ಬೈಂದೂರು ತಾರಾಪತಿಯಲ್ಲಿ ದೋಣಿ ದುರಂತ: ಇಬ್ಬರು ಮೀನುಗಾರರ ಮೃತದೇಹ ಪತ್ತೆ…!!

ವರದಿ: ಕುಮಾರ್ ನಾಯ್ಕ, ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಕುಂದಾಪುರ:

CHETAN KENDULI

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದ ತಾರಾಪತಿ ಸಮುದ್ರ ತೀರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಇಬ್ಬರು ನಾಪತ್ತೆಯಾದ ಘಟನೆ ನಡೆದಿದೆ.

ದೋಣಿಯಲ್ಲಿ ಏಳು ಮಂದಿ ಮೀನುಗಾರರಿದ್ದು. ಐವರು ಪ್ರಾಣಪಾಯದಿಂದ ಪಾರಾದ ಮೀನುಗಾರರು ವಿಜೇತ್, ಪ್ರವೀಣ, ಸಚಿನ್, ಸುಮಂತ, ವಾಸುದೇವ ಎಂದು ತಿಳಿದಿದೆ.

ನಾಪತ್ತೆಯಾದ ಮೀನುಗಾರರು ಶರಣ್ ( 25 ) ಮತ್ತು ಅಣ್ಣಪ್ಪ ( 30 ) ಈ ಇರ್ವರ ಮೃತ ದೇಹವು ಸಮುದ್ರ ತೀರದ ಅಮ್ಮನವರ ತೋಪ್ಪಲು ಪ್ರದೇಶದಲ್ಲಿ ದಿನಾಂಕ 18 ಶನಿವಾರ ಪತ್ತೆಯಾಗಿದೆ.

ಈ ದೋಣಿಯೂ ಶವಾಗಿ ಪತ್ತೆಯಾದ ಚರಣ್ ಎಂಬಾತನಿಗೆ ಸೇರಿದ್ದಾಗಿದೆ.ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ ಮೃತರ ಕುಟುಂಬಕ್ಕೆ 6 ಲಕ್ಷ ವೈಯಕ್ತಿಕ ಪರಿಹಾರ ಘೋಷಣೆ ಮಾಡಿದ್ದಾರೆ.

ಕುಂದಾಪುರ ಡಿ.ವೈ.ಎಸ್ಪಿ. ಶ್ರೀಕಾಂತ್ ಹಾಗೂ ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ ಘಟನಾಸ್ಥಳಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*