ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಕೃಷ್ಣ-ಭೀಮಾ ಅಚ್ಚುಕಟ್ಟು ಪ್ರದೇಶ ರೈತ ಸಂಘದಿಂದ ವಿದ್ಯುತ್ ಕಂಪನಿಗಳ ಖಾಸಗೀಕರಣ ವಿರೋಧಿ ಪ್ರತಿಭಟನೆ

ಸುರಪುರ,ಆ.10- ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಕೃಷ್ಣ-ಭೀಮಾ ಅಚ್ಚುಕಟ್ಟು ಪ್ರದೇಶ ರೈತ ಸಂಘ ವತಿಯಿಂದ ಸುರಪುರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ  ಮಾತನಾಡಿದ ಕೃಷ್ಣ-ಭೀಮಾ ಅಚ್ಚುಕಟ್ಟು ಪ್ರದೇಶ ರೈತ ಸಂಘದ ಅಧ್ಯಕ್ಷ ಅಮರೇಶ ಕಾಮನಕೇರಿ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.ಸಂವಿಧಾನದ ಕಗ್ಗೊಲೆ ಮಾಡುತ್ತಿರು ಕೇಂದ್ರ ಸರ್ಕಾರದಲ್ಲಿ ಈ ನೀತಿಯನ್ನು ಖಂಡಿಸುತ್ತೆವೆ ಇದರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

 

ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಸಮಸ್ಯೆಯಾಗಲಿದೆ. ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದರಿಂದ ರೈತರ ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದ ಸಬ್ಸಿಡಿ ಬಂದ್ ಆಗುತ್ತದೆ. ಅಲ್ಲದೆ ಖಾಸಗಿಯವರು ಮನಬಂದಂತೆ ವಿದ್ಯುತ್ ಬೆಲೆ ಏರಿಕೆ ಮಾಡುತ್ತಾರೆ.

 

ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರಾ ಅಯ್ಯಣ್ಣ ಹಾಲಬಾವಿ ಮಾತನಾಡಿ
ರೈತರ ಪಂಪ್‍ಸೆಟ್‍ಗಳಿಗೆ ಮೀಟರ್‍ಗಳನ್ನು ಅಳವಡಿಕೆ ಮಾಡುತ್ತಾರೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಲಿದೆ. ಕೃಷಿ ವಲಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಾರಕವಾದ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದೆ. ಇದನ್ನು ವಿರೋಧಿಸಿ ಕಳೆದ ಎಂಟು ತಿಂಗಳಿನಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಜಾರಿಗೊಳಿಸಬಾರದು ಆಗ್ರಹಿಸಿದರು

ಇದಕ್ಕೂ ಮುನ್ನ ನಗರದ ಮಹಾತ್ಮಗಾಂಧಿ ವೃತ್ತದ ದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಕಚೇರಿಗೆ ಮೆರವಣಿಗೆ ನಡೆಸಿ ಎಪಿಎಂಸಿ,ಭೂ ತಿದ್ದುಪಡಿ, ವಿದ್ಯುತ್ ಕಂಪನಿ ಖಾಸಗೀಕರಣ ತಿದ್ದುಪಡಿ ವಿರುದ್ಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಘೋಷಣೆ ಕೂಗಿ ರಾಷ್ಟ್ರಪತಿಗಳಿಗೆ ತಹಶಿಲ್ಮೂಲಕ ಮನವಿ ಸೂಪಿಯಾ ಸುಲ್ತಾನರ ಮೂಲಕ ಸಲ್ಲಿಸಿದರು ಪ್ರತಿಭಟನೆಯಲ್ಲಿ ತಾಲೂಕ ಅಧ್ಯಕ್ಷ ಅನುಮಂತರಾಯ ಮಡಿವಾಳ ಹುಣಸಗಿ ತಾಲೂಕು ಗೌರವ ಅಧ್ಯಕ್ಷ ಸಾಹೇಬಗೌಡ ಮದಲಿಂಗನಾಳ ಅಂಬ್ರೇಶ ಸಾಹು,ಹುಣಸಗಿ ತಾಲ್ಲೂಕ ಉಪಾಧ್ಯಕ್ಷ ಗದ್ದೆಪ್ಪ ನಾಗಬೇನಾಳ ಹನುಮಗೌಡ ನಾರಾಯಣಪುರ, ಬಸವಲಿಂಗ ನಾಗರಬೆಟ್ಟ,ಭಾಗಪ್ಪ ಹಡಪದ,ಹನುಮಂತ ವಡಗೇರಿ ಬಸನಗೌಡ ಪೋಲಿಸ ಪಾಟೀಲ್, ಅಂಬರೀಶ್ ಸಾಹು, ಶಿವನಗೌಡ,ಅವಿನಾಶ್ ಕೊಡೆಕಲ್ ತಿಪ್ಪಣ್ಣ ಚಂಪ್, ವೆಂಕಟೇಶ್ ಕುಪ್ಪಗಲ್, ಚಂದ್ರು ವಜ್ಜಲ್, ಚಾಂದಪಾಶಾ, ಭೀಮಣ್ಣಕಮತಗಿ, ಹಣಮಂತರಾಯ ದೇಸಾಯಿ ಹನುಮಂತ ಕರ್ನಾಟಕ ಭೀಮನಗೌಡ ಕೃಷ್ಣ-ಭೀಮಾ ಅಚ್ಚುಕಟ್ಟು ಪ್ರದೇಶ ರೈತರ ಸಂಘ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳಾದ ಜಿಲ್ಲಾ ಸಮಿತಿ ಸದಸ್ಯರು ತಾಲ್ಲೂಕ ಸಮಿತಿಯ ಸದಸ್ಯರು ಇದ್ದರು

 

Be the first to comment

Leave a Reply

Your email address will not be published.


*