ನಾಗರ ಪಂಚಮಿ ಸರಳ ಆಚರಣೆ ಮಾಡಿದ ಭಕ್ತರು

ವರದಿ: ಕಾಶೀನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

ನಾಲತವಾಡ:

CHETAN KENDULI

ಕೋವಿಡ್ ಹಿನ್ನಲೆ ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಮಸ್ಕಿ ಕಾಲೋನಿಯಲ್ಲಿರುವ ನಾಗಪ್ಪ ದೇವರಿಗೆ ನಿವಾಸಿಗಳು ಹಾಲು ಎರೆಯುವ ಮೂಲಕ ಆಚರಣೆ ಮಾಡಿದರು.



ಈ ವೇಳೆಯಲ್ಲಿ ನಿವಾಸಿಗಳು ಸಾಮಾಜಿಕ ಅಂತರ್, ಮಾಸ್ಕ್ ಬಳಸಿಕೊಂಡು ನಾಗಪ್ಪನಿಗೆ ನೈವಿಧ್ಯ, ಹುಂಡಿ ಕಡಲೆಕಾಳು ವಿವಿಧ ಬಗೆಯ ಹುಂಡಿಗಳನು ಎಡೆ ಹಿಡಿದ್ದು ಹಾಲು ಎರೆದರು.

ಅಲ್ಲದೇ, ಮಹಿಳಾಮಣಿಗಳು ನಾಗಪ್ಪ ಹಾಡುಗಳನ್ನು ಹಾಡುವ ಮೂಲಕ ಹಬ್ಬಕ್ಕೆ ಮೆರುಗು ತಂದರು. ಈ ವೇಳೆಯಲ್ಲಿ ಶಾತಾ ತೋಟದ, ಲಕ್ಷ್ಮಿ ಮಸ್ಕಿ, ಭಾರತಿ ಮೇಟಿ, ಪವಿತ್ರಾ ಮೇಟಿ, ಸುನಾಂದ ಮಡಿವಾಳರ, ವಿದ್ಯಾ ಮಡಿವಾಳರ ಹಾಗೂ ಮಹಿಳೆಯರು ಪಾರ್ವತಿ ಮಸ್ಕಿ ಗುರದೇವಿ ಮಸ್ಕಿ ಇದ್ದರು.

Be the first to comment

Leave a Reply

Your email address will not be published.


*