ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ…! ಖುಷಿಯಾದ ಬಹುಸಂಖ್ಯಾತರು…!!!

ವರದಿ: ಕಾಶೀನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

ನಾಲತವಾಡ:

CHETAN KENDULI

ಪಟ್ಟಣದ ಸರ್ಕಾರಿ ದೇಶಮುಖರ ಓಣಿ ಶಾಲೆಗೆ ಕಳೆದ ಜು.29ರಂದು ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾರ್ಥಿಗಳು ಶಾಲೆಗೆ ತೆರಳುವ ಗಲೀಜು ರಸ್ತೆಯನ್ನು ಶುಚಿಗೊಳಿಸುವುದು ಹಾಗೂ ಶಾಲೆಗೆ ತೆರಳುವ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯವರಿಗೆ ಲಿಖಿತ ಮನವಿ ಸಲ್ಲಿಸಿ ಆಗ್ರಹಿಸಿದ್ದರು.

 ಜೊತೆಗೆ ಶಾಲೆಯ ಸಮೀಪದಲ್ಲೇ ಇರುವ ಜಾಲಗಾರ ಮಸೀದಿಗೆ ಮುಂಬರುವ ಮೊಹರಮ್ ಹಬ್ಬದ ನಿಮಿತ್ತ ಸಾರ್ವಜನಿಕರು,ಅಲಾಯಿ ದೇವರು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು ದೇವರ ದಫನ ಕ್ರೀಯೆಗೆ ಬೇಕಾಗುವ ಕಟ್ಟಿಗೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ಇದೇ ಮಾರ್ಗವಾಗಿ ತೆಗೆದುಕೊಂಡು ಹೋಗುವದು ದುಸ್ಥರವಾದ ಹಿನ್ನೆಲೆಯಲ್ಲಿ ಜಾಲಗಾರ ಓಣಿಯವರೂ ಸಹ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿಯ ಸಹಕಾರದೊಂದಿಗೆ ರಸ್ತೆ ಅತಿಕ್ರಮಣ ಪ್ರವೇಶವನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು.



ಕಳೆದ 13 ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಎರಡು ಲಾರಿಗಳು ತಿರುಗುತ್ತಿದ್ದವು,ಇದೀಗ ಒಬ್ಬ ವ್ಯಕ್ತಿಯೂ ಈ ಮಾರ್ಗವಾಗಿ ತಿರುಗಾಡದಂತೆ ರಸ್ತೆಯ ಅತಿಕ್ರಮಣದಲ್ಲಿ ತಾ ಮುಂದು,ನಾ ಮುಂದು ಎಂದು ಎದುರು ಬದಿರಿನ ಎರಡು ಕುಟುಂಬಳ ಪರಸ್ಪರರ ಸ್ಪರ್ಧೆಗೆ ರಸ್ತೆ ಬಲಿಯಾಗಿತ್ತು,ರಸ್ತೆಯನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಮಾಡಿದ್ದ ಎರಡು ಕುಟುಂಬಗಳ ವಶವಾಗಿದ್ದ ಸರ್ಕಾರಿ ರಸ್ತೆಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.



ಈ ಮಾರ್ಗವಾಗಿ ನಾಲ್ಕು ವಾರ್ಡುಗಳ ಸುಮಾರು 5 ಸಾವಿರ ಜನ ಶೌಚಕ್ಕೆ,ದನಗಳ ತ್ಯಾಜ್ಯ ಸೇರಿದಂತೆ ತಿಪ್ಪೆಗೆ ಕಸ ಹಾಕಲು,ರೈತರು ಹೊಲ ಗದ್ದೆಗಳಿಗೆ ಹೋಗಿ ಬರುವ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಇದೂ ಒಂದಾಗಿತ್ತು,ರಸ್ತೆ ಅಗಲೀಕರಣದಿಂದ ಬಹುಸಂಖ್ಯಾತರಿಗೆ ಖುಷಿಯಾಯಿತು.

Be the first to comment

Leave a Reply

Your email address will not be published.


*