂಡಿರುವುದಿಲ್ಲ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪಕ್ಷ ಸೇರ್ಪಡೆಯಾದ ಕುರಿತು ಚರ್ಚೆಗಳು ನಡೆದಿದ್ದು, ನನ್ನ ಸಂಘಟನೆಯ ಸದಸ್ಯರೂ ಕೂಡ ಈ ಬಗ್ಗೆ ಚರ್ಚಿಸಿ,ಪ್ರತಿಕ್ರಿಯೆ ನೀಡುವಂತೆ ಕೇಳಿಕೊಂಡಿದ್ದರು.
ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗದೆ, ಜಿಲ್ಲೆಯ ಜನ ಹಾಗೂ ಇಲ್ಲಿನ ಸಮಸ್ಯೆಗಳ ಕುರಿತು ಸರಕಾರಕ್ಕೆ ಮನದಟ್ಟು ಮಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಹೊರತಾಗಿ ಪಕ್ಷಕ್ಕಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.
ಪಕ್ಷ ಸೇರ್ಪಡೆಯದಾದ ಕುರಿತ ಯಾವುದೇ ಮಾಹಿತಿಗಳಿದ್ದರೂ ಅವುಗಳಿಗೆ ಕಿವಿಗೊಡಬಾರದೆಂದು ಜಿಲ್ಲೆಯ ಜನ ಹಾಗೂ ಕರವೇ ಸ್ವಾಭಿಮಾನಿ ಬಣದ ಸದಸ್ಯರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.ಈ ವೇಳೆ ವಕೀಲರಾದ ಆರ್ ಜಿ ನಾಯ್ಕ, ನಾಗರಾಜ ಹೆಗಡೆ,ಕರವೇ ಸ್ವಾಭಿಮಾನಿ ಬಣದ ಕೆ ಎನ್ ಮಂಜು, ರಾಘವೇಂದ್ರ ನಾಯ್ಕ ಅರೇಅಂಗಡಿ, ಮಾರುತಿ ಆನೆಗುಂಡಿ , ಈಶ್ವರ ಉಪ್ಪಾರ ಮುಂತಾದವರಿದ್ದರು.
Be the first to comment